ಕೊರೋನಾ ನಿಯಂತ್ರಣಕ್ಕೆ 85 ಕೋಟಿ ಅನುದಾನ

By Kannadaprabha NewsFirst Published Oct 1, 2020, 7:28 AM IST
Highlights

ರಾಜ್ಯದಲ್ಲಿ ಕೊರೋನಾ ನಿಯಂತ್ರಣ ಮಾಡುವ ಸಲುವಾಗಿ ರಾಜ್ಯ ಸರ್ಕಾರದಿಂದ ಕೋಟಿ ಕೋಟಿ  ಹಣ ಬಿಡುಗಡೆ ಮಾಡಲಾಗಿದೆ

ಬೆಂಗಳೂರು (ಸೆ.01): ಕೊರೋನಾ ಸೋಂಕು ನಿಯಂತ್ರಣ ಕಾರ್ಯಗಳಿಗೆ ರಾಜ್ಯ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ಬಿಬಿಎಂಪಿ ಹಾಗೂ 24 ಜಿಲ್ಲಾಡಳಿತಗಳಿಗೆ ರಾಜ್ಯ ಸರ್ಕಾರ 85 ಕೋಟಿ ರು. ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿದೆ. 

ಇದರಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಅತಿ ಹೆಚ್ಚು 25 ಕೋಟಿ ರು, ಬೆಂಗಳೂರು ನಗರ ಮತ್ತು ತುಮಕೂರು ಜಿಲ್ಲೆಗೆ ತಲಾ 5 ಕೋಟಿ ರು, ಉಳಿದ ಜಿಲ್ಲೆಗಳಿಗೆ ಕನಿಷ್ಠ 1 ಕೋಟಿಯಿಂದ 3 ಕೋಟಿ ವರೆಗೆ ಅನುದಾನ ಬಿಡುಗಡೆ ಮಾಡಿದೆ.

 ಕೋವಿಡ್‌ ನಿಯಂತ್ರಣ ಕಾರ್ಯಗಳಿಗೆ ರಾಜ್ಯ ಪ್ರಕೃತಿ ವಿಕೋಪ ಪರಿಹಾರ ನಿಧಿಯ (ಎಸ್‌ಡಿಆರ್‌ಎಫ್‌) ಶೇ.50ರಷ್ಟುಹಣ ಬಳಕೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿತ್ತು. 

ಕರ್ನಾಟಕದಲ್ಲಿ ಮುಂದುವರೆದ ಕೊರೋನಾ ಅಟ್ಟಹಾಸ: 6 ಲಕ್ಷ ಗಡಿದಾಟಿದ ಸೋಂತರ ಸಂಖ್ಯೆ ..

ಈ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ (ವಿಪ್ಪತ್ತು ನಿರ್ವಹಣೆ) ಮೂಲಕ ಎಸ್‌ಡಿಆರ್‌ಎಫ್‌ ನಿಂದ ಮಾಚ್‌ರ್‍ನಲ್ಲಿ ವಿವಿಧ ಜಿಲ್ಲೆಗಳಿಗೆ 236 ಕೋಟಿ ರು, ಮೇ ತಿಂಗಳಲ್ಲಿ 50 ಕೋಟಿ ರು ಬಿಡುಗಡೆ ಮಾಡಿತ್ತು. ಈಗ ಹೆಚ್ಚುವರಿಯಾಗಿ ಇನ್ನೂ 85 ಕೋಟಿ ರು ಬಿಡುಗಡೆ ಮಾಡಿದೆ.

click me!