
ಶಿವಕುಮಾರ ಕುಷ್ಟಗಿ
ಗದಗ (ಫೆ.2): ಅಯೋಧ್ಯೆಯಲ್ಲಿ ಬಾಲರಾಮನ ಪ್ರತಿಷ್ಠಾಪನೆಯ ಚರಿತ್ರಾರ್ಹವಾದ ಜನವರಿ 22ರಂದೇ ಗದಗ ಜಿಲ್ಲೆಯಲ್ಲಿ 62 ಮಕ್ಕಳು ಜನಿಸಿವೆ! ಅವುಗಳಲ್ಲಿ 10 ಸಿಜೇರಿಯನ್, ಉಳಿದ್ದೆಲ್ಲವುಗಳು ಸಾಮಾನ್ಯ ಹೆರಿಗೆಗಳು. ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ದಿನದಂದೇ ಮಗುವನ್ನು ಪಡೆಯಲು ಹಲವರು ಸಿಜೇರಿಯನ್ ಮೂಲಕ ಮುಹೂರ್ತ ಫಿಕ್ಸ್ ಮಾಡಿದ್ದರು. ಇದೊಂದು ಸ್ಮರಣಾರ್ಹ, ಸದಾ ನೆನಪಿನಲ್ಲಿರುವ ದಿನ, ಅಂದು ಹುಟ್ಟಿದ ಮಕ್ಕಳು ದೇಶಕ್ಕೆ ಆಸ್ತಿಯಾಗುತ್ತಾರೆ ಎಂಬ ನಂಬಿಕೆ ಅವರದಾಗಿತ್ತು.
62 ಮಕ್ಕಳು ಜನನ: ಜಿಲ್ಲೆಯ 7 ತಾಲೂಕುಗಳ ವ್ಯಾಪ್ತಿಯಲ್ಲಿ ಜ. 22ರ, 24 ಗಂಟೆ ಅವಧಿಯಲ್ಲಿ ಒಟ್ಟು 62 ಮಕ್ಕಳ ಜನನವಾಗಿವೆ. ಅವುಗಳಲ್ಲಿ 28 ಗಂಡು ಹಾಗೂ 34 ಹೆಣ್ಣು ಮಗು ಇವೆ. ಈ ಮಕ್ಕಳ ಬಗ್ಗೆ ಪಾಲಕರಲ್ಲಿ ಅತೀವ ಸಂತಸ ಮತ್ತು ಇವರೆಲ್ಲಾ ದೇವರ ಕೊಡುಗೆ ಎನ್ನುವ ಧನ್ಯತಾ ಭಾವ ವ್ಯಕ್ತಪಡಿಸುತ್ತಿದ್ದಾರೆ.
ಜನರ ಮನೆ ಬಾಗಿಲಿಗೆ ಆಡಳಿತ ಸರ್ಕಾರದ ಉದ್ದೇಶ: ಸಚಿವ ಎಚ್.ಕೆ.ಪಾಟೀಲ್
ಅಚ್ಚರಿಯೆಂದರೆ ಹಿಂದೂಯೇತರ ಧರ್ಮಿಯ ಮಕ್ಕಳೂ ಇವೆ. 10 ಜನರಿಗೆ ಸಿಜೇರಿಯನ್ ಮಾಡಲಾಗಿದೆ. ಅದು ಕೂಡಾ ಹೆರಿಗೆಯಿಂದ ತಾಯಂದಿರ ಆರೋಗ್ಯಕ್ಕೆ ತೊಂದರೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಮಾತ್ರ ನಡೆಸಲಾಗಿದೆಯೇ ಹೊರತು, ಉದ್ದೇಶಪೂರ್ವಕವಾಗಿ ಮಾಡಿದ್ದು ಅಲ್ಲ ಎನ್ನುವುದು ವೈದ್ಯರ ಪ್ರತಿಕ್ರಿಯೆ.ಜ. 22ರಂದು ಜಿಲ್ಲೆಯ ಸರ್ಕಾರಿ, ಖಾಸಗಿ ಆಸ್ಪತ್ರೆಗಳು ಸೇರಿದಂತೆ ಒಟ್ಟು 62 ಮಕ್ಕಳು ಜನಿಸಿವೆ. ಎಲ್ಲಾ ಮಕ್ಕಳು ಆರೋಗ್ಯವಾಗಿದ್ದಾರೆ ಡಿಎಚ್‌ಒ ಡಾ. ಎಸ್. ನೀಲಗುಂದ ಹೇಳಿದ್ದಾರೆ.
2024 ಜಗತ್ತಿಗೇ ಒಳ್ಳೆದಲ್ಲ! ದುರಂತಗಳ ಬಗ್ಗೆ ಸ್ಫೋಟಕ ಭವಿಷ್ಯ ನುಡಿದ ಕೋಡಿಮಠದ ಸ್ವಾಮೀಜಿ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ