ಕೇಂದ್ರದಿಂದ 5,326 ಕೋಟಿ ರು. ಬರ ಪರಿಹಾರ ಕೇಳಲು ಅಸ್ತು

Published : Oct 20, 2023, 06:44 AM IST
ಕೇಂದ್ರದಿಂದ 5,326 ಕೋಟಿ ರು. ಬರ ಪರಿಹಾರ ಕೇಳಲು ಅಸ್ತು

ಸಾರಾಂಶ

ರಾಜ್ಯದಲ್ಲಿ ತೀವ್ರ ಮುಂಗಾರು ಕೊರತೆಯಿಂದ ಮೊದಲ ಹಂತದಲ್ಲಿ ಬರ ಘೋಷಣೆಯಾಗಿದ್ದ 195 ತಾಲೂಕುಗಳ ಜತೆಗೆ 21 ಹೆಚ್ಚುವರಿ ತಾಲೂಕುಗಳಲ್ಲಿ ಬರ ಘೋಷಣೆ ಹಾಗೂ ಬರ ಪೀಡಿತ ತಾಲೂಕುಗಳಲ್ಲಿ ಉಂಟಾಗಿರುವ ಒಟ್ಟು ನಷ್ಟ, ಪರಿಹಾರ ಕ್ರಮಗಳಿಗಾಗಿ ಕೇಂದ್ರದ ಬಳಿ 5,326.87 ಕೋಟಿ ರು. ಪರಿಷ್ಕೃತ ಪರಿಹಾರಕ್ಕೆ ಬೇಡಿಕೆ ಸಲ್ಲಿಸಲು ಸಚಿವ ಸಂಪುಟ ಸಭೆ ನಿರ್ಧಾರ ಮಾಡಿದೆ.

ಬೆಂಗಳೂರು (ಅ.20) :  ರಾಜ್ಯದಲ್ಲಿ ತೀವ್ರ ಮುಂಗಾರು ಕೊರತೆಯಿಂದ ಮೊದಲ ಹಂತದಲ್ಲಿ ಬರ ಘೋಷಣೆಯಾಗಿದ್ದ 195 ತಾಲೂಕುಗಳ ಜತೆಗೆ 21 ಹೆಚ್ಚುವರಿ ತಾಲೂಕುಗಳಲ್ಲಿ ಬರ ಘೋಷಣೆ ಹಾಗೂ ಬರ ಪೀಡಿತ ತಾಲೂಕುಗಳಲ್ಲಿ ಉಂಟಾಗಿರುವ ಒಟ್ಟು ನಷ್ಟ, ಪರಿಹಾರ ಕ್ರಮಗಳಿಗಾಗಿ ಕೇಂದ್ರದ ಬಳಿ 5,326.87 ಕೋಟಿ ರು. ಪರಿಷ್ಕೃತ ಪರಿಹಾರಕ್ಕೆ ಬೇಡಿಕೆ ಸಲ್ಲಿಸಲು ಸಚಿವ ಸಂಪುಟ ಸಭೆ ನಿರ್ಧಾರ ಮಾಡಿದೆ.

ಅಲ್ಲದೆ, ಬರ ಪರಿಹಾರ ಕುರಿತು ಖುದ್ದು ಚರ್ಚಿಸಲು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಅಕ್ಟೋಬರ್‌ ಮೊದಲ ವಾರದಿಂದ ಪ್ರಯತ್ನಿಸುತ್ತಿದ್ದರೂ ಭೇಟಿಗೆ ಸಮಯಾವಕಾಶ ನೀಡದ ಕೇಂದ್ರ ಕೃಷಿ ಸಚಿವರ ನಡೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀವ್ರ ಕಳವಳ ವ್ಯಕ್ತವಾಗಿದೆ.

ಸಚಿವ ಮಲ್ಲಿಕಾರ್ಜುನ ವಿರುದ್ಧ ವನ್ಯಜೀವಿ ಪೋಷಣೆ ಕೇಸ್ ರದ್ದು

ಈ ಬಗ್ಗೆ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ. ಪಾಟೀಲ್‌, ಸೆ.22 ರ ಸಚಿವ ಸಂಪುಟದಲ್ಲಿ 195 ತಾಲೂಕುಗಳ ವ್ಯಾಪ್ತಿಯಲ್ಲಿ ಉಂಟಾಗಿರುವ ನಷ್ಟ ಹಾಗೂ ಪರಿಹಾರ ಕ್ರಮಗಳಿಗೆ 4,860 ರು. ನೆರವು ನೀಡುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಲು ತೀರ್ಮಾನಿಸಲಾಗಿತ್ತು. ನೇತೃತ್ವದಲ್ಲಿ ಕೃಷಿ, ತೋಟಗಾರಿಕೆ ಅಧಿಕಾರಿಗಳೊಂದಿಗೆ ಜಂಟಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸಿತ್ತು. ಅದರ ಪ್ರಕಾರ ಇತ್ತೀಚೆಗೆ 21 ತಾಲೂಕುಗಳಲ್ಲೂ ಬರ ಘೋಷಣೆ ಮಾಡಿ ಸರ್ಕಾರ ಆದೇಶ ಮಾಡಿತ್ತು. ಹೀಗಾಗಿ ಪಶುಗಳ ಆರೈಕೆ, ಮೇವು ಹಾಗೂ ಔಷಧಗಳ ಖರೀದಿಗೆ 355 ಕೋಟಿ ರು., ಕುಡಿಯುವ ನೀರಿನ ಪೂರೈಕೆಗೆ 554 ಕೋಟಿ ರು. ಸೇರಿ ಒಟ್ಟು 5326.87 ಕೋಟಿ ರು. ಬಿಡುಗಡೆಗೆ ಕೇಂದ್ರವನ್ನು ಒತ್ತಾಯಿಸಲು ನಿರ್ಧರಿಸಲಾಗಿದೆ. ಜತೆಗೆ ಈ ಬಗ್ಗೆ ಕೇಂದ್ರ ಸಚಿವರೊಂದಿಗೆ ಖುದ್ದು ಕೃಷ್ಣಬೈರೇಗೌಡ ಅವರೇ ಮಾತುಕತೆ ನಡೆಸಿ ಪರಿಹಾರ ಪಡೆಯಲು ಪ್ರಯತ್ನಿಸುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಬಳಿಕ ಇನ್ನೂ 21 ತಾಲೂಕುಗಳಲ್ಲಿ ತೀವ್ರ ಬರ ಪರಿಸ್ಥಿತಿ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕೃಷಿ, ತೋಟಗಾರಿಕೆ ಅಧಿಕಾರಿಗಳೊಂದಿಗೆ ಜಂಟಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸಿತ್ತು. ಅದರ ಪ್ರಕಾರ ಇತ್ತೀಚೆಗೆ 21 ತಾಲೂಕುಗಳಲ್ಲೂ ಬರ ಘೋಷಣೆ ಮಾಡಿ ಸರ್ಕಾರ ಆದೇಶ ಮಾಡಿತ್ತು.

ಇದರ ಮುಂದುವರೆದ ಭಾಗವಾಗಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ 21 ತಾಲೂಕುಗಳಲ್ಲಿ 10 ತಾಲೂಕು ತೀವ್ರ ಬರ ಪೀಡಿತ, ಉಳಿದ 11 ತಾಲೂಕು ಸಾಧಾರಣ ಬರ ಪೀಡಿತ ಎಂದು ತೀರ್ಮಾನಿಸಲಾಗಿದೆ.

ಜತೆಗೆ 216 ತಾಲೂಕುಗಳಲ್ಲಿ ಒಟ್ಟು ಕೃಷಿ, ತೋಟಗಾರಿಕೆ‌ ಬೆಳೆ ನಷ್ಟ ಅಂದಾಜು 33,770 ಕೋಟಿ ರು. ಆಗಿದೆ. ಈ ಪೈಕಿ ಎನ್‌ಡಿಆರ್‌ಎಫ್‌ ನಿಯಮದ ಪ್ರಕಾರ ರಾಜ್ಯ ಸರ್ಕಾರಕ್ಕೆ 4,414 ಕೋಟಿ ಕೃಷಿ ನಷ್ಟ ಪರಿಹಾರ ನೀಡಬೇಕು ಎಂದು ಕೇಂದ್ರಕ್ಕೆ ಬೇಡಿಕೆ ಸಲ್ಲಿಸಲು ನಿರ್ಧರಿಸಲಾಯಿತು.

 

ಸರ್ಕಾರದ ವಿರುದ್ಧ ಇಂದು, ನಾಳೆ ರಾಜ್ಯವ್ಯಾಪಿ ಬಿಜೆಪಿ ಪ್ರತಿಭಟನೆ

21 ತಾಲೂಕುಗಳು ಯಾವುವು?

ಚಾಮರಾಜನಗರ, ಯಳಂದೂರು, ಕೃಷ್ಣರಾಜನಗರ, ಬೆಳಗಾವಿ, ಖಾನಾಪುರ, ಮುಂಡರಗಿ, ಬ್ಯಾಡಗಿ, ಹಾನಗಲ್‌, ಶಿಗ್ಗಾವ್‌, ಕಲಘಟಗಿ, ಅಳ್ನಾವರ, ಅಣ್ಣಿಗೇರಿ, ಆಲೂರು, ಅರಸೀಕೆರೆ, ಹಾಸನ, ಮೂಡಿಗೆರೆ, ತರೀಕೆರೆ, ಪೊನ್ನಂಪೇಟೆ, ಹೆಬ್ರಿ, ಸಿದ್ದಾಪುರ, ದಾಂಡೇಲಿ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡಿಕೆಸು ಹೆಸರಿನಲ್ಲಿ ಕೋಟ್ಯಂತರ ವಂಚನೆ ಪ್ರಕರಣ.. 'ಬಂಗಾರಿ' ಕೇಸ್‌ನಲ್ಲಿ ನಟ ಧರ್ಮಗೆ ಧ್ವನಿ ಪರೀಕ್ಷೆ?
ಬೆಳಗಾವಿಯ 31 ಕೃಷ್ಣಮೃಗ ಸಾವಿಗೆ ಸಿಬ್ಬಂದಿ ನಿರ್ಲಕ್ಷ್ಯ ಕಾರಣವಲ್ಲ: ಸಚಿವ ಈಶ್ವರ್ ಖಂಡ್ರೆ