ಹೊರವಲಯದ ನೀರುಮಾರ್ಗ ಮಾಣೂರು ಶ್ರೀ ಸುಬ್ರಹ್ಮಣ್ಯ ದೇಗುಲಕ್ಕೆ ಪ್ರತಿನಿತ್ಯ ಬಂದು ನರ್ತಿಸುವ ನವಿಲಿಗೆ ಇಲ್ಲಿನ ಅರ್ಚಕರು ಈಗ ಗೆಜ್ಜೆ ಕಟ್ಟಿದ್ದಾರೆ. ನವಿಲು ಖುಷಿಯಿಂದ ನರ್ತನ ಮಾಡುತ್ತಿದೆ. ನವಿಲಿನ ಗೆಜ್ಜೆ ನರ್ತನದ ವಿಡಿಯೋ ಈಗ ವೈರಲ್ ಆಗಿದೆ. ಹಿಂದೆ ಇದೇ ನವಿಲು ಅರ್ಚಕರ ಮನೆಗೆ ಬಂದು ನಿತ್ಯವೂ ಕುಣಿಯುವ ವಿಡಿಯೋ ವೈರಲ್ ಆಗಿತ್ತು.
ಮಂಗಳೂರು (ಅ.20): ಹೊರವಲಯದ ನೀರುಮಾರ್ಗ ಮಾಣೂರು ಶ್ರೀ ಸುಬ್ರಹ್ಮಣ್ಯ ದೇಗುಲಕ್ಕೆ ಪ್ರತಿನಿತ್ಯ ಬಂದು ನರ್ತಿಸುವ ನವಿಲಿಗೆ ಇಲ್ಲಿನ ಅರ್ಚಕರು ಈಗ ಗೆಜ್ಜೆ ಕಟ್ಟಿದ್ದಾರೆ. ನವಿಲು ಖುಷಿಯಿಂದ ನರ್ತನ ಮಾಡುತ್ತಿದೆ. ನವಿಲಿನ ಗೆಜ್ಜೆ ನರ್ತನದ ವಿಡಿಯೋ ಈಗ ವೈರಲ್ ಆಗಿದೆ. ಹಿಂದೆ ಇದೇ ನವಿಲು ಅರ್ಚಕರ ಮನೆಗೆ ಬಂದು ನಿತ್ಯವೂ ಕುಣಿಯುವ ವಿಡಿಯೋ ವೈರಲ್ ಆಗಿದೆ.
ಗೆಜ್ಜೆ ಕಟ್ಟಿಕೊಂಡು ಗಲ್ ಗಲ್ ಕುಣಿಯುವ ನಾಟ್ಯ ಮಯೂರಿ ನೃತ್ಯ ನೋಡಲೆಂದೇ ದೇವಳದ ಭಕ್ತರು ಕಾದು ಕುಳಿತಿರುತ್ತಾರೆ. ಮಯೂರು ನರ್ತಿಸುತ್ತಿದ್ದರೆ ಗೆಜ್ಜೆ ಸದ್ದಿಗೆ ಭಕ್ತರ ಮೈಮರೆಯುವಂತೆ ಮಾಡುತ್ತೆ. ದೇವಸ್ಥಾನಕ್ಕೆ ಬರುವ ಭಕ್ತರು ನಾಟ್ಯ ಮಯೂರಿ ನೃತ್ಯ ನೋಡಲೆಂದೇ ಬರುತ್ತಾರೆ. ದೇವಸ್ಥಾನದೊಳಗೆ ಬಂದು ನೃತ್ಯ ಮಾಡುವ ಮಯೂರಿ, ಸಂಜೆಯಾಗ್ತಿದ್ದಂತೆ ಅರ್ಚಕರ ಮನೆಗೆ ಹೋಗಿ ಅಲ್ಲಿಯೂ ನೃತ್ಯ ಮಾಡುತ್ತೆ. ಸದ್ಯ ಈ ನಟ್ಯ ಮಯೂರಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಜನರು ಮನಸೋತಿದ್ದಾರೆ.
ಮೊಟ್ಟೆ ಕಳ್ಳಿಯರ ಮೇಲೆ ನವಿಲಿನ ರೋಷಾವೇಷ: ಈ ಜನ್ಮದಲ್ಲಿ ಅವ್ರು ಮೊಟ್ಟೆ ತಿನ್ನಲ್ಲ!