Dharmasthala Laksha Deepotsava : ಇಂದಿನಿಂದ 5 ದಿನ ಧರ್ಮಸ್ಥಳ ಲಕ್ಷ ದೀಪೋತ್ಸವ!

By Kannadaprabha NewsFirst Published Nov 29, 2021, 6:37 AM IST
Highlights

*ಮೊದಲ ದಿನ 20 ಸಾವಿರ ಜನರಿಂದ ಶ್ರೀಕ್ಷೇತ್ರಕ್ಕೆ ಪಾದಯಾತ್ರೆ
*ಡಿ.2ಕ್ಕೆ ಸರ್ವಧರ್ಮ ಸಮ್ಮೇಳನ : 89ನೇ ಸಾಹಿತ್ಯ ಸಮ್ಮೇಳನ
*ಅಧಿವೇಶನ  ಉದ್ಘಾಟಿಸಲಿರುವ ರಾಜ್ಯಪಾಲ ಗೆಹಲೋತ್‌ 
 

ಬೆಳ್ತಂಗಡಿ(ನ.29): ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದ ಲಕ್ಷದೀಪೋತ್ಸವದ (Dharmasthala  Laksha Deepotsava 2021) ಕಾರ್ಯಕ್ರಮಗಳು ಸೋಮವಾರದಿಂದ ಆರಂಭವಾಗಲಿವೆ. ಐದು ದಿನ ನಡೆಯುವ ದೀಪೋತ್ಸವಕ್ಕೆ ಸಕಲ ತಯಾರಿಗಳನ್ನು ಮಾಡಲಾಗಿದೆ. ಮಂಜುನಾಥ ಸ್ವಾಮಿ ದೇಗುಲ, ಹೆಗ್ಗಡೆಯವರ ಬೀಡು, ಮಹಾದ್ವಾರ ಸಹಿತ ಸಂಪೂರ್ಣ ಕ್ಷೇತ್ರವನ್ನು ವಿದ್ಯುದ್ದೀಪಗಳಿಂದ ಆಕರ್ಷಕವಾಗಿ ಸಿಂಗರಿಸಲಾಗಿದೆ. ಸೋಮವಾರ ಸಂಜೆ ಉಜಿರೆ (Ujire) ಜನಾರ್ದನ ಸ್ವಾಮಿ ದೇವಸ್ಥಾನದಿಂದ ತಾಲೂಕಿನ ಸುಮಾರು 20 ಸಾವಿರಕ್ಕೂ ಹೆಚ್ಚು ಭಕ್ತರು ಪಾದಯಾತ್ರೆಯ ಮೂಲಕ ಧರ್ಮಸ್ಥಳಕ್ಕೆ ಬಂದು ದೇವರ ದರ್ಶನ ಪಡೆಯಲಿದ್ದಾರೆ. ಬಳಿಕ ಪಾದಯಾತ್ರಿಗಳನ್ನುದ್ದೇಶಿಸಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು (Veerendra Heggade) ಮಾತನಾಡಲಿದ್ದಾರೆ. 9ನೇ ವರ್ಷದ ಪಾದಯಾತ್ರೆ ಇದಾಗಿದ್ದು, ಶ್ರೀ ಮಂಜುನಾಥೇಶ್ವರ ಪಾದಯಾತ್ರಾ ಸಮಿತಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಬಳಿಕ ರಾತ್ರಿ ಮಂಜುನಾಥ ಸ್ವಾಮಿಯ ಹೊಸಕಟ್ಟೆಉತ್ಸವ ನೆರವೇರಲಿದೆ.

89ನೇ ಸರ್ವಧರ್ಮ ಸಮ್ಮೇಳನ:

ಡಿ.2ರಂದು ಸಂಜೆ ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯುವ ಸರ್ವಧರ್ಮ ಸಮ್ಮೇಳನದ 89ನೇ ಅಧಿವೇಶನವನ್ನು ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ (Thawar Chand Gehlot) ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಬೆಂಗಳೂರಿನ ಎಸ್‌.ವ್ಯಾಸ ಯೋಗ ವಿವಿಯ ವಿಶ್ರಾಂತ ಕುಲಪತಿ ಪ್ರೊ.ರಾಮಚಂದ್ರ ಜಿ.ಭಟ್ಟವಹಿಸಲಿದ್ದಾರೆ.

Bidar| ಮಹಿಳೆಯರ ಸಬಲೀಕರಣವೇ ನಮ್ಮ ಮುಖ್ಯಗುರಿ: ಡಾ.ವೀರೇಂದ್ರ ಹೆಗ್ಗಡೆ

ಅದೇ ದಿನ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ತ್ರಿಶೂರ್‌ ಬ್ರದರ್ಸ್‌ ಅವರಿಂದ ಶಾಸ್ತ್ರೀಯ ಸಂಗೀತ, ಸನಾತನ ನಾಟ್ಯಾಲಯ ಇವರಿಂದ ಪುಣ್ಯ ಭೂಮಿ ಭಾರತ ಎಂಬ ನುಡಿ ನಾದ ನಾಟ್ಯಾಮೃತ ಪ್ರಸ್ತುತಗೊಳ್ಳಲಿದೆ. ರಾತ್ರಿ ಕಂಚಿಮಾರುಕಟ್ಟೆಉತ್ಸವ ಸಂಪನ್ನಗೊಳ್ಳಲಿದೆ.

89ನೇ ಸಾಹಿತ್ಯ ಸಮ್ಮೇಳನ:

ಸಂಜೆ 5 ಗಂಟೆಗೆ ಅಮೃತವರ್ಷಿಣಿ ಸಭಾಭವನದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ. ಸುಧಾಕರ್‌ (Dr. K Sudhakar) 89ನೇ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಹಿರಿಯ ಸಾಹಿತಿ ಡಾ.ಮಲ್ಲೇಪುರಂ ಜಿ.ವೆಂಕಟೇಶ್‌ ಅಧ್ಯಕ್ಷತೆ ವಹಿಸಲಿದ್ದಾರೆ. ಅಂದು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳ (Cultural Programme) ಅಂಗವಾಗಿ ಬೆಂಗಳೂರಿನ ಸಪ್ತಸ್ವರ ಮತ್ತು ಕ್ರಿಯೇಶಸ್ಸ್‌ ಕಲಾವಿದರಿಂದ ನೃತ್ಯ ಸಂಭ್ರಮ, ಬಳಿಕ ಶ್ವೇತಾ ದೇವನಹಳ್ಳಿ ಮತ್ತು ತಂಡದವರಿಂದ ಗಾನಲಹರಿ ಪ್ರಸ್ತುತಗೊಳ್ಳಲಿದೆ. ರಾತ್ರಿ ಗೌರಿಮಾರುಕಟ್ಟೆಉತ್ಸವ ಸಂಪನ್ನಗೊಳ್ಳಲಿದೆ. ಡಿ. 4ರಂದು ಸಂಜೆ ಶ್ರೀ ಚಂದ್ರನಾಥ ಸ್ವಾಮಿ ಸಮವಸರಣ ಪೂಜೆ ನೆರವೇರಲಿದೆ.

18 ಕುಟುಂಬಗಳಿಗೆ ಧರ್ಮಸ್ಥಳ ಕ್ಷೇತ್ರದಿಂದ ಭೂಮಿ ದಾನ

ಉಪ್ಪಿನಂಗಡಿ (Uppinangadi) ಗ್ರಾಮದ ಕದಿಕ್ಕಾರು ಬೀಡು ಎಂಬಲ್ಲಿನ ಶ್ರೀ ಕ್ಷೇತ್ರ ಧರ್ಮಸ್ಥಳದ (Shri Dharmasthala) ಅಧೀನದಲ್ಲಿದ್ದ 1.6 ಎಕ್ರೆ ಜಾಗದಲ್ಲಿ ಹಲವು ವರ್ಷಗಳಿಂದ ವಾಸ ಮಾಡುತ್ತಿರುವ ಪರಿಶಿಷ್ಟ ಜಾತಿಗೆ ಸೇರಿದ 18 ಕುಟುಂಬಗಳಿಗೆ ಶ್ರೀ ಕ್ಷೇತ್ರದ ವತಿಯಿಂದ ಅವರು ಹೊಂದಿರುವ ಜಮೀನನ್ನು (Land) ದಾನ ರೂಪದಲ್ಲಿ ನೀಡಲಾಗಿದ್ದು, ಭೂಮಿಯ ಹಕ್ಕುಪತ್ರ ವಿತರಣೆ ಸಹಾಯಕ ಆಯುಕ್ತರ ಕಚೇರಿ ಸಭಾಂಗಣದಲ್ಲಿ ನಡೆಯಿತು. ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿ (Sub Rigistrar Office) ಭೂ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಲಾಯಿತು. ಬಳಿಕ ಶ್ರೀ ಕ್ಷೇತ್ರ ಧರ್ಮಸ್ಥಳದ ಪರವಾಗಿ ಡಿ.ಹರ್ಷೇಂದ್ರ ಕುಮಾರ್‌ (D Harshendra kumar) ಅವರು 18 ಕುಟುಂಬಗಳಿಗೆ ಹಕ್ಕುಪತ್ರ (Documents) ಹಸ್ತಾಂತರಿಸಿದರು. ಇದರೊಂದಿಗೆ ಎಲ್ಲ ಕುಟುಂಬಕ್ಕೆ ವಸ್ತ್ರದಾನವನ್ನು ಮಾಡಲಾಯಿತು.

ಬೆಳ್ತಂಗಡಿ: 120 ಕೆರೆ ಹೂಳೆತ್ತಲು ವೀರೇಂದ್ರ ಹೆಗ್ಗಡೆ ಯೋಜನೆ

ಉಳುವನೆ ಹೊಲದೊಡೆಯ ಕಾನೂನು (Land-reforms Act) ಜಾರಿಯ ಸಂದರ್ಭದಲ್ಲಿ ಧರ್ಮಸ್ಥಳ ಕ್ಷೇತ್ರಕ್ಕೆ ಸೇರಿದ 3600 ಎಕರೆ ಜಮೀನನ್ನು ಗೇಣಿದಾರರಿಗೆ ನೀಡಲಾಗಿತ್ತು. ಆ ಕಾಲದಿಂದಲೇ ಕದಿಕ್ಕಾರು ಬೀಡಿನ ಜಾಗದಲ್ಲಿ ವಾಸವಾಗಿದ್ದ ಕುಟುಂಬಗಳು ಕ್ಷೇತ್ರದ ಮೇಲಿನ ಭಕ್ತಿಯಿಂದ ಡಿಕ್ಲೆರೇಷನ್‌ಗೆ ಅರ್ಜಿ ಹಾಕಿರಲಿಲ್ಲ. ಆ ಕುಟುಂಬಕ್ಕೆ ಕ್ಷೇತ್ರದ ವತಿಯಿಂದ ಹಕ್ಕುಪತ್ರ ಮಾಡಿ ದಾನ ರೂಪದಲ್ಲಿ ಜಮೀನು ನೀಡಲಾಗಿದೆ ಎಂದು ಡಿ.ಹರ್ಷೇಂದ್ರ ಕುಮಾರ್‌ ಹೇಳಿದ್ದಾರೆ.

click me!