ಕರ್ನಾಟಕದಲ್ಲಿ 8 ತಿಂಗಳಲ್ಲಿ 8 ಲಕ್ಷ ಕೊರೋನಾ ಕೇಸ್..!

By Suvarna News  |  First Published Oct 25, 2020, 8:40 PM IST

ರಾಜ್ಯದಲ್ಲಿ ಕಳೆದ ಎಂಟು ತಿಂಗಳಿನಿಂದ ಕಾಡುತ್ತಿರುವ ಮಹಾಮಾರಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ 8 ಲಕ್ಷ ಗಡಿ ದಾಟಿದೆ.


ಬೆಂಗಳೂರು, (ಅ.25): ಕರ್ನಾಟಕದಲ್ಲಿ ಇಂದು (ಭಾನುವಾರ)  4439  ಕೊರೋನಾ ಪಾಸಿಟಿವ್ ಕೇಸ್‌ಗಳು ಪತ್ತೆಯಾಗಿದ್ದು, 10106 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.

ರಾಜ್ಯದಲ್ಲಿ ಕೊರೋನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆಯೂ ಕಡಿಮೆಯಾಗಿದೆ. ಒಂದು ದಿನದಲ್ಲಿ 32 ಜನರು ಮಹಾಮಾರಿಗೆ ಬಲಿಯಾಗಿದ್ದರೆ, ಸಾವಿನ ಸಂಖ್ಯೆ 10905ಕ್ಕೆ ಏರಿಕೆಯಾಗಿದೆ. 

Tap to resize

Latest Videos

undefined

ಕೊರೋನಾ ಅಂತ್ಯ ಯಾವಾಗ? ಇಲ್ಲಿದೆ ಉತ್ತರ 

ಸದ್ಯ 802818 ಸೋಂಕಿತ ಪ್ರಕರಣಗಳ ಪೈಕಿ 710843 ಸೋಂಕಿತರು ಈಗಾಗಲೇ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಉಳಿದಂತೆ ರಾಜ್ಯದಲ್ಲಿ 81050 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಇಲಾಖೆ ಮಾಹಿತಿ ನೀಡಿದೆ.

ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲೇ 17729 ಜನರನ್ನು ರಾಪಿಡ್ ಆಂಟಿಜೆನ್ ಡಿಟೆಕ್ಷನ್ ತಪಾಸಣೆಗೆ ಒಳಪಡಿಸಲಾಗಿದ್ದು, 82782 ಜನರಿಗೆ RT-PCR ವೈದ್ಯಕೀಯ ತಪಾಸಣೆ ನಡೆಸಲಾಗಿದೆ. ಒಂದೇ ದಿನ 100511 ಜನರನ್ನು ಕೊವಿಡ್-19 ಟೆಸ್ಟ್ ಗೆ ಒಳಪಡಿಸಲಾಗಿದೆ. ರಾಜ್ಯದಲ್ಲಿ ಇದುವರೆಗೂ 73,81,601 ಜನರಿಗೆ ಕೊವಿಡ್-19 ತಪಾಸಣೆಗೆ ಒಳಪಡಿಸಲಾಗಿದೆ.

ಜಿಲ್ಲಾವಾರು ಕೇಸ್
ಬಾಗಲಕೋಟೆ 41, ಬಳ್ಳಾರಿ 132, ಬೆಳಗಾವಿ46, ಬೆಂಗಳೂರು ಗ್ರಾಮಾಂತರ 234, ಬೆಂಗಳೂರು 2468, ಬೀದರ್ 7, ಚಾಮರಾಜನಗರ 22, ಚಿಕ್ಕಬಳ್ಳಾಪುರ 50, ಚಿಕ್ಕಮಗಳೂರು 36, ಚಿತ್ರದುರ್ಗ 99, ದಕ್ಷಿಣ ಕನ್ನಡ 139, ದಾವಣಗೆರೆ 72, ಧಾರವಾಡ 65, ಗದಗ 22, ಹಾಸನ 103, ಹಾವೇರಿ 9, ಕಲಬುರಗಿ 62, ಕೊಡಗು 35, ಕೋಲಾರ 49, ಕೊಪ್ಪಳ 52, ಮಂಡ್ಯ 86, ಮೈಸೂರು 140, ರಾಯಚೂರು 30, ರಾಮನಗರ 23, ಶಿವಮೊಗ್ಗ 32, ತುಮಕೂರು 141, ಉಡುಪಿ 117, ಉತ್ತರ ಕನ್ನಡ 46, ವಿಜಯಪುರ 49, ಯಾದಗಿರಿ 32, ಸೋಂಕಿತರ ಪ್ರಕರಣಗಳು ಪತ್ತೆಯಾಗಿವೆ.

click me!