ಅ. 28ರ ವೇಳೆಗೆ ಮುಂಗಾರು ಅಂತ್ಯಗೊಂಡು ಹಿಂಗಾರು ಮಳೆ ಆರಂಭವಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ನಿರ್ದೇಶಕ ಸಿ.ಎಸ್.ಪಾಟೀಲ್ ತಿಳಿಸಿದ್ದಾರೆ.
ಬೆಂಗಳೂರು (ಅ.25): ರಾಜ್ಯದಲ್ಲಿ ಈಗಾಗಲೇ ಆರಂಭವಾಗಬೇಕಿದ್ದ ಹಿಂಗಾರು ಮಳೆ ತಡವಾಗಿ ಅ.28ರ ನಂತರ ಎದುರಾಗುವ ಸಾಧ್ಯತೆ ಇದೆ.
ಪ್ರತಿ ವರ್ಷದಂತೆ ಈ ವರ್ಷ ಹಿಂಗಾರು ಮಳೆ ರಾಜ್ಯದಲ್ಲಿ ಅ. 15ರ ನಂತರವೇ (ಅ.20ರ ಆಸುಪಾಸು) ಕಾಣಿಸಿಕೊಳ್ಳಬೇಕಿತ್ತು. ಆದರೆ ಬಂಗಾಳಕೊಲ್ಲಿಯಲ್ಲಿ ಪದೇ ಪದೆ ಉಂಟಾದ ವಾಯುಭಾರ ಕುಸಿತ, ಸಮುದ್ರ ಮಟ್ಟದಲ್ಲಿ ಮೈಲ್ಮೈ ಸುಳಿಗಾಳಿ ಏಳುವುದು, ಗಾಳಿ ತೀವ್ರತೆ ಸೇರಿದಂತೆ ಒಟ್ಟಾರೆ ಹವಾಮಾನ ಬದಲಾವಣೆಗಳಿಂದ ಈವರೆಗೂ ಕೂಡ ಮುಂಗಾರು ಮಳೆಯೇ ಅಬ್ಬರಿಸುತ್ತಿದೆ.
ರೈತರಿಗೆ ಶುಭ ಸುದ್ದಿ : ರಾಜ್ಯದಲ್ಲಿ ಉತ್ತಮ ಹಿಂಗಾರು ಮಳೆ
ಅ. 28ರ ವೇಳೆಗೆ ಮುಂಗಾರು ಅಂತ್ಯಗೊಂಡು ಹಿಂಗಾರು ಮಳೆ ಆರಂಭವಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ನಿರ್ದೇಶಕ ಸಿ.ಎಸ್.ಪಾಟೀಲ್ ತಿಳಿಸಿದ್ದಾರೆ.
ಮಾರುತಗಳು (ಗಾಳಿ) ಬಂಗಾಳಕೊಲ್ಲಿಯಿಂದ ತಮಿಳುನಾಡು ಮಾರ್ಗವಾಗಿ ಕರ್ನಾಟದ ದಕ್ಷಿಣ ಒಳನಾಡು ಪ್ರವೇಶಿಸುತ್ತವೆ. ಆದ್ದರಿಂದ ಅ.28ರ ಹೊತ್ತಿಗೆ ಬೆಂಗಳೂರು ಗ್ರಾಮಾಂತರ ಮತ್ತು ನಗರ ಜಿಲ್ಲೆ, ತುಮಕೂರು ಮಂಡ್ಯ, ಮೈಸೂರು, ಕೋಲಾರ, ಚಿಕ್ಕಬಳ್ಳಾಪುರ, ಬಳ್ಳಾರಿ ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಹಿಂಗಾರಿನ ಪ್ರಭಾವ ಹೆಚ್ಚಿರಲಿದೆ. ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಅಲ್ಲಲ್ಲಿ ಸಾಧಾರಣ ಮಳೆ ಬೀಳಲಿದೆ.