* ಕರ್ನಾಟಕದಲ್ಲಿ ಕೊರೋನಾ ಪಾಸಿಟಿವ್ ಕೇಸ್ ಸಂಖ್ಯೆ ಹೆಚ್ಚಳ
* 405 ಕೊರೋನಾ ಪಾಸಿಟಿವ್ ಕೇಸ್ ಪತ್ತೆ
* ಜನರಲ್ಲಿ ಮತ್ತಷ್ಟು ಆತಂಕ
ಬೆಂಗಳೂರು, (ಡಿ.24): ಕ್ರಿಸ್‌ಮಸ್ ಹಾಗೂ ಹೊಸ ವರ್ಷ ಹತ್ತಿರ ಬರುತ್ತಿದೆ. ಅದರ ಮೊದಲೇ ರಾಜ್ಯದಲ್ಲಿ ಇಂದು(ಶುಕ್ರವಾರ) ಕೊರೋನಾ ವೈರಸ್ (Coronavirus) ಕೇಸ್‌ಗಳ ಸಂಖ್ಯೆ ಏರಿಕೆ ಕಂಡಿದ್ದು, ಜನರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ.
405 ಕೊರೋನಾ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, 4 ಜನರು ಕೊರೋನಾ ಮಹಾಮಾರಿಗೆ ಬಲಿಯಾಗಿದ್ದಾರೆ. ಕೊರೋನಾ ಸೋಂಕಿನಿಂದ ಒಟ್ಟು 267 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
undefined
Omicron Scare ಮಧ್ಯಪ್ರದೇಶ, UP ಬಳಿಕ ಗುಜರಾತ್‌ನ 8 ನಗರದಲ್ಲಿ ನೈಟ್ ಕರ್ಫ್ಯೂ ಜಾರಿ, ರಾಜ್ಯದಲ್ಲೂ ಆತಂಕ!
ರಾಜ್ಯದಲ್ಲಿ ಇಲ್ಲಿಯವರೆಗೂ ಒಟ್ಟು 30,03,969 ಮಂದಿಗೆ ಕೊರೋನಾ ದೃಢಪಟ್ಟಿದ್ದು, ಇದುವರೆಗೆ ಕೊರೋನಾ ವೈರಸ್‌ಗೆ 38305 ಜನರು ಸಾವನ್ನಪ್ಪಿದ್ದಾರೆ. 29,58,384 ಮಂದಿ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇದರೊಂದಿಗೆ 7,251 ಸಕ್ರಿಯ ಪ್ರಕರಣಗಳಿವೆ.
ಕೋವಿಡ್-19 ಮರಣ ಪ್ರಮಾಣ ಶೇ.0.98 ರಷ್ಟಿದ್ದರೆ, ಪಾಸಿಟಿವಿಟಿ ರೇಟ್ ಶೇ.0.35 ರಷ್ಟಿದೆ. ಬೆಂಗಳೂರು ನಗರದಲ್ಲಿ 254 ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, 2 ಮರಣ ಪ್ರಕರಣ ದಾಖಲಾಗಿದೆ.
ರಾಜ್ಯದಲ್ಲಿ ಇಂದು(ಡಿ.24) ಒಟ್ಟು 2,19,340 ಮಂದಿಗೆ ಕೊrOನಾ ಲಸಿಕೆ ನೀಡಲಾಗಿದೆ. ಒಟ್ಟು 1,14,559 ಸ್ಯಾಂಪಲ್ (ಆರ್‌ಟಿ-ಪಿಸಿಆರ್ 93,102 + 21,457 ರ್ಯಾಪಿಡ್ ಆಂಟಿಜನ್)ಗಳನ್ನು ಕೊrOನಾ ಪರೀಕ್ಷೆಗೆ ಒಳಪಡಿಸಲಾಗಿದೆ.
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 0, ಬಳ್ಳಾರಿ 0, ಬೀದರ್ 0, ಚಿತ್ರದುರ್ಗ 0, ದಾವಣಗೆರೆ 0, ಗದಗ 0, ಹಾವೇರಿ 0, ಕಲಬುರಗಿ 0, ಕೊಪ್ಪಳ 0, ರಾಯಚೂರು 0 ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಶೂನ್ಯ ಪಾಸಿಟಿವ್ ಪ್ರಕರಣ ದಾಖಲಾಗಿದೆ.
ಕರ್ನಾಟಕದಲ್ಲೂ ಹೆಚ್ಚಿದ ಆತಂಕ
ಭಾರತದಲ್ಲಿ ಓಮಿಕ್ರಾನ್ ಆತಂಕ ಹೆಚ್ಚಾಗುತ್ತಿದೆ. ಜೊತೆಗೆ ಕೊರೋನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿದೆ. ದೇಶದಲ್ಲಿ 358 ಓಮಿಕ್ರಾನ್ ಕೇಸ್ ಪತ್ತೆಯಾಗಿದೆ. ದಿನದಿಂದ ದಿನಕ್ಕೆ ಒಮಿಕ್ರಾನ್ ಪ್ರಕರಣ ಹೆಚ್ಚಾಗುತ್ತಿದೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಉನ್ನತ ಮಟ್ಟದ ಸಭೆ ನಡೆಸಿ ಕೆಲ ಮಹತ್ವದ ಸೂಚನೆ ನೀಡಿದ್ದಾರೆ. ಇದರ ಬೆನ್ನಲ್ಲೇ ಇದೀಗ ಕೆಲ ರಾಜ್ಯಗಳಲ್ಲಿ ಕಠಿಣ ನಿಯಮಗಳು ಜಾರಿಯಾಗುತ್ತಿದೆ. ಇದೀಗ ಗುಜರಾತ್ ಸರದಿ. ಗುಜರಾತ್‌ನ 8 ನಗರದಲ್ಲಿ ನೈಟ್ ಕರ್ಫ್ಯೂ ಜಾರಿಮಾಡಲಾಗಿದೆ.
ಡಿಸೆಂಬರ್ 23ಕ್ಕೆ ಕರ್ನಾಟಕದಲ್ಲಿ 31 ಓಮಿಕ್ರಾನ್ ಕೇಸ್ ಪತ್ತೆಯಾಗಿದೆ. ಅದಲ್ಲೂ ಇತ್ತೀಚೆಗೆ ಹೊಸದಾಗಿ 12 ಓಮಿಕ್ರಾನ್ ಕೇಸ್ ಪತ್ತೆಯಾಗಿದೆ. ಹೀಗೆ ಪತ್ತೆಯಾದ 12 ಪ್ರಕರಣಗಳಲ್ಲಿ 5 ಪ್ರಕರಣ ಬೆಂಗಳೂರಿನಲ್ಲಿ ದಾಖಲಾಗಿದೆ. ಇದರಿಂದ ಕರ್ನಾಟಕದಲ್ಲಿ ಓಮಿಕ್ರಾನ್ ಆತಂಕ ಹೆಚ್ಚಾಗಿದೆ. ಇದುವರೆಗೆ ಕೊರೋನಾ ಮಾರ್ಗಸೂಚಿಗಳನ್ನು ಕಟ್ಟು ನಿಟ್ಟಾಗಿ ಪಾಲಿಸಲು ಸೂಚನೆ ನೀಡಲಾಗಿದೆ. ಇದುವರೆಗೆ ನೈಟ್ ಕರ್ಫ್ಯೂ ಸೇರಿದಂತೆ ಇತರೆ ಯಾವುದೇ ನಿರ್ಬಂಧಗಳು ಕರ್ನಾಟಕದಲ್ಲಿ ಜಾರಿಯಾಗಿಲ್ಲ. ಆದರೆ ಓಮಿಕ್ರಾನ್ ಪ್ರಕರಣ ಹಾಗೂ ಕೊರೋನಾ ಪ್ರಕರಣ ಇದೇ ರೀತಿ ಹೆಚ್ಚಾದರೆ ಒಂದೊಂದೆ ನಿರ್ಬಂಧಗಳು ಜಾರಿಯಾಗುವುದರಲ್ಲಿ ಅನುಮಾನವಿಲ್ಲ.
ಉತ್ತುಂಗಕ್ಕೇರಲಿದೆ Covid-19 ಮೂರನೇ ಅಲೆ
ಭಾರತದಲ್ಲಿ ಕೋವಿಡ್-19 ರೂಪಾಂತರ ಒಮಿಕ್ರಾನ್ ವೈರಸ್ ನ (Omicron)ಪ್ರಕರಣಗಳು ದಿನದಿಂದ ದಿನಕ್ಕೆ ಏರುತ್ತಿರುವ ಸಮಯದಲ್ಲಿಯೇ, ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಕಾನ್ಪುರ (Indian Institute of Technology Kanpur) ಆಘಾತಕಾರಿ ವರದಿಯೊಂದನ್ನು ನೀಡಿದೆ. ಹೀಗೆ ಮುಂದುವರಿಯುತ್ತಿದ್ದಲ್ಲಿ, 2022ರ ಫೆಬ್ರವರಿ 3ರ ವೇಳೆ ಭಾರತದಲ್ಲಿ ಕೋವಿಡ್-19 ನ ಮೂರನೇ ಅಲೆ ಉತ್ತುಂಗಕ್ಕೇರಬಹುದು ಎಂದು ಐಐಟಿ ಕಾನ್ಪುರದ ಸಂಶೋಧಕರು ಅಂದಾಜು ಮಾಡಿದ್ದಾರೆ. ಮಾಡೆಲಿಂಗ್ ಅಧ್ಯಯವನ್ನು ಆಧರಿಸಿ ಅವರು ಈ ಸಂಶೋಧನಾ ವರದಿ ನೀಡಿದ್ದಾರೆ.
ಜಾಗತಿಕವಾಗಿ ಕರೋನಾವೈರಸ್ ಒಮಿಕ್ರಾನ್ ರೂಪಾಂತರದಿಂದ ಅನೇಕ ದೇಶಗಳಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯ ಪ್ರವೃತ್ತಿಯನ್ನು ಕಾಣುತ್ತಿದ್ದೇವೆ. ಇದೇ ಪ್ರವೃತ್ತಿಯನ್ನು ಭಾರತ ಅನುಸರಿಸುತ್ತದೆ ಎನ್ನುವ ಅಂದಾಜಿನ ಮೇಲೆ ಈ ಮುನ್ಸೂಚನೆಯನ್ನು ನೀಡಲಾಗಿದೆ. ಇನ್ನಷ್ಟೇ ಪರಿಶೀಲನೆ ಮಾಡಬೇಕಾದ ಈ ಅಧ್ಯಯನವನ್ನು ಪ್ರಿಪ್ರಿಂಟ್ ರೆಪೊಸಿಟರಿ ಮೆಡ್ ರೆಕ್ಸಿವ್ ನಲ್ಲಿ ಪ್ರಕಟಿಸಲಾಗಿದ್ದು, ಮೂರನೇ ತರಂಗವನ್ನು ಅಂದಾಜು ಮಾಡುವ ಸಲುವಾಗಿ ಗಾಸಿಯನ್ ಮಿಕ್ಸ್ಚರ್ ಮಾಡೆಲ್ (Gaussian Mixture model) ಎಂಬ ಅಂಕಿ-ಅಂಶಗಳ ಸಾಧನವನ್ನು ಬಳಸಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.