ಸಂಕ್ರಾಂತಿಯೊಳಗೆ ದೊಡ್ಡ ಅವಘಡ ಸಂಭವಿಸಲಿದೆ, ಸ್ಫೋಟಕ ಭವಿಷ್ಯ ನುಡಿದ ಕೋಡಿ ಶ್ರೀ

By Suvarna News  |  First Published Dec 24, 2021, 10:54 PM IST

* ಕೋಡಿಮಠದ ಶ್ರೀಗಳಿಂದ ಮತ್ತೊಂದು ಸ್ಫೋಟಕ ಭವಿಷ್ಯ
* ಸಂಕ್ರಾಂತಿಯೊಳಗೆ ದೊಡ್ಡ ಅವಘಡ ಸಂಭವ
* ಹಾವೇರಿಯ ರಾಣೇಬೆನ್ನೂರಿನಲ್ಲಿ ಭವಿಷ್ಯ ನುಡಿದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು


ಹಾವೇರಿ, (ಡಿ.24):  ಕೋಡಿಮಠ ಸಂಸ್ಥಾನದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಮತ್ತೊಂದು ಭವಿಷ್ಯ  ನುಡಿದಿದ್ದು,  ಮುಂದಿನ ವರ್ಷ ಮತ್ತು ಸಂಕ್ರಾಂತಿಯ(Makar Sankranti) ವೇಳೆ ಅವಘಡ ಸಂಭವಿಸಲಿದೆ ಎಂದು ಹೇಳಿದ್ದಾರೆ.

ರಾಣೇಬೆನ್ನೂರು(Ranebennur) ನಗರದ ಕಾರ್ಯಕ್ರಮವೊಂದರ ನಿಮಿತ್ತ ಆಗಮಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೋಡಿಮಠ  ಶ್ರೀಗಳು  ( kodi matta swamiji ),  ರೂಪಾಂತರಿ ಒಮಿಕ್ರಾನ್, ರಾಜಕೀಯ ತಲ್ಲಣದ ಬಗ್ಗೆ ಸ್ಪೋಟಕ ಭವಿಷ್ಯ ನುಡಿದಿದ್ದು, ಭಾರತೀಯ ಸೇನೆಯ ಮುಖ್ಯಸ್ಥರ ಅವಘಡದಂತೆ ಸಂಕ್ರಾತಿಯೊಳಗೆ ಮತ್ತೊಂದು ರಾಜಕೀಯ ಅವಘಡ ಸಂಭವಿಸುವ ಲಕ್ಷಣವಿದೆ. ಇದರಿಂದ ಜಗತ್ತು ತಲ್ಲಣಗೊಳ್ಳಲಿದೆ ಎಂದು ಹೇಳಿದರು.

Tap to resize

Latest Videos

ಇನ್ನೂ ಕಾದಿದೆ ಘನಘೋರ ಆಪತ್ತು : ಕೋಡಿ ಸ್ವಾಮೀಜಿಯಿಂದ ಭಾರೀ ಎಚ್ಚರಿಕೆ

ನಾನು ಈ ಹಿಂದೆಯೇ ದೊಡ್ಡಮಟ್ಟದ ಅವಘಡ ಸಂಭವಿಸುವ ಕುರಿತು ಹೇಳಿದ್ದೆ. ಅದರಂತೆ ಭಾರತೀಯ ಸೇನೆಯ ಮುಖ್ಯಸ್ಥರ ಹೆಲಿಕಾಪ್ಟರ್ ದುರಂತ ಪ್ರಕರಣ ನಡೆದು ಹೋಯಿತು. ಇದೀಗ ಮತ್ತೆ ಅಂಥದ್ದೇ ದುರಂತ ಸಂಭವಿಸುವ ಲಕ್ಷಣವಿದೆ ಎಂದರು

ಕೊರೋನಾ(Conavirus) ರೂಪಾಂತರಿ (ಒಮಿಕ್ರಾನ್) ಹೆಚ್ಚಾಗುವ ಎಲ್ಲಾ ಲಕ್ಷಣಗಳಿವೆ. ದೇಶದಲ್ಲಿ ಸಂಶಯ, ಅಸಹನೆ, ದ್ವೇಷ ಹಾಗೂ ರಾಜಕೀಯ ಕಲಹಗಳು ಹೆಚ್ಚಾಗಲಿವೆ. ಕೆಲವೇ ದಿನಗಳಲ್ಲಿ ಮಳೆ ಕೂಡ ಅಧಿಕವಾಗಿ ಸುರಿಯುವ ಲಕ್ಷಣವಿದೆ ಎಂದು ಕೋಡಿ ಮಠದ ಶ್ರೀಗಳು ತಿಳಿಸಿದ್ದಾರೆ

ಈ ಹಿಂದೆ ಈ ತರ ಭವಿಷ್ಯ ನುಡಿದಿದ್ದು, ಅದು ನಿಜವಾಗಿದೆ. ಮುಂದಿನ ದಿನಗಳಲ್ಲಿ ಸಾವು ಹೆಚ್ಚಾಗಲಿದೆ, ಬಹುದೊಡ್ಡ ದುರಂತ ಸಂಭವಿಸಲಿದೆ, ಯಡಿಯೂರಪ್ಪನವರನ್ನು ಕೆಳಗಿಳಿಸಿದ್ದಕ್ಕೆ ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂದೂ ಕೋಡಿಶ್ರೀಗಳು ಹೇಳಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ. ಓಮ್ರಿಕಾನ್ ಹೆಚ್ಚಾಗಲಿದೆ ಎಂದು ಹೇಳಿದ್ದರು.

ಅದರಂತೆ ಕೊರೋನಾದಿಂದ ಸಾವುಗಳ ಸಂಭವಿಸಿದವು. ಮತ್ತೆ ಭಾರತೀಯ ಸೇನೆಯ ಮುಖ್ಯಸ್ಥ ಬಿಪಿನ್ ರಾವತ್ ಹೆಲಿಕಾಪ್ಟರ್ ದುರಂತ ಸಂಭವಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ರೋಗ ರುಜಿನಗಳು ಹೆಚ್ಚಾಗಲಿದೆ ಎಂದೂ ಕೋಡಿಶ್ರೀಗಳು ಹೇಳಿದ್ದರು. ಅದರಂತೇ, ಮತ್ತೆ ಕೊರೊನಾ ರೂಪಾಂತಾರಿ ಓಮ್ರಿಕಾನ್ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಹರಡಲಾರಂಭಿಸಿದೆ. ದೇಶದ ಕೆಲವು ರಾಜ್ಯಗಳು ನೈಟ್ ಕರ್ಫ್ಯೂ ಜಾರಿಗೆ ತಂದಿದೆ. "ಜಗತ್ತಿನಲ್ಲಿ ಒಂದು ದೇಶ ಭೂಪಟದಿಂದ ಅಳಿಸಿಹೋಗಲಿದೆ ಎಂದು 2 ವರ್ಷಗಳ ಹಿಂದೆ ಭವಿಷ್ಯ ನುಡಿದಿದ್ದೆ. ಅದರಂತೆ ಇಂದು ಅಫ್ಘಾನಿಸ್ತಾನ ತಾಲಿಬಾನ್ ವಶವಾಗುತ್ತಿದೆ'' ಎಂದು ಕೋಡಿಮಠದ ಸ್ವಾಮೀಜಿ ತಮ್ಮ ಭವಿಷ್ಯವನ್ನು ಅರ್ಥೈಸಿದ್ದರು.

ಹೇಳಿದ್ದು ನಿಜವಾಯ್ತು
ಸೆಪ್ಟೆಂಬರ್‌ನಲ್ಲಿ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಮಾಡಾಳು ಗ್ರಾಮದಲ್ಲಿ ಮಾತನಾಡಿದ್ದ ಕೋಡಿ ಶ್ರೀ  ದೇಶದಲ್ಲಿ ಇನ್ನೂ ಮಳೆಯಾಗಲಿದೆ, ಇನ್ನೂ ಆಪತ್ತು ಕಾಡಲಿದೆ.  ಭವಿಷ್ಯದಲ್ಲಿ ಮತ್ತೆ ವಿಪತ್ತು ಕಾದಿದೆ ಎಂದು ಭವಿಷ್ಯ ನುಡಿದಿದ್ದಾರೆ.  ಕಾರ್ತಿಕ ಮಾಸದವರೆಗೂ ಇದೇ ವಿಪತ್ತು ಇರಲಿದೆ ಎಂದೂ ಹೇಳಿದ್ರು. ಅದರಂತೆ ಕಾರ್ತಿಕ ಮುಗಿಯುವವರಿಗೂ ರಾಜ್ಯದಲ್ಲಿ ಮಳೆ ಸುರಿಯಿತು. ಅಲ್ಲದೇ ರೈತರ ಬೆಳೆ ನೀರುಪಾಲಾಯ್ತು.
 

click me!