ರಾಜ್ಯದಲ್ಲಿ 5000 ದಾಟಿದ ಕೊರೋನಾ!| ನಿನ್ನೆ ಒಂದೇ ದಿನ 378 ಕೇಸು, 2 ಸಾವು| ಮೂರೇ ದಿನದಲ್ಲಿ 1000 ಕೇಸ್ ದಾಖಲು| 378ರ ಪೈಕಿ 325 ಜನರು ಮಹಾರಾಷ್ಟ್ರ ರಿಟರ್ನ್ಸ್| 889 ಕೇಸಿನೊಂದಿಗೆ ಉಡುಪಿ ನಂ.1
ಬೆಂಗಳೂರು(ಜೂ.07): ರಾಜ್ಯದಲ್ಲಿ ಕೊರೋನಾ ಸೋಂಕಿನ ಹಾವಳಿ ಮುಂದುವರೆದಿದ್ದು ಶನಿವಾರ 378 ಪ್ರಕರಣಗಳು ವರದಿಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 5 ಸಾವಿರದ ಗಡಿ ದಾಟಿದ್ದು 5213ಕ್ಕೆ ಏರಿಕೆಯಾಗಿದೆ. ಕೇವಲ 3 ದಿನದಲ್ಲಿ 1 ಸಾವಿರ ಪ್ರಕರಣಗಳು ಪತ್ತೆ ಆಗಿರುವುದು ಆತಂಕದ ವಿಚಾರ.
ಇದೇ ವೇಳೆ ಶನಿವಾರ ಇಬ್ಬರು ಕೊರೋನಾ ಸೋಂಕಿತರು ಮೃತಪಟ್ಟಿದ್ದು, ಕೊರೋನಾ ಸೋಂಕಿತರ ಒಟ್ಟು ಸಾವಿನ ಸಂಖ್ಯೆ 61ಕ್ಕೆ ಏರಿಕೆಯಾಗಿದೆ.
undefined
75 ದಿನಗಳ ಬಳಿಕ ರಾಜ್ಯ 98% ಅನ್‌ಲಾಕ್: ಹೋಟೆಲ್, ಮಾಲ್ ಓಪನ್!
ಶನಿವಾರದ 378 ಪ್ರಕರಣಗಳಲ್ಲಿ 333 ಮಂದಿ ಅನ್ಯ ರಾಜ್ಯದಿಂದ ಹಾಗೂ 8 ಮಂದಿ ವಿದೇಶದಿಂದ ಆಗಮಿಸಿದ್ದಾರೆ. ಈ ಪೈಕಿ 325 ಮಂದಿ ಮಹಾರಾಷ್ಟ್ರದಿಂದಲೇ ಆಗಮಿಸಿದ್ದು ‘ಮಹಾ’ ಸೋಂಕಿನ ಕಾಟ ಮುಂದುವರೆದಿದೆ.
ಉಡುಪಿ ತತ್ತರ:
ಉಡುಪಿಯ (121) ಅಷ್ಟೂಪ್ರಕರಣ ಮಹಾರಾಷ್ಟ್ರದಿಂದ ವಾಪಸಾದವರಲ್ಲೇ ವರದಿಯಾಗಿದೆ. ಉಳಿದಂತೆ ಕಲಬುರಗಿಯ 69, ಯಾದಗಿರಿಯ 102 ಪ್ರಕರಣ ಮಹಾರಾಷ್ಟ್ರದಿಂದ ವರದಿಯಾಗಿದೆ. ಈ ಮೂಲಕ ಉಡುಪಿಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 889ಕ್ಕೆ ಏರಿಕೆಯಾಗಿದೆ. ಯಾದಗಿರಿ (476), ಕಲಬುರಗಿ (621) ಪ್ರಕರಣದ ಮೂಲಕ ಮೊದಲ ಮೂರು ಸ್ಥಾನಗಳನ್ನು ಆಕ್ರಮಿಸಿಕೊಂಡಿದ್ದು ಬೆಂಗಳೂರು ನಾಲ್ಕನೇ ಸ್ಥಾನಕ್ಕೆ ಜಾರಿದೆ.
ಉಳಿದಂತೆ ಶನಿವಾರ ದಕ್ಷಿಣ ಕನ್ನಡ 24, ಬೆಂಗಳೂರು ನಗರ 18, ವಿಜಯಪುರ, ದಾವಣಗೆರೆ ತಲಾ 6, ಬೆಳಗಾವಿ 5, ಗದಗ 4, ಮಂಡ್ಯ, ಹಾಸನ, ಧಾರವಾಡ, ಹಾವೇರಿಯಲ್ಲಿ ತಲಾ 3, ರಾಯಚೂರು, ಚಿಕ್ಕಬಳ್ಳಾಪುರ, ಉತ್ತರ ಕನ್ನಡ ತಲಾ 2, ಬೀದರ್, ತುಮಕೂರು, ಕೋಲಾರ, ಕೊಪ್ಪಳದಲ್ಲಿ ತಲಾ ಒಂದೊಂದು ಪ್ರಕರಣ ವರದಿಯಾಗಿದೆ.
ಕೆ. ಆರ್. ಮಾರುಕಟ್ಟೆ ಆರಂಭವಾಗುವುದು ಡೌಟ್!
2 ಸಾವು:
ಬೀದರ್‌ನಲ್ಲಿ 55 ವರ್ಷದ 1951ನೇ ಸೋಂಕಿತೆ ಜೂ.5 ರಂದು ಮೃತಪಟ್ಟಿದ್ದಾರೆ. ವಿಜಯನಗರ ಜಿಲ್ಲೆಯಲ್ಲಿ 82 ವರ್ಷದ ವೃದ್ಧೆ ಮೇ 27 ರಂದು ಮನೆಯಲ್ಲೇ ನಿಧನರಾಗಿದ್ದಾರೆ. ಪರೀಕ್ಷೆಯ ವರದಿ ಸಾವಿನ 9 ದಿನಗಳ ಬಳಿಕ ಬಂದಿದ್ದು, ಸೋಂಕು ಇದ್ದದ್ದು ದೃಢಪಟ್ಟಿದೆ. ಇಬ್ಬರಿಗೂ ಕಂಟೈನ್‌ಮೆಂಟ್ ವಲಯದಿಂದಲೇ ಸೋಂಕು ಹರಡಿರುವುದು ಆತಂಕ ಸೃಷ್ಟಿಸಿದೆ.
ಮುಂದುವರೆದ ‘ಮಹಾ’ ಸೋಂಕು:
ಉಡುಪಿಯ 121, ಯಾದಗಿರಿಯ 103 ಪ್ರಕರಣದ ಪೈಕಿ 102, ಕಲಬುರಗಿಯ 69 ಪ್ರಕರಣ ಮಹಾರಾಷ್ಟ್ರದಿಂದ ವರದಿಯಾಗಿವೆ. ಉಳಿದಂತೆ ದಕ್ಷಿಣ ಕನ್ನಡದ 24 ಪ್ರಕರಣದ ಪೈಕಿ 11 ಮಹಾರಾಷ್ಟ್ರ, 8 ವಿದೇಶದ ಹಿನ್ನೆಲೆ ಹೊಂದಿದ್ದು, 5 ಸೋಂಕಿನ ಸಂರ್ಪಕ ಪತ್ತೆಯಾಗಿಲ್ಲ.
ಬೆಂಗಳೂರಿನ 18 ಪ್ರಕರಣದ ಪೈಕಿ ಐಎಲ್‌ಐ ಹಿನ್ನೆಲೆಯ 7, ಮಹಾರಾಷ್ಟ್ರ 1, ಸೋಂಕಿತರ ಸಂಪರ್ಕ 2, ಸಂಪರ್ಕ ಪತ್ತೆಯಾಗದಿರುವುದು 7 ಇದೆ. ದಾವಣಗೆರೆಯ 6 ಪ್ರಕರಣವೂ ಸೋಂಕಿತರ ಸಂಪರ್ಕದಿಂದ ಬಂದಿದೆ. ವಿಜಯಪುರದ 6 ಪ್ರಕರಣದ ಪೈಕಿ 3 ಮಹಾರಾಷ್ಟ್ರ, ಬೆಳಗಾವಿಯ 5 ಪ್ರಕರಣದ ಪೈಕಿ 3 ಮಹಾರಾಷ್ಟ್ರ, 2 ಗುಜರಾತ್ ಸಂಪರ್ಕದಿಂದ ವರದಿಯಾಗಿವೆ. ಉಳಿದಂತೆ ಧಾರವಾಡ, ಹಾಸನ, ಉತ್ತರಕನ್ನಡ, ಚಿಕ್ಕಬಳ್ಳಾಪುರ, ಕೊಪ್ಪಳದ ಪ್ರಕರಣವೆಲ್ಲವೂ ಮಹಾರಾಷ್ಟ್ರದಿಂದಲೇ ವರದಿಯಾಗಿವೆ.
ಒಂದೇ ದಿನ 280 ಜನರು ಗುಣಮುಖ: ದಾಖಲೆ
ಶನಿವಾರ ಬರೋಬ್ಬರಿ ದಾಖಲೆಯ 280 ಮಂದಿ ಸೋಂಕಿತರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಈ ಹಿಂದೆ ಮೇ 31 ರಂದು 221 ಮಂದಿ ಗುಣಮುಖರಾಗಿದ್ದರು. ಒಟ್ಟಾರೆ ಗುಣಮುಖರ ಸಂಖ್ಯೆ ಸದ್ಯ 1968 ಇದ್ದು, 2 ಸಾವಿರದ ಗಡಿ ತಲುಪಿದೆ. ಉಳಿದಂತೆ 3184 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೋಂಕಿನ ಮೈಲಿಗಲ್ಲು
ಮಾ.9 1ನೇ ಸೋಂಕು
ಮೇ 15 1000
ಮೇ 24 2000
ಮೇ 31 3000
ಜೂ. 3 4000
ಜೂ. 6 5000
ಸಾವಿರದ ಹಾದಿ
ಮೊದಲ ಸಾವಿರ - 66 ದಿನ
2ನೇ 2000 - 10 ದಿನ
3ನೇ ಸಾವಿರ - 7 ದಿನ
4ನೇ ಸಾವಿರ - 3 ದಿನ
5ನೇ ಸಾವಿರ - 3 ದಿನ