ಕೊರೋನಾ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿದ್ದ ಟೂರಿಸ್ಟ್ ವಾಹನ ಮಾಲೀಕರಿಗೆ ರಾಜ್ಯ ಸರ್ಕಾರ ಕೊಂಚ ರಿಲೀಫ್ ಕೊಟ್ಟಿದೆ.
ಬೆಂಗಳೂರು, (ಜೂನ್.06) : ಟೂರಿಸ್ಟ್ ವಾಹನಗಳ ಮೇಲಿನ ಜೂನ್ ತಿಂಗಳ ಶೇ.50ರಷ್ಟು ತೆರಿಗೆ ಕಡಿತ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಇಂದು (ಶನಿವಾರ) ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆದ ಹೋಟೆಲ್, ಸಾರಿಗೆ ಇಲಾಖೆಯ ಸಚಿವರು, ಅಧಿಕಾರಿಗಳ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಆಟೋ, ಕ್ಯಾಬ್ ಚಾಲಕರು 5000 ರೂ. ಪಡೆಯುವುದು ಹೇಗೆ? ಯಾವೆಲ್ಲಾ ಡ್ರೈವರ್ಸ್‌ಗೆ ಅನ್ವಯ?
ಪ್ರವಾಸೋದ್ಯಮ ಸಚಿವ ಸಿಟಿ ರವಿ ಪ್ರತಿಕ್ರಿಯೆ
ಲಾಕ್ ಡೌನ್ ನಿಂದಾಗಿ ಪ್ರವಾಸಿ ವಾಹನ ಮಾಲೀಕರು ವಾಹನಗಳ ಓಡಾಟವಿಲ್ಲದೇ ತೆರಿಗೆ ಪಾವತಿಗೂ ಕಷ್ಟವಾಗಿತ್ತು. ಇದೀಗ ಇಂತಹ ಮಾಲೀಕರ ಸಂಕಷ್ಟಕ್ಕೆ ಪ್ರತಿ ಸ್ಪಂದಿಸಿರುವ ರಾಜ್ಯ ಸರ್ಕಾರ ಶೇ.50ರಷ್ಟು ಟೂರಿಸ್ಟ್ ವಾಹನಗಳ ಮೇಲಿನ ಜೂನ್ ತಿಂಗಳ ತೆರಿಗೆ ಕಡಿತ ಮಾಡಲು ಮುಂದಾಗಿದೆ. ಈ ಮೂಲಕ ರಾಜ್ಯದ ಪ್ರವಾಸಿ ವಾಹನಗಳ ಮಾಲೀಕರಿಗೆ ಕೊಂಚ ರಿಲೀಫ್ ನೀಡಿದಂತಾಗಿದೆ
ಕೊರೋನಾದಿಂದ ಭಾರೀ ಹೊಡೆತ ಬಿದ್ದ ಪರಿಣಾಮ ಪ್ರವಾಸೋದ್ಯಮ ಕ್ಷೇತ್ರ ನೆಲ ಕಚ್ಚಿದೆ. ಇದನ್ನು ಹೇಗಾದ್ರೂ ಮಾಡಿ ಮೇಲೆತ್ತಲು ರಾಜ್ಯ ಸರ್ಕಾರ ಹಂತ-ಹಂತವಾಗಿ ಟೂರಿಸ್ಟ್ ಸ್ಥಳಗಳನ್ನ ತೆರೆಯಲು ಅನುಮತಿ ನೀಡಿದ್ದಾರೆ.