ಹೆಚ್ಚಾದ ಕರಿ ಫಂಗಸ್‌ ಕಾಟ: ರಾಜ್ಯದಲ್ಲಿ ಈವರೆಗೆ 307 ಮಂದಿ ಬಲಿ!

By Kannadaprabha NewsFirst Published Jul 16, 2021, 7:36 AM IST
Highlights

* ಒಟ್ಟು 3551 ಮಂದಿಯಲ್ಲಿ ಸೋಂಕು ಪತ್ತೆ
* ಬೆಂಗಳೂರಿನಲ್ಲೇ 1,134 ಮಂದಿಗೆ ಬ್ಲ್ಯಾಕ್‌ ಫಂಗಸ್‌ ಸೋಂಕು ದೃಢ
* ರಾಜ್ಯದಲ್ಲಿ ನಿಯಂತ್ರಣಕ್ಕೆ ಬಂದ ಕೊರೋನಾ 

ಬೆಂಗಳೂರು(ಜು.16): ರಾಜ್ಯದಲ್ಲಿ ಕೊರೋನಾ ಸೋಂಕು ನಿಯಂತ್ರಣಕ್ಕೆ ಬಂದರೂ ಕಪ್ಪು ಶಿಲೀಂಧ್ರ (ಬ್ಲ್ಯಾಕ್‌ ಫಂಗಸ್‌) ಸೋಂಕು ಪ್ರಕರಣಗಳು ಮುಂದುವರೆದಿವೆ. ರಾಜ್ಯದಲ್ಲಿ ಈವರೆಗೆ 3,551 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು, ಬರೋಬ್ಬರಿ 307 ಮಂದಿ ಬಲಿಯಾಗಿದ್ದಾರೆ.

ಬೆಂಗಳೂರಿನಲ್ಲಿ 1,134 ಮಂದಿಗೆ ಬ್ಲ್ಯಾಕ್‌ ಫಂಗಸ್‌ ಸೋಂಕು ಕಾಣಿಸಿಕೊಂಡಿದ್ದು, 107 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ ಬಿಬಿಎಂಪಿ ವ್ಯಾಪ್ತಿಯಲ್ಲೇ 580 ಸೋಂಕು ವರದಿಯಾಗಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ 208, ಬೌರಿಂಗ್‌ ಆಸ್ಪತ್ರೆ 366, ಕೆ.ಸಿ. ಜನರಲ್‌ 4, ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ಇಬ್ಬರು ಸೋಂಕು ದೃಢಪಟ್ಟು ಚಿಕಿತ್ಸೆ ಪಡೆದಿದ್ದಾರೆ.

3 ನೇ ಅಲೆಯಲ್ಲಿ ಮಕ್ಕಳಿಗೆ ಕಾಡುತ್ತಂತೆ ಬ್ಲ್ಯಾಕ್ ಫಂಗಸ್: ಮಿಂಟೋ ವೈದ್ಯರ ಎಚ್ಚರಿಕೆ

ಈ ಪೈಕಿ ಬೌರಿಂಗ್‌ ಆಸ್ಪತ್ರೆಯಲ್ಲಿ 4, ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ಒಂದು ಪ್ರಕರಣ ಗುರುವಾರ ವರದಿಯಾಗಿದೆ. ಈ ಮೂಲಕ ಒಟ್ಟು 1,134 ಮಂದಿಗೆ ಸೋಂಕು ತಗುಲಿದಂತಾಗಿದ್ದು, 107 ಮಂದಿ ಮೃತಪಟ್ಟಿದ್ದಾರೆ. ಉಳಿದಂತೆ 400 ಮಂದಿ ಗುಣಮುಖರಾಗಿದ್ದು, ಉಳಿದವರು ಚಿಕಿತ್ಸೆಯಲ್ಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 

click me!