ಆಮ್ಲಜನಕ ಘಟಕ ಆರಂಭಕ್ಕೆ ಶೇ.25 ಸಬ್ಸಿಡಿ, ವಿದ್ಯುತ್‌ ಶುಲ್ಕ ವಿನಾಯ್ತಿ

By Kannadaprabha NewsFirst Published Jul 16, 2021, 7:11 AM IST
Highlights
  • ಆಮ್ಲಜನಕ ಉತ್ಪಾದನಾ ಘಟಕ ಆರಂಭಿಸುವವರಿಗೆ ವಿಶೇಷ ಪ್ರೋತ್ಸಾಹ
  •  ಶೇ.25ರಷ್ಟುಬಂಡವಾಳ ಸಬ್ಸಿಡಿ, ವಿದ್ಯುತ್‌ ಶುಲ್ಕದಿಂದ ಮೂರು ವರ್ಷದವರೆಗೆ ಪೂರ್ಣ ವಿನಾಯಿತಿ
  • ಸ್ಟ್ಯಾಂಪ್‌ ಡ್ಯೂಟಿಯಿಂದ ಸಂಪೂರ್ಣ ವಿನಾಯಿತಿ

ಬೆಂಗಳೂರು (ಜು.16): ಕೋವಿಡ್‌ 2ನೇ ಅಲೆ ವೇಳೆ ಆಮ್ಲಜನಕ ಕೊರತೆ ಎದುರಿಸಿದ್ದರಿಂದ ಮುಂದಿನ ದಿನದಲ್ಲಿ ಈ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಆಮ್ಲಜನಕ ಉತ್ಪಾದನಾ ಘಟಕ ಆರಂಭಿಸುವವರಿಗೆ ವಿಶೇಷ ಪ್ರೋತ್ಸಾಹ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.

ಆಮ್ಲಜನಕ ಘಟಕ ಸ್ಥಾಪನೆ ಮಾಡುವವರಿಗೆ ಶೇ.25ರಷ್ಟುಬಂಡವಾಳ ಸಬ್ಸಿಡಿ, ವಿದ್ಯುತ್‌ ಶುಲ್ಕದಿಂದ ಮೂರು ವರ್ಷದವರೆಗೆ ಪೂರ್ಣ ವಿನಾಯಿತಿ, ಸ್ಟ್ಯಾಂಪ್‌ ಡ್ಯೂಟಿಯಿಂದ ಸಂಪೂರ್ಣ ವಿನಾಯಿತಿ ನೀಡಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

1,500 PSA ಆಮ್ಲಜನಕ ಸ್ಥಾವರ ಸ್ಥಾಪನೆ, ಸ್ವಯಂಚಾಲಿತ ತಂತ್ರಜ್ಞಾನದಿಂದ ಮೇಲ್ವಿಚಾರಣೆ!

 ಸದ್ಯ ರಾಜ್ಯದಲ್ಲಿ ಒಂಭತ್ತು ಆಮ್ಲಜನಕ ಉತ್ಪಾದನಾ ಘಟಕಗಳಿವೆ. ಈ ಪೈಕಿ ಆರು ಘಟಕಗಳು ಆಮ್ಲಜನಕ ಪೂರೈಕೆ ಮಾಡುತ್ತಿವೆ. 815 ಮೆಟ್ರಿನ್‌ ಟನ್‌ ಉತ್ಪಾದನಾ ಸಾಮರ್ಥ್ಯ ಇದ್ದು, 5780 ಮೆಟ್ರಿಕ್‌ ಟನ್‌ ಸಂಗ್ರಹಣಾ ಸಾಮರ್ಥ್ಯ ಇದೆ. ಈ ಎರಡನ್ನೂ ಹೆಚ್ಚಿಸಲು ಪ್ರೋತ್ಸಾಹ ನೀಡಲಾಗುವುದು ಎಂದು ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

click me!