Covid Crisis: ಕರ್ನಾಟಕದಲ್ಲಿ 300 ಗಡಿಗೆ ಕೊರೋನಾ ಕೇಸ್‌!

By Govindaraj S  |  First Published Jun 3, 2022, 3:15 AM IST

ರಾಜ್ಯದಲ್ಲಿ ಮೂರು ತಿಂಗಳ ಬಳಿಕ ಕೊರೋನಾ ಸೋಂಕು ಹೊಸ ಪ್ರಕರಣಗಳು 300 ಗಡಿಗೆ ಹೆಚ್ಚಳವಾಗಿವೆ. ಜತೆಗೆ ಕೊರೋನಾ ಪರೀಕ್ಷೆಗಳ ಪಾಸಿಟಿವಿ ದರ ಶೇ.1.5ಕ್ಕೆ ಹೆಚ್ಚಳವಾಗಿದೆ.


ಬೆಂಗಳೂರು (ಜೂ.03): ರಾಜ್ಯದಲ್ಲಿ ಮೂರು ತಿಂಗಳ ಬಳಿಕ ಕೊರೋನಾ ಸೋಂಕು ಹೊಸ ಪ್ರಕರಣಗಳು 300 ಗಡಿಗೆ ಹೆಚ್ಚಳವಾಗಿವೆ. ಜತೆಗೆ ಕೊರೋನಾ ಪರೀಕ್ಷೆಗಳ ಪಾಸಿಟಿವಿ ದರ ಶೇ.1.5ಕ್ಕೆ ಹೆಚ್ಚಳವಾಗಿದೆ. ಗುರುವಾರ 297 ಜನರಲ್ಲಿ ಸೋಂಕು ಪತ್ತೆಯಾಗಿದ್ದು, 187 ಮಂದಿ ಗುಣಮುಖರಾಗಿದ್ದಾರೆ. ಸೋಂಕಿತರ ಸಾವು ವರದಿಯಾಗಿಲ್ಲ. ಸದ್ಯ 2,204 ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. ಸೋಂಕು ಪರೀಕ್ಷೆಗಳು 20 ಸಾವಿರ ನಡೆದಿದ್ದು, ಪಾಸಿಟಿವಿಟಿ ದರ ಶೇ 1.5ರಷ್ಟು ದಾಖಲಾಗಿದೆ. ಬುಧವಾರಕ್ಕೆ ಹೋಲಿಸಿದರೆ ಸೋಂಕು ಪರೀಕ್ಷೆಗಳು ಹೆಚ್ಚಾಗಿಲ್ಲ. ಆದರೂ, ಹೊಸ ಪ್ರಕರಣಗಳು 119 ಹೆಚ್ಚಳವಾಗಿವೆ. 

ಮಾರ್ಚ್‌ 3ರಂದು 278 ಕೊರೋನಾ ಪ್ರಕರಣಗಳು ವರದಿಯಾಗಿದ್ದವು. ಬಳಿಕ ಕಡಿಮೆಯಾಗುತ್ತಾ 50 ಆಸುಪಾಸಿಗೆ ಬಂದಿತ್ತು. ಆದರೆ, ಕಳೆದ ವಾರದಿಂದ 200 ಆಸುಪಾಸಿನಲ್ಲಿ ವರದಿಯಾಗುತ್ತಿದ್ದವು. 297 ಪ್ರಕರಣಗಳು ಪತ್ತೆಯಾಗುವ ಮೂಲಕ ಹೆಚ್ಚು ಕಡಿಮೆ ಮೂರು ತಿಂಗಳಲ್ಲಿ ಅಧಿಕ ಪ್ರಕರಣಗಳು ಪತ್ತೆಯಾದಂತಾಗಿದೆ. ರಾಜ್ಯದಲ್ಲಿ ಈವರೆಗೆ 39.5 ಲಕ್ಷ ಮಂದಿಗೆ ಸೊಂಕು ತಗುಲಿದೆ. 39.1 ಲಕ್ಷ ಮಂದಿ ಗುಣಮುಖರಾಗಿದ್ದು, 40,065 ಮಂದಿ ಸಾವಿಗೀಡಾಗಿದ್ದಾರೆ. (ಬುಧವಾರ 178 ಪ್ರಕರಣಗಳು, ಸಾವು ಶೂನ್ಯ). ಬೆಂಗಳೂರು 276, ದಕ್ಷಿಣ ಕನ್ನಡ 8, ಬೆಂಗಳೂರು ಗ್ರಾಮಾಂತರ 3, ಮೈಸೂರು 4, ಬಳ್ಳಾರಿ 2, ಚಿತ್ರದುರ್ಗ, ಹಾಸನ, ರಾಯಚೂರು ಹಾಗೂ ತುಮಕೂರಿನಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿದೆ. 21 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ.

Tap to resize

Latest Videos

undefined

Covid Crisis: ಬಿಎ.4, ಬಿಎ.5 ಉಪತಳಿಯ ಮೊದಲ ದೇಶಿ ಕೇಸು ಪತ್ತೆ!

ಬೆಂಗ್ಳೂರಲ್ಲಿ ಕೊರೋನಾ ಸಂಖ್ಯೆಯಲ್ಲಿ ಭಾರೀ ಏರಿಕೆ: ಬೆಂಗಳೂರು ನಗರದಲ್ಲಿ ಕೊರೋನಾ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದ್ದು, ಬುಧವಾರ 197 ಜನರಲ್ಲಿ ಸೋಂಕು ಪತ್ತೆಯಾಗಿದೆ. ಪಾಸಿಟಿವಿಟಿ ದರ ಶೇ.1.13ಕ್ಕೆ ಹೆಚ್ಚಾಗಿದೆ. 118 ಮಂದಿ ಚೇತರಿಸಿಕೊಂಡಿದ್ದಾರೆ. ಕೋವಿಡ್‌ ಸಾವು ದಾಖಲಾಗಿಲ್ಲ. ಕಳೆದ ಭಾನುವಾರ 161, ಶನಿವಾರ 150, ಸೋಮವಾರ 100, ಮಂಗಳವಾರ 107 ಮಂದಿಯಲ್ಲಿ ಕೊರೋನಾ ಸೋಂಕಿತರು ಪತ್ತೆಯಾಗಿತ್ತು. ಬುಧವಾರ ಈ ಸಂಖ್ಯೆ 197ಕ್ಕೆ ಏರಿಕೆಯಾಗಿದೆ. ಜತೆಗೆ ಪಾಸಿಟಿವಿಟಿ ದರವು ಶೇ.1.04ನಿಂದ 1.13ಗೆ ಏರಿಕೆಯಾಗಿರುವುದು ಆತಂಕ ಮೂಡಿಸಿದೆ.

Covid Crisis: ಕೊರೋನಾ ರೂಪಾಂತರಿ ಪತ್ತೆಗೆ ಕೊಳಚೆ ನೀರಿನ ಜೀನೋಮಿಕ್‌ ಸೀಕ್ವೆನ್ಸಿಂಗ್‌ ಟೆಸ್ಟ್‌

ಇನ್ನು ನಗರದಲ್ಲಿ ಒಟ್ಟು 1,730 ಸಕ್ರಿಯ ಪ್ರಕರಣಗಳಿದ್ದು, ಈ ಪೈಕಿ ತೀವ್ರ ನಿಗಾ ವಿಭಾಗದಲ್ಲಿ ಒಬ್ಬ ಮತ್ತು ಸಾಮಾನ್ಯ ವಾರ್ಡ್‌ನಲ್ಲಿ ನಾಲ್ವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಮನೆ ಆರೈಕೆಯಲ್ಲಿದ್ದಾರೆ. ಬುಧವಾರ ಹೊಸದಾಗಿ ಯಾವುದೇ ಕಂಟೈನ್ಮೆಂಟ್‌ ವಲಯ ಸೃಷ್ಟಿಯಾಗಿಲ್ಲ. ನಾಲ್ಕು ಕಂಟೈನ್ಮೆಂಟ್‌ ವಲಯಗಳಿವೆ. 9,575 ಮಂದಿ ಕೋವಿಡ್‌ ವಿರುದ್ಧ ಲಸಿಕೆ ಪಡೆದುಕೊಂಡಿದ್ದಾರೆ. 1,642 ಮಂದಿ ಮೊದಲ ಡೋಸ್‌, 4,746 ಮಂದಿ ಎರಡನೇ ಡೋಸ್‌ ಮತ್ತು 3,187 ಮಂದಿ ಮೂರನೇ ಡೋಸ್‌ ಲಸಿಕೆ ಪಡೆದಿದ್ದಾರೆ.​​​ ಒಟ್ಟು 13,973 ಮಂದಿಗೆ ಕೋವಿಡ್‌ ಪರೀಕ್ಷೆ ನಡೆಸಲಾಗಿದೆ. ಈ ಪೈಕಿ 10,785 ಆರ್‌ಟಿಪಿಸಿಆರ್‌ ಹಾಗೂ 3,188 ರಾರ‍ಯಪಿಡ್‌ ಆ್ಯಂಟಿಜನ್‌ ಪರೀಕ್ಷೆ ನಡೆಸಲಾಗಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.

click me!