ಕರ್ನಾಟಕದಲ್ಲಿ ಕೊರೋನಾ 2ನೇ ಅಲೆ ಅಬ್ಬರ: ಬೆಚ್ಚಿಬೀಳಿಸಿದ ಏ.24ರ ಅಂಕಿ-ಸಂಖ್ಯೆ

By Suvarna News  |  First Published Apr 24, 2021, 8:36 PM IST

 ರಾಜ್ಯದಲ್ಲಿ ಕೋವಿಡ್ ಎರಡನೇ  ಅಲೆ ತೀವ್ರತೆ ಹೆಚ್ಚಿದ್ದು, ಪ್ರಕರಣಗಳ ಸಂಖ್ಯೆ ಏರುಮುಖದಲ್ಲಿಯೇ ಸಾಗಿದೆ. ಇನ್ನು ಏ.24ರ ಅಂಕಿ ಸಂಖ್ಯೆ ಈ ಕೆಳಗಿನಂತಿದೆ ನೋಡಿ


ಬೆಂಗಳೂರು, (ಏ.24): ಕರ್ನಾಟಕದಲ್ಲಿ ಕೊರೋನಾ ಎರಡನೇ ಅಲೆ ಅಟ್ಟಹಾಸ ಇಂದೂ (ಶನಿವಾರ) ಮುಂದುವರೆದಿದ್ದು,  ಕಳೆದ 24 ಗಂಟೆಗಳ ಅವಧಿಯಲ್ಲಿ ಬರೋಬ್ಬರಿ 29438 ಹೊಸ ಕೇಸ್‍ಗಳು ವರದಿಯಾಗಿವೆ. ಈ ಮೂಲಕ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 234483ಕ್ಕೆ ಏರಿಕೆಯಾಗಿದೆ.

 ಶನಿವಾರ 9058 ಜನರು ಕೋವಿಡ್ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಹಾಗೂ ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಬರೋಬ್ಬರಿ 208 ಜನರು ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಇದುವರೆಗೆ ರಾಜ್ಯದಲ್ಲಿ ಕೋವಿಡ್‍ಗೆ ಬಲಿಯಾದವರ ಸಂಖ್ಯೆ 14283ಕ್ಕೇರಿದೆ ಎಂದು ಕರ್ನಾಟಕ ಆರೋಗ್ಯ ಇಲಾಖೆ ಹೆಲ್ತ್‌ ಬುಲೆಟಿನ್ ಬಿಡುಗಡೆ ಮಾಡಿದೆ. 

Latest Videos

undefined

ಕೊರೋನಾ 2ನೇ ಅಲೆ ಇಷ್ಟಕ್ಕೆ ನಿಲ್ಲೋದಿಲ್ಲ: ಶಾಕ್ ಕೊಟ್ಟ ಸುಧಾಕರ್

ಬೆಂಗಳೂರಿನಲ್ಲಿ ಅತೀ ಹೆಚ್ಚು :

ಕಳೆದ 24 ಗಂಟೆಯಲ್ಲಿ ಬೆಂಗಳೂರು ನಗರದಲ್ಲಿ ಬರೋಬ್ಬರಿ 17342 ಹೊಸ ಪ್ರಕರಣಗಳು ವರದಿಯಾಗಿವೆ.  4646 ಜನರು ಸೇರಿದಂತೆ ಇದುವರೆಗೆ 4,65,028 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹೀಗಾಗಿ ನಗರದಲ್ಲಿ 1,62,171 ಸಕ್ರಿಯ ಕೇಸ್‌ಗಳಿವೆ.

ಇನ್ನು ಸಿಲಿಕಾನ್ ಸಿಟಿಯಲ್ಲಿ ಮರಣಮೃದಂಗ ಮುಂದುವರೆದಿದ್ದು, ಶನಿವಾರ ಕಿಲ್ಲರ್ ಕೊರೋನಾಗೆ 149 ಜನ ಬಲಿಯಾಗಿದ್ದಾರೆ. ಹೀಗಾಗಿ ನಗರದಲ್ಲಿ ಕೊರೋನಾದಿಂದ ಸೋಂಕಿತರಾಗಿ ಸಾವನ್ನಪ್ಪಿದವರ ಸಂಖ್ಯೆ 5,723ಕ್ಕೆ ಏರಿಕೆಯಾಗಿದೆ.

click me!