'ರೆಮಿಡಿಸಿವರ್ ಕೊರತೆಯಾಗಿದೆ ಎಂದು ಗಾಬರಿ ಹುಟ್ಟಿಸುವ ಕೆಲಸವಾಗುತ್ತಿದೆ'

Published : Apr 24, 2021, 05:07 PM IST
'ರೆಮಿಡಿಸಿವರ್ ಕೊರತೆಯಾಗಿದೆ ಎಂದು ಗಾಬರಿ ಹುಟ್ಟಿಸುವ ಕೆಲಸವಾಗುತ್ತಿದೆ'

ಸಾರಾಂಶ

ರೆಮಿಡಿಸಿವರ್ ಹಾಗೂ ಆಕ್ಸಿಜನ್ ಕೊರತೆ ಇಲ್ಲದೇ ಕೊರೋನಾ ಸೋಂತಿರು ಸಾವನ್ನಪ್ಪುತ್ತಿದ್ದಾರೆ. ಇನ್ನು ಈ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದು ಹೀಗೆ

ಧಾರವಾಡ, (ಏ.24): ಕೋವಿಡ್ ಬಗ್ಗೆ ಜನರು ಭಯಪಡುವ ಅಗತ್ಯವಿಲ್ಲ.ಆದರೆ ಜನರು ಜಾಗೃತರಾಗಬೇಕು. ರೆಮಿಡಿಸಿವರ್ ಅಂತಿಮ ಪರಿಹಾರವಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಕೋವಿಡ್ ರೋಗಿಗಳಿಗಾಗಿ ವಿಶೇಷ ಹೆಚ್ಚುವರಿ 10 ಅಂಬ್ಯುಲೆನ್ಸ್ ಸಿದ್ದ ಪಡಿಸಲಾಗಿದೆ. ಜನರು ಜಾಗೃತರಾಗಿರಬೇಕು, ಆದ್ರೆ ಭಯಪಡುವ ಅಗತ್ಯವಿಲ್ಲ. ಅನಗತ್ಯವಾಗಿ ಜನರು ರಸ್ತೆಯಲ್ಲಿ ಓಡಾಡುವುದು ಬೇಡ. ಕೊರೋನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದೆ. ಅನಿರೀಕ್ಷಿತವಾಗಿ ಬಂದ ಈ ತುರ್ತು ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸಬೇಕಿದೆ ಎಂದು ಹೇಳಿದರು.

ರೆಮ್‌ಡಿಸಿವಿಯರ್‌ ಇಂಜೆಕ್ಷನ್‌ ಕಾಳಸಂತೆಯಲ್ಲಿ ಮಾರಾಟ..!

ಜನರು ಅಗತ್ಯಕ್ಕಿಂತಲೂ ಹೆಚ್ಚು ಭಯ ಭೀತಿ ಗೊಳ್ಳುತ್ತಿದ್ದಾರೆ. ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೆ ಅಗತ್ಯ ವಾಕ್ಸಿನ್ ಪೂರೈಕೆ ಮಾಡುತ್ತಿದೆ. ರೆಮಿಡಿಸಿವರ್ ಅಂತಿಮ ಪರಿಹಾರವಲ್ಲ. ರೆಮಿಡಿಸಿವರ್ ಕೊರತೆಯಾಗಿದೆ ಎಂದು ಗಾಬರಿ ಹುಟ್ಟಿಸುವ ಕೆಲಸವಾಗುತ್ತಿದೆ ಎಂದು ತಿಳಿಸಿದರು.

ಇನ್ನೂ ದೊಡ್ಡ ನಗರಗಳಲ್ಲಿ ಆಕ್ಸಿಜನ್ ಕೊರತೆಯಾಗಿದ್ದು ನಿಜ, ಆದರೆ ಏರ್ ಲಿಪ್ಟಿಂಗ್, ರೈಲ್ವೇ ಮೂಲಕ ಆಕ್ಸಿಜನ್ ಪೂರೈಸುವ ಕೆಲಸ ಕೇಂದ್ರ ಸರ್ಕಾರ ಮಾಡಿದೆ ಎಂದು ಸಮಜಾಯಿಷಿ ನೀಡಿದರು.

ಕರ್ನಾಟಕದ ವಿಚಾರದಲ್ಲೂ ಕೇಂದ್ರ ಮುತುವರ್ಜಿ ವಹಿಸಿದೆ. ಆರೋಗ್ಯ ಸಚಿವರು ನಿರಂತರವಾದ ಸಮರ್ಪಕದಲ್ಲಿದ್ದಾರೆ. ಬಳ್ಳಾರಿಯಿಂದ ಪೂರೈಕೆಯಾಗುವ ಆಕ್ಸಿಜನ್ ಬಗ್ಗೆ ಮಾತುಕತೆ ನಡೆದಿದೆ. ಆಕ್ಸಿಜನ್ ಸಿಗುವುದಿಲ್ಲ ಎಂದು ಯಾರು ಭಯಪಡಬೇಡಿ . ಇಂದಿನಿಂದ ಕೇಂದ್ರ ಸರ್ಕಾರ, ರಾಜ್ಯಕ್ಕೆ ಆಕ್ಸಿಜನ್ ಹಂಚಿಕೆ ಜಾಸ್ತಿ‌ಮಾಡಿದೆ ಎಂದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಜೈಲೇ ಗತಿ, ಜಾಮೀನು ಅರ್ಜಿ ತಿರಸ್ಕೃತ
ಬಿಡಿಎ ಸೈಟ್ ತಗೊಂಡ್ರೆ ಚಿಪ್ಪೇ ಗತಿ; ಕೆಂಪೇಗೌಡ ಲೇಔಟ್ ಸೈಟ್ ತಗೊಂಡು 15 ವರ್ಷವಾದ್ರೂ ಸೈಟೂ ಇಲ್ಲ, ಸಾಲನೂ ಸಿಗ್ತಿಲ್ಲ!