Covid Crisis: ಕರ್ನಾಟಕದಲ್ಲಿ ಕೇವಲ 29 ಮಂದಿಗೆ ಕೋವಿಡ್: 23 ತಿಂಗಳಲ್ಲೇ ಕನಿಷ್ಠ

By Girish Goudar  |  First Published Apr 6, 2022, 10:36 AM IST

*   ಒಂದೂ ಸಾವು ಇಲ್ಲ, 61 ಮಂದಿ ಗುಣ
*  ಸಕ್ರಿಯ ಕೇಸು 1468ಕ್ಕೆ ಇಳಿಕೆ
*  27 ಜಿಲ್ಲೆಗಳಲ್ಲಿ ಒಂದೂ ಕೇಸಿಲ್ಲ
 


ಬೆಂಗಳೂರು(ಏ.06):  ರಾಜ್ಯದಲ್ಲಿ ಮಂಗಳವಾರ 29 ಮಂದಿಯಲ್ಲಿ ಕೊರೋನಾ(Coronavirus) ಸೋಂಕು ದೃಢಪಟ್ಟಿದೆ. 2020ರ ಮೇ 14 ರಂದು 28 ಪ್ರಕರಣ ವರದಿಯಾದ ಬಳಿಕದ ಕನಿಷ್ಠ ಪ್ರಕರಣವಿದು. ಸೋಂಕಿನಿಂದ ಯಾರೊಬ್ಬರು ಮೃತಪಟ್ಟಿಲ್ಲ(Death). 12,376 ಕೋವಿಡ್ಪರೀಕ್ಷೆ(Covid Test) ನಡೆದಿದ್ದು ಶೇ. 0.23 ಪಾಸಿಟಿವಿಟಿ ದರ ದಾಖಲಾಗಿದೆ. ಈ ಮಧ್ಯೆ 61 ಮಂದಿ ಚೇತರಿಸಿಕೊಂಡಿದ್ದು ಸಕ್ರಿಯ ಪ್ರಕರಣಗಳ ಸಂಖ್ಯೆ 1,468ಕ್ಕೆ ಕುಸಿದಿದೆ. 

ಬೆಂಗಳೂರು ನಗರದಲ್ಲಿ 24, ಕಲಬುರಗಿ 2, ರಾಮನಗರ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಲಾ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ರಾಜ್ಯದಲ್ಲಿ ಈವರೆಗೆ ಒಟ್ಟು 39.45 ಲಕ್ಷ ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು 39.04 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ. ಈವರೆಗೆ ಒಟ್ಟು 40,055 ಮಂದಿ ಮರಣವನ್ನಪ್ಪಿದ್ದಾರೆ.

Tap to resize

Latest Videos

undefined

Covid Mask ಮಾಸ್ಕ್ ಕಡ್ಡಾಯ ನಿಮಯ ಹಿಂತೆಗೆಯಬೇಕೆ? ಜನಸಾಮಾನ್ಯರ ಅಭಿಪ್ರಾಯವೇನು?

83 ಸಾವಿರ ಮಂದಿಗೆ ಲಸಿಕೆ:

ರಾಜ್ಯದಲ್ಲಿ(Karnataka)  ಮಂಗಳವಾರ 83,818 ಮಂದಿ ಕೋವಿಡ್ವಿರುದ್ಧ ಲಸಿಕೆ(Vaccine) ಪಡೆದಿದ್ದಾರೆ. 60,412 ಮಂದಿ ಮೊದಲ ಡೋಸ್, 17,060 ಮಂದಿ ಎರಡನೇ ಡೋಸ್ಮತ್ತು 6,340 ಮಂದಿ ಮುನ್ನೆಚ್ಚರಿಕೆ ಡೋಸ್ಸ್ವೀಕರಿಸಿದ್ದಾರೆ. ಒಟ್ಟು 10.44 ಕೋಟಿ ಡೋಸ್ಲಸಿಕೆ ನೀಡಲಾಗಿದೆ.

ಬೆಂಗಳೂರಲ್ಲಿ 24 ಮಂದಿಗೆ ಸೋಂಕು, 

ಬೆಂಗಳೂರು: ರಾಜಧಾನಿಯಲ್ಲಿ(Bengaluru) ಮಂಗಳವಾರ 24 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, 47 ಮಂದಿ ಗುಣಮುಖರಾಗಿದ್ದಾರೆ. ಸೋಂಕಿತರ ಸಾವು ವರದಿಯಾಗಿಲ್ಲ. ಸದ್ಯ 1,376 ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. ಸೋಂಕು ಪರೀಕ್ಷೆಗಳು 6,691 ನಡೆದಿದ್ದು, ಪಾಸಿಟಿವಿಟಿ ದರ ಶೇ.0.5 ರಷ್ಟು ದಾಖಲಾಗಿದೆ. ಸೋಮವಾರಕ್ಕೆ ಹೋಲಿಸಿದರೆ ಪರೀಕ್ಷೆಗಳು ಮೂರು ಸಾವಿರದಷ್ಟುಏರಿಕೆಯಾಗಿವೆ. ಆದರೂ, ಹೊಸ ಸೋಂಕಿತರ ಸಂಖ್ಯೆ 12 ಇಳಿಕೆಯಾಗಿವೆ. (ಸೋಮವಾರ 36 ಪ್ರಕರಣ, ಒಂದು ಸಾವು).

ಸತತ 10ನೇ ದಿನ ಹೊಸ ಕೊರೋನಾ ಕಂಟೈನ್ಮೆಂಟ್ಪ್ರದೇಶಗಳು ವರದಿಯಾಗಿಲ್ಲ. ಸದ್ಯ ಸಕ್ರಿಯ ಸೋಂಕಿತರ ಪೈಕಿ 19 ಮಂದಿ ಆಸ್ಪತ್ರೆಯಲ್ಲಿದ್ದು, ಈ ಪೈಕಿ ಐದು ಮಂದಿ ವೆಂಟಿಲೇಟರ್ನಲ್ಲಿ, ಇಬ್ಬರು ಐಸಿಯುನಲ್ಲಿ, ಐದು ಮಂದಿ ಆಕ್ಸಿಜನ್, ಸಾಮಾನ್ಯ ಹಾಸಿಗೆಗಳಲ್ಲಿ 7 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ ಸೋಂಕಿಗೆ ಒಳಗಾದವರ ಸಂಖ್ಯೆ 17.81 ಲಕ್ಷಕ್ಕೆ, ಗುಣಮುಖರ ಸಂಖ್ಯೆ 17.62 ಲಕ್ಷಕ್ಕೆ, ಸಾವಿನ ಸಂಖ್ಯೆ 16,963ಕ್ಕೆ ಏರಿಕೆಯಾಗಿದೆ ಎಂದು ಬಿಬಿಎಂಪಿ ಕೊರೋನಾ ವರದಿಯಲ್ಲಿ ತಿಳಿಸಲಾಗಿದೆ.

Covid Crisis: 12ರಿಂದ 14 ರೊಳಗಿನ 11.46% ಮಕ್ಕಳಿಗಷ್ಟೇ ಕೊರೋನಾ ಲಸಿಕೆ

ನಿನ್ನೆ 795 ಪ್ರಕರಣ, 58 ಸಾವು: ಸಕ್ರಿಯ ಕೇಸು 12054ಕ್ಕೆ ಇಳಿಕೆ

ನವದೆಹಲಿ: ದೇಶದಲ್ಲಿ ಕೋವಿಡ್ಪ್ರಕರಣಗಳ ಸಂಖ್ಯೆಯಲ್ಲಿ ಮತ್ತಷ್ಟುಇಳಿಕೆಯಾಗಿದ್ದು, ಮಂಗಳವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ ಕೇವಲ 795 ಹೊಸ ಕೋವಿಡ್ಪ್ರಕರಣಗಳು ದಾಖಲಾಗಿವೆ.
ಇದೇ ವೇಳೆ 58 ಸೋಂಕಿತರು ಸಾವಿಗೀಡಾಗಿದ್ದಾರೆ. ಇದರಲ್ಲಿ 56 ಸಾವುಗಳು ಕೇರಳದಲ್ಲಿ ವರದಿಯಾಗಿವೆ. ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 12,054ಕ್ಕೆ ಇಳಿಕೆಯಾಗಿದೆ. ದೈನಂದಿನ ಪಾಸಿಟಿವಿಟಿ ದರವು ಶೇ. 0.17ರಷ್ಟಿದ್ದು, ವಾರದ ಪಾಸಿಟಿವಿಟಿ ದರವು ಶೇ. 0.22ರಷ್ಟಿದೆ. ಕೋವಿಡ್ಚೇತರಿಕೆ ದರವು ಶೇ. 98.76 ರಷ್ಟಿದೆ. ಈವರೆಗೆ ದೇಶದಲ್ಲಿ ಒಟ್ಟು 184.87 ಕೋಟಿ ಡೋಸು ಕೋವಿಡ್ಲಸಿಕೆಯನ್ನು ವಿತರಿಸಲಾಗಿದೆ.

ಕರ್ನಾಟಕದಲ್ಲೂ ಮಾಸ್ಕ್ಕಡ್ಡಾಯ ನಿಯಮ ರದ್ದು?

ಕೆಲ ದೇಶಗಳಲ್ಲಿ ಕೋವಿಡ್ರ(Covid-19) ನಾಲ್ಕನೇ ಅಲೆ ಬಗ್ಗೆ ಚರ್ಚೆ ನಡೆಯುತ್ತಿರುವುದರಿಂದ ರಾಜ್ಯದಲ್ಲಿ ಸದ್ಯ ಜಾರಿಯಲ್ಲಿರುವ ಮಾಸ್ಕ್(Mask) ಧಾರಣೆ ಕಡ್ಡಾಯ ನೀತಿಯನ್ನು ಸಡಿಲಿಸಬೇಕೇ ಅಥವಾ ಮುಂದುವರಿಸಬೇಕೇ ಎಂಬ ಬಗ್ಗೆ ಕೋವಿಡ್ತಾಂತ್ರಿಕ ಸಲಹಾ ಸಮಿತಿ ಸದಸ್ಯರ ಜೊತೆ ಸಮಾಲೋಚಿಸಿ ತೀರ್ಮಾನಿಸಲಾಗುವುದು ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್(K Sudhakar) ಹೇಳಿದ್ದರು.
 

click me!