* ಹಿಂಸೆಗೆ ಪ್ರಚೋದಿಸಿ ರಾಮನ ಹೆಸರಿಗೆ ಕಳಂಕ ತರಬೇಡಿ
* ದಯಮಾಡಿ ಮರ್ಯಾದಾ ಪುರುಷೋತ್ತಮನ ಹೆಸರಿಗೆ ಕಳಂಕ ತರಬೇಡಿ
* ನಾಲಿಗೆ ಬಿಗಿ ಹಿಡಿದು ಮಾತನಾಡಿ: ಎಚ್‌ಡಿಕೆಗೆ ಮುತಾಲಿಕ್ ತಿರುಗೇಟು
ಬೆಂಗಳೂರು(ಏ.06): ದಯಮಾಡಿ ಮರ್ಯಾದಾ ಪುರುಷೋತ್ತಮ ಶ್ರೀರಾಮನ(Lord Rama) ಹೆಸರಿಗೆ ಕಳಂಕ ತರಬೇಡಿ. ಅಂಥ ಕೃತ್ಯಗಳನ್ನು ಎಸಗಲು ರಾವಣನ(Ravana) ಹೆಸರಿಟ್ಟುಕೊಳ್ಳಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ(HD Kumaraswamy) ಅವರು ಶ್ರೀರಾಮಸೇನೆ ವಿರುದ್ಧ ಹರಿಹಾಯ್ದಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಕೆಲವರು ರಾಮಸೇನೆ(Sri Ram Sena), ಇನ್ಯಾವುದೋ ಸೇನೆ ಎಂದು ಹೆಸರು ಇಟ್ಟುಕೊಂಡಿದ್ದಾರೆ. ರಾಮನ ಹೆಸರಿಟ್ಟುಕೊಂಡು ಹಿಂಸೆಯನ್ನು(Violence) ಪ್ರಚೋದಿಸುತ್ತಿದ್ದಾರೆ. ಅಂತಹವರು ರಾವಣಸೇನೆ ಎಂದು ಹೆಸರಿಟ್ಟುಕೊಂಡರೆ ಉತ್ತಮ. ಇವರು ರಾಮನ ಹೆಸರಿಗೆ ಯಾಕೆ ಕಳಂಕ ತರುತ್ತಿದ್ದಾರೆ. ದಯಮಾಡಿ ಮರ್ಯಾದಾ ಪುರುಷೋತ್ತಮನ ಹೆಸರಿಗೆ ಕಳಂಕ ತರಬೇಡಿ ಎಂದು ಕಿಡಿಕಾರಿದರು.
ಬಿಜೆಪಿ ಸಹಕಾರ ಕೊಡದಿದ್ರೆ ನಿಮ್ಮನ್ನು ಯಾರು ಮೂಸುತ್ತಿರಲಿಲ್ಲ, ಎಚ್‌ಡಿಕೆಗೆ ತಿವಿದ ರೇಣುಕಾಚಾರ್ಯ
ಪದೇ ಪದೇ ಬಿಜೆಪಿಯ(BJP) ಅಂಗ ಸಂಸ್ಥೆಗಳು ಈ ರೀತಿ ಸಾಮರಸ್ಯ ಹಾಳು ಮಾಡುತ್ತಿವೆ. ನಿಜಕ್ಕೂ ನಮ್ಮ ಸಂಸ್ಕೃತಿಗೆ ಅಗೌರವ ತೋರಿಸುತ್ತಿದ್ದಾರೆ. ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ನಂತರವೂ ಈ ವಿಚಾರವನ್ನು ಲಘುವಾಗಿ ಪರಿಗಣಿಸಲಾಗುತ್ತಿದೆ. ದಿನಕ್ಕೆ ಒಂದು ವಿಚಾರ ಪ್ರಾರಂಭ ಮಾಡುತ್ತಿದ್ದಾರೆ. ನಿಜವಾಗಿಯೂ ಅವರು ರಾಮಭಕ್ತರೇ ಆಗಿದ್ದರೆ ದಿನನಿತ್ಯದಲ್ಲಿ ನಮ್ಮ ಪರಂಪರಾಗತ ಸಂಪ್ರದಾಯ ಆಚರಣೆಗೆ ಒತ್ತು ಕೊಟ್ಟರೆ ಹಿಂದೂ ಧರ್ಮ ಕಾಪಾಡಿದಂತಾಗುತ್ತದೆ ಎಂದರು.
ಸಿಎಂಗೆ ತರಾಟೆ:
‘ರಾಮನ ಹೆಸರಲ್ಲಿ ದೇಶ(India) ಹಾಳು ಮಾಡಬೇಡಿ. ಇದೆಲ್ಲದರ ಹಿಂದೆ ರಾಜಕೀಯ(Politics) ಅಜೆಂಡಾ ಇದೆ. ಪ್ರಧಾನಿ ನರೇಂದ್ರ ಮೋದಿ(Narendra Modi) ನೋಡಿದರೆ ಸಂಸತ್‌ಗೆ ಸಮಸ್ಕಾರ ಮಾಡುತ್ತಾರೆ, ಸಂವಿಧಾನಕ್ಕೆ ಗೌರವ ನೀಡುತ್ತಾರೆ. ಇಲ್ಲಿಯೂ ವಿಧಾನಸೌಧದ ಮುಂಭಾಗದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ನಮಸ್ಕಾರ ಮಾಡಿದ್ದರು. ಇಂತಹ ಕೆಲಸಗಳನ್ನು ಮಾಡಲಿಕ್ಕೆ ವಿಧಾನಸೌಧಕ್ಕೆ ಅಡ್ಡ ಬಿದ್ದಿರಾ ಬೊಮ್ಮಾಯಿಯವರೇ? ಎಂದು ಖಾರವಾಗಿ ಪ್ರಶ್ನಿಸಿದರು.
ಸಿಎಂ ಮೌನಿಬಾಬಾ
ಜನರ ಬವಣೆ ಕಡೆಗಣಿಸಿ ಚುನಾವಣೆ ಮಾಡುತ್ತೀರಾ ಮುಖ್ಯಮಂತ್ರಿಗಳೇ? ನೀವು ಮೌನಿ ಬಾಬಾ ಆಗಿದ್ದೀರಿ. ನಿಮ್ಮಿಂದ ಏನೂ ಮಾಡಲಾಗುವುದಿಲ್ಲ. ಈ ರಾಜ್ಯದಲ್ಲಿ ಮುಖ್ಯಮಂತ್ರಿ ಇದಾರಾ, ಸರ್ಕಾರ ಇದೆಯಾ ಎನ್ನುವ ಸಂಶಯ ಬಂದಿದೆ. ಈ ಸರ್ಕಾರವನ್ನು ಯಾರೋ ನಡೆಸುತ್ತಿದ್ದಾರೆ ಅಂತ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ನಮಗೆ ಕೊಟ್ಟ ಕಿರುಕುಳ ಜನತೆ ಅನುಭವಿಸಬೇಕಿದೆ, ಹಿಂದೂ ಯುವಕರಿಗೆ ಕೈ ಮುಗಿದು ಮನವಿ ಮಾಡಿದ HDK
ರಾಜಕಾರಣಿಗಳು ರಾವಣನ ವಂಶದವರು
ಧಾರವಾಡ: ರಾಜಕಾರಣಿಗಳೇ ರಾವಣನ ವಂಶದವರು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್(Pramod Mutalik) ತಿರುಗೇಟು ನೀಡಿದ್ದಾರೆ.
ಹಿಂದೂಪರ ಸಂಘಟನೆಗಳನ್ನು ರಾವಣನಿಗೆ ಹೋಲಿಸಿದ ಕುಮಾರಸ್ವಾಮಿಯೇ ರಾವಣನ ವಂಶಜರು. ನಾವು ನ್ಯಾಯಾಲಯದ ಆದೇಶದ ಆಧಾರದ ಮೇಲೆ ಹೋರಾಟ ಮಾಡುತ್ತಿದ್ದೇವೆಯೇ ಹೊರತು ಮತ್ತೇನಿಲ್ಲ. ರಾಮನ ಹೆಸರಿನ ಮೇಲೆ ಕೆಲಸ ಮಾಡುತ್ತಿದ್ದೇವೆ. ತಾವು ನಾಲ್ಕು ದಶಕಗಳಿಂದ ಜನರ ಹಣ ನುಂಗಿ ನೀರು ಕುಡಿದಿದ್ದೀರಿ. ನಿಮ್ಮಿಂದ ನಾವು ಏನೂ ಕಲಿಯಬೇಕಿಲ್ಲ. ಹಿಂದೂಪರ ಸಂಘಟನೆಗಳ(Hindu Organizations) ಬಗ್ಗೆ ಮಾತನಾಡುವಾಗ ನಾಲಿಗೆ ಬಿಗಿ ಹಿಡಿದು ಮಾತನಾಡಿ. ಅಷ್ಟಕ್ಕೂ ಈ ವಿಷಯದ ಬಗ್ಗೆ ಚರ್ಚೆ ಮಾಡಬೇಕಿದ್ದರೆ ಎದುರಿಗೆ ಬನ್ನಿ ಮಾತನಾಡೋಣ ಎಂದು ಮುತಾಲಿಕ್ ಸವಾಲು ಹಾಕಿದರು.
ರಾಜ್ಯಾದ್ಯಂತ ಮುಸ್ಲಿಂ ವ್ಯಾಪಾರ ನಿರ್ಬಂಧಿಸಬೇಕು:
ಮುಸ್ಲಿಂರ ಮಾನಸಿಕತೆ ಬದಲಾಗುವವರೆಗೂ ಗೋಹತ್ಯೆ, ಗೋಮಾಂಸ ತಿನ್ನುವುದನ್ನು ನಿಲ್ಲಿಸುವವರೆಗೂ ಮುಸ್ಲಿಮರ ಜತೆ ವ್ಯಾಪಾರ ವಹಿವಾಟ ಬಂದ್ ಮಾಡಲಾಗುತ್ತದೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ್ ಹೇಳಿದ್ದಾರೆ. ಸವದತ್ತಿ ಯಲ್ಲಮ್ಮ ದೇವಸ್ಥಾನ ಆವರಣದಲ್ಲಿರುವ ಮುಸ್ಲಿಂ ಅಂಗಡಿಗಳನ್ನು ತೆಗೆಸುತ್ತೇವೆ. ದೇವಸ್ಥಾನದ ನೂರು ಮೀಟರ್ ಆವರಣದಲ್ಲಿ ಅಂಗಡಿ ಇರಬಾರದು. ಮೊದಲಿಗೆ ಮುಜರಾಯಿ ಅಧಿಕಾರಿಗಳಿಂದ ನೋಟಿಸ್ ಕೊಡಿಸುತ್ತೇವೆ. ನೋಟಿಸ್ ಕೊಟ್ಟನಂತರವೂ ಅಂಗಡಿಗಳನ್ನು ತೆರವು ಮಾಡದಿದ್ದರೆ ನಾವೇ ಅಂಗಡಿ ತೆಗೆಸ ಮುನ್ನುಗ್ಗುತ್ತೇವೆ ಎಂದು ಇದೇ ವೇಳೆ ಮುತಾಲಿಕ್ ಎಚ್ಚರಿಕೆ ನೀಡಿದರು.