ಸೇಡಂ (ಕಲಬುರಗಿ) (ನ.15) : ರಾಜ್ಯದ 32 ಲಕ್ಷ ರೈತರಿಗೆ 24 ಸಾವಿರ ಕೋಟಿ ರುಪಾಯಿ ಸಾಲ ನೀಡುವ ತೀರ್ಮಾನವನ್ನು ನಮ್ಮ ಸರ್ಕಾರ ತೆಗೆದುಕೊಂಡಿದೆ. ಇದು ನಮ್ಮ ಸರ್ಕಾರ ಸಹಕಾರ ಕ್ಷೇತ್ರಕ್ಕೆ ಮತ್ತು ರೈತರಿಗೆ ಕೊಟ್ಟಕೊಡುಗೆಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಸೇಡಂ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ 69ನೇ ಅಖಿಲ ಭಾರತ ಸಹಕಾರ ಸಪ್ತಾಹ 2022 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರೈತನ ಬದುಕು ಹಸನಾಗಬೇಕಾದರೆ ರೈತನಿಗೆ ಸ್ಕೇಲ್ ಆಫ್ ಫೈನಾನ್ಸ್ ಆಧಾರದಲ್ಲಿ ಬೆಳೆದ ಬೆಳೆಗೆ ದರ ನಿರ್ಧಾರವಾಗಬೇಕು. ಆ ಮೂಲಕ ರೈತ ಸ್ವಾವಲಂಬಿಯಾಗಬೇಕು. ಸ್ವಾಭಿಮಾನ ಇಲ್ಲದಲ್ಲಿ ಆತ್ಮಾಭಿಮಾನವಿಲ್ಲ, ಆತ್ಮಾಭಿಮಾನವಿಲ್ಲದಲ್ಲಿ ಸಾಧನೆಯಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಜಾರಿಗೆ ತಂದಿರುವ ಕಾಯಕ ಯೋಜನೆಗಳ ಅನುಷ್ಠಾನವಾಗಬೇಕು. ರೈತರಿಗೆ ಅಲ್ಪಾವಧಿ ಸಾಲ ವಿತರಣೆಯಾಗಬೇಕು ಎಂದರು.
ಸೇಡಂ: ಇಂದು ಅಖಿಲ ಭಾರತ 69ನೇ ಸಹಕಾರ ಸಪ್ತಾಹಕ್ಕೆ 1 ಲಕ್ಷ ಜನ
ಮನುಷ್ಯ ಸಂಘ ಜೀವಿ ಮನುಷ್ಯನ ಜೀವನದ ಪ್ರತಿ ಹಂತವೂ ಸಮಾಜದೊಂದಿಗಿನ ಪರಸ್ಪರ ಸಹಕಾರದ ಮೇಲೆ ಅವಲಂಬನೆಯಾಗಿದೆ. ಹಾಗಾಗಿ ಸಹಕಾರವು ಮನುಕುಲದ ಸಹಜ ಹಾಗು ನೈಜ ಧರ್ಮ. ನಾವು ಭಾರತೀಯರು ಎನ್ನುವುದೇ ನಮ್ಮ ಅಸ್ತಿತ್ವ. ಇಡೀ ನಮ್ಮ ಬದುಕೇ ಸಹಕಾರದ ಮೇಲೆ ಆಧಾರವಾಗಿದೆ. ಸಹಕಾರದಿಂದ ಏನನ್ನಾದರೂ ಸಾಧಿಸಬಹುದು ಎಂದರು.
ಮುಚ್ಚುವ ಹಂತದಲ್ಲಿದ್ದ ಕಲಬುರಗಿ ಯಾದಗಿರಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕನ್ನು ಪುನಶ್ಚೇತನ ಗೊಳಿಸಿ ಇಲ್ಲಿಯವರೆಗೆ 2 ಲಕ್ಷ ರೈತರಿಗೆ ಸಾಲ ಕೊಟ್ಟಬ್ಯಾಂಕಿನ ಅಧ್ಯಕ್ಷ ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ್ ಅವರು ರೈತರ ಬದುಕು ಉದ್ಧಾರದ ಕೆಲಸ ಮಾಡಿದ್ದಾರೆ. ಇದು ಬಹು ದೊಡ್ಡ ಕೊಡುಗೆ ಎಂದು ಶಾಸಕ ತೇಲ್ಕೂರ್ ಕೆಲಸಗಳನ್ನು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಸಹಕಾರ ಮಹಾಮಂಡಳ ದ ಅಧ್ಯಕ್ಷ ಜಿ.ಟಿ. ದೇವೇಗೌಡ, ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ, ಕೇಂದ್ರ ಸಚಿವ ಭಗವಂತ ಖೂಬಾ, ಸಂಸದ ಉಮೇಶ ಜಾಧವ, ಸೇಡಂ ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಾಜಕುಮಾರ ಪಾಟೀಲ ತೇಲ್ಕೂರ್ ಮಾತನಾಡಿದರು. ಇದೇ ವೇಳೆ ಸೇಡಂ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ್ ಸೇರಿದಂತೆ ಹದಿನಾಲ್ಕು ಮಂದಿಗೆ ಜನ ಸಹಕಾರಿಗಳಿಗೆ ಸಹಕಾರ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
BJP Janasankalpa Yatre: ಸಿಎಂ ನೇತೃತ್ವದಲ್ಲಿ ಕಡೂರು ತಾಲೂಕಿನಲ್ಲಿ ಜನ ಸಂಕಲ್ಪ ಸಮಾವೇಶ
ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ, ಶಾಸಕರಾದ ರಾಜುಗೌಡ, ಬಾಬುರಾವ್ ಚಿಂಚನಸೂರ, ಬಸವರಾಜ ಮತ್ತಮೂಡ, ಡಾ.ಅವಿನಾಶ ಜಾಧವ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.