* ಸೋಂಕಿನಿಂದ ಚೇತರಿಸಿಕೊಂಡವರ ಒಟ್ಟು ಪ್ರಮಾಣ ಶೇ.98.91ಕ್ಕೆ ಏರಿಕೆ
* ಕೋವಿಡ್ ಮತ್ತಷ್ಟು ಇಳಿಕೆ: 4184 ಕೇಸು, 104 ಸಾವು
* ಬೆಂಗಳೂರಲ್ಲಿ 158 ಹೊಸ ಕೇಸ್ ಪತ್ತೆ: 147 ಮಂದಿ ಗುಣ
ಬೆಂಗಳೂರು(ಮಾ.11): ರಾಜ್ಯದಲ್ಲಿ(Karnataka) ಗುರುವಾರ 217 ಮಂದಿಯಲ್ಲಿ ಕೊರೋನಾ(Coronavirus) ಪತ್ತೆಯಾಗಿದ್ದು, 7 ಮಂದಿ ಅಸುನೀಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 2,846ಕ್ಕೆ ಇಳಿಕೆಯಾಗಿದ್ದು, ಈ ಪೈಕಿ 2,272 ಸಕ್ರಿಯ ಪ್ರಕರಣಗಳು ಬೆಂಗಳೂರು ನಗರದಲ್ಲಿ ಹಾಗೂ ಉಳಿದ ಭಾಗದಲ್ಲಿ 574 ಪ್ರಕರಣ ವರದಿಯಾಗಿದೆ. ಸದ್ಯ ಸೋಂಕಿನಿಂದ ಚೇತರಿಸಿಕೊಂಡವರ ಒಟ್ಟು ಪ್ರಮಾಣ ಶೇ.98.91ಕ್ಕೆ ಏರಿಕೆ ಆಗಿದೆ.
ಬೆಂಗಳೂರು ನಗರದಲ್ಲಿ 158 ಪ್ರಕರಣ ಪತ್ತೆಯಾಗಿದೆ. ಚಿತ್ರದುರ್ಗ ಮತ್ತು ಮೈಸೂರು ತಲಾ 9, ರಾಮನಗರ 7 ಮತ್ತು ಶಿವಮೊಗ್ಗದಲ್ಲಿ 5 ಪ್ರಕರಣ ಬೆಳಕಿಗೆ ಬಂದಿದೆ. ಉಡುಪಿ, ರಾಯಚೂರು, ಕೊಪ್ಪಳ, ಕೊಡಗು, ಹಾಸನ, ಹಾವೇರಿ, ಗದಗ, ಧಾರವಾಡ, ಚಿಕ್ಕಮಗಳೂರು, ಬೀದರ್, ಚಾಮರಾಜನಗರ ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ಹೊಸ ಪ್ರಕರಣ ವರದಿಯಾಗಿಲ್ಲ. ಬೆಂಗಳೂರು ನಗರದಲ್ಲಿ ಮೂವರು, ದಕ್ಷಿಣ ಕನ್ನಡ, ಧಾರವಾಡ, ಮಂಡ್ಯ ಮತ್ತು ರಾಯಚೂರಿನಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. ಗುರುವಾರ 64,900 ಮಂದಿ ಕೋವಿಡ್ ಲಸಿಕೆ ಪಡೆದುಕೊಂಡಿದ್ದಾರೆ.
undefined
Covid Crisis: ಕೊರೋನಾ ದಿಢೀರ್ ಹೆಚ್ಚಳ..!
ಬೆಂಗಳೂರು ನಗರದಲ್ಲಿ 158 ಹೊಸ ಕೇಸ್ ಪತ್ತೆ: 147 ಮಂದಿ ಗುಣ
ಬೆಂಗಳೂರು(Bengaluru) ನಗರದಲ್ಲಿ ಗುರುವಾರ 158 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, ಮೂವರು ಸಾವಿಗೀಡಾಗಿದ್ದಾರೆ(Death). 147 ಮಂದಿ ಗುಣಮುಖರಾಗಿದ್ದಾರೆ. ಸದ್ಯ 2272 ಸಕ್ರಿಯ ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. ಗುರುವಾರ 14 ಸಾವಿರ ಪರೀಕ್ಷೆ ನಡೆದಿದ್ದು, ಶೇ.0.9 ರಷ್ಟು ಪಾಸಿಟಿವಿಟಿ ದರ(Positivity Rate) ದಾಖಲಾಗಿದೆ. ಬುಧವಾರಕ್ಕೆ ಹೋಲಿಸಿದರೆ ಸೋಂಕು ಪ್ರಕರಣಗಳು 36, ಸಾವು ಮೂರು ಹೆಚ್ಚಳವಾಗಿದೆ (ಬುಧವಾರ 122 ಕೇಸ್, ಸಾವು ಶೂನ್ಯ).
ಮೂರನೇ ಅಲೆಯಲ್ಲಿ ಮೊದಲ ಬಾರಿ ಬುಧವಾರ ಸೋಂಕಿತರ ಸಾವು ಶೂನ್ಯಕ್ಕೆ ತಗ್ಗಿತ್ತು. ಆದರೆ, ಗುರುವಾರ 70 ವರ್ಷ ಮೇಲ್ಪಟ್ಟಮೂರು ಮಂದಿ ಮೃತಪಟ್ಟಿದ್ದಾರೆ. ಈವರೆಗೆ ಸೋಂಕಿಗೆ ಒಳಗಾದವರ ಸಂಖ್ಯೆ 17.8 ಲಕ್ಷಕ್ಕೆ, ಗುಣಮುಖರ ಸಂಖ್ಯೆ 17.6 ಲಕ್ಷಕ್ಕೆ, ಸಾವಿನ ಸಂಖ್ಯೆ 16,941 ಏರಿಕೆಯಾಗಿದೆ. ನಗರದಲ್ಲಿ ಐದಕ್ಕಿಂತ ಕಡಿಮೆ ಕೊರೋನಾ ಪ್ರಕರಣವಿರುವ 1 ಸಕ್ರಿಯ ಕಂಟೈನ್ಮೆಂಟ್ ವಲಯ(Containment Zone), ಐದಕ್ಕೂ ಹೆಚ್ಚು ಕೊರೋನಾ ಪ್ರಕರಣವಿರುವ 3 ಕ್ಲಸ್ಟರ್ ವಲಯವಿದೆ ಎಂದು ಬಿಬಿಎಂಪಿ ಕೊರೋನಾ ವರದಿಯಲ್ಲಿ ತಿಳಿಸಲಾಗಿದೆ.
ಕೋವಿಡ್ ಮತ್ತಷ್ಟು ಇಳಿಕೆ: 4184 ಕೇಸು, 104 ಸಾವು
ನವದೆಹಲಿ: ದೇಶದಲ್ಲಿ(India) ಕೋವಿಡ್(Covid-19) ಪ್ರಕರಣಗಳ ಸಂಖ್ಯೆಯಲ್ಲಿ ಮತ್ತಷ್ಟುಇಳಿಕೆ ಕಂಡುಬಂದಿದ್ದು, ಗುರುವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ 4,184 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ.
Covid Fourth Wave: ಜೂನ್‌ನಲ್ಲಿ ಭಾರತಕ್ಕೆ 4ನೇ ಕೋವಿಡ್ ಅಲೆ: ಮತ್ತೆ ಆತಂಕ
ಇದೇ ಅವಧಿಯಲ್ಲಿ 104 ಸೋಂಕಿತರು ಸಾವಿಗೀಡಾಗಿದ್ದಾರೆ. ಸಕ್ರಿಯ ಕೇಸುಗಳ ಸಂಖ್ಯೆ 44,488ಕ್ಕೆ ಇಳಿಕೆಯಾಗಿದೆ. ದೈನಂದಿನ ಪಾಸಿಟಿವಿಟಿ ದರವು ಶೇ. 0.48 ರಷ್ಟಿದ್ದು, ವಾರದ ಪಾಸಿಟಿವಿಟಿ ದರವು ಶೇ 0.58ಕ್ಕೆ ಇಳಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಕೋವಿಡ್ ಚೇತರಿಕೆ ದರವುವ ಶೇ 98.70ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಈವರೆಗೆ 179.53 ಕೋಟಿ ಕೋವಿಡ್ ಲಸಿಕೆಯ(Vaccine) ಡೋಸುಗಳನ್ನು ಈವರೆಗೆ ವಿತರಿಸಲಾಗಿದೆ.
ಕೊರೋನಾ ಸೋಂಕು ತಗ್ಗಿದೆ, ಕೆಲಸ ಆರಂಭಿಸಿ: ಕೇಂದ್ರ
ನವದೆಹಲಿ: ಭಾರತದಲ್ಲಿ ಪ್ರಸಕ್ತ ವರ್ಷದಿಂದ (2022) ಇಲ್ಲಿಯವರೆಗೆ ಶೇ.92ರಷ್ಟುಕೊರೋನಾ ಸಾವಿಗೆ ಲಸಿಕೆ ಹಾಕದಿರುವುದೇ ಕಾರಣ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಆದರೆ, ಇದೇ ವೇಳೆ ಸದ್ಯ ದೇಶದಲ್ಲಿ ಲಸಿಕಾಕರಣದಿಂದ ಕೊರೋನಾ ಆರ್ಭಟ ತಗ್ಗಿದೆ. ಹೀಗಾಗಿ ಅಗತ್ಯ ಮುಂಜಾಗ್ರತಾ ಕ್ರಮಗಳೊಂದಿಗೆ ಶಾಲೆ-ಕಾಲೇಜುಗಳು, ಆರ್ಥಿಕ ಚಟುವಟಿಕೆಗಳು ಮತ್ತು ಸಾಮಾಜಿಕ ವ್ಯವಹಾರಗಳನ್ನು ಆರಂಭಿಸಬಹುದು ಎಂದು ಹೇಳಿದೆ. ಪ್ರಸ್ತುತ, ದೇಶಾದ್ಯಂತ 29 ಜಿಲ್ಲೆಗಳಲ್ಲಿ ಶೇ.10ರಷ್ಟುಪಾಸಿಟಿವಿಟಿ ದರ ಇದೆ, 34 ಜಿಲ್ಲೆಗಳಲ್ಲಿ ಶೇ.5-10 ರ ನಡುವೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದೂ ತಿಳಿಸಿದೆ.