
ಬೆಂಗಳೂರು (ಮಾ.10): ಆದಾಯಕ್ಕೆ ತಕ್ಕಂತೆ ಬಜೆಟ್ (budget ) ರೂಪಿಸಿ ಅನಗತ್ಯ ಯೋಜನೆಗಳ ಘೋಷಣೆ (announcement) ಕಡಿವಾಣ ಹಾಕುವುದರೊಂದಿಗೆ ಬಿಬಿಎಂಪಿಯಲ್ಲಿ (BBMP) ಆರ್ಥಿಕ ಶಿಸ್ತು (financial discipline) ಕಾಪಾಡಲು ರಾಜ್ಯ ಸರ್ಕಾರ ‘ಬಿಬಿಎಂಪಿ ಹಣಕಾಸು ಹೊಣೆಗಾರಿಕೆ ಹಾಗೂ ಆಯವ್ಯಯ ನಿರ್ವಹಣೆ ನಿಯಮ-2021’ ಜಾರಿಗೆ ಗುರುವಾರ ಅಧಿಸೂಚನೆ ಹೊರಡಿಸಿದೆ.
ದೇಶ ಮತ್ತು ರಾಜ್ಯದ ನಗರ ಸ್ಥಳೀಯ ಸಂಸ್ಥೆಯಲ್ಲಿ ಮೊಟ್ಟಮೊದಲ ಬಾರಿಗೆ ಬಿಬಿಎಂಪಿಯಲ್ಲಿ ಹಣಕಾಸು ಹೊಣೆಗಾರಿಕೆ ಹಾಗೂ ಆಯವ್ಯಯ ನಿರ್ವಹಣೆ ನಿಯಮಗಳನ್ನು ಜಾರಿಗೊಳಿಸುತ್ತಿದ್ದು, ಸರ್ಕಾರ ಅಥವಾ ಇತರೆ ಸಂಸ್ಥೆಗಳ ಅನುದಾನದ ಮೇಲೆ ಅವಲಂಬನೆ ಆಗದೇ ಸ್ಥಳೀಯ ಸಂಸ್ಥೆಗಳು ಆರ್ಥಿಕ ಸ್ವಾವಲಂಬನೆ ಸಾಧಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
ವಾಸ್ತವಿಕ ಆಯವ್ಯಯ ರಚನೆ ಆಗಬೇಕು. ಕಳೆದ ಐದು ವರ್ಷದಲ್ಲಿ ಏರಿಕೆ ಆಗುತ್ತಿರುವ ಸರಾಸರಿ ಆದಾಯಕ್ಕೆ ಅನುಗುಣವಾಗಿ ಪ್ರಸ್ತುತ ಸಾಲಿನ ಬಜೆಟ್ ಮಂಡಿಸಬೇಕು. ಒಂದು ರೂಪಾಯಿ ಆದಾಯ ಬಂದರೆ ಆ ಹಣವನ್ನು ಯಾವ ಯಾವ ವಲಯಗಳಿಗೆ ವೆಚ್ಚ ಮಾಡಬೇಕಾಗಲಿದೆ ಎಂಬುದನ್ನು ಬಜೆಟ್‌ದಲ್ಲಿ ಪ್ರಸ್ತಾಪಿಸಬೇಕು. ಹಣಕಾಸು ಪಾರದರ್ಶಕತೆ ಕಾಯ್ದುಕೊಳ್ಳುವ ವಿಧಾನ, ದಾಖಲಾತಿ, ವಾರ್ಷಿಕ ಸಾಧನಾ ವರದಿ, ಅನುದಾನ ಸ್ವೀಕಾರ, ಲೆಕ್ಕಪತ್ರ ನಿರ್ವಹಣೆಯನ್ನು ಪ್ರತಿವರ್ಷ ಪ್ರಕಟಿಸುವುದು ಕಡ್ಡಾಯವಾಗಿದೆ.
ಪ್ರತಿ ಬಜೆಟ್‌ನಲ್ಲಿ ಹೆಚ್ಚಿನ ಆದಾಯದ ಸಂಗ್ರಹಣೆ ತೋರಿಸಿಕೊಂಡು ವಿವಿಧ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಘೋಷಿಸಿಕೊಂಡು ಜಾಬ್‌ಕೋಡ್ ನೀಡಲಾಗುತ್ತಿತ್ತು. ಇದರಿಂದ ವರ್ಷದಿಂದ ವರ್ಷಕ್ಕೆ ಬಿಬಿಎಂಪಿಗೆ ಆರ್ಥಿಕ ಹೊರೆ ಹೆಚ್ಚಾಗುತ್ತಿದೆ. ಇನ್ನು ಮುಂದೆ ಆದಾಯಕ್ಕೆ ಅನುಗುಣವಾಗಿ ಬಜೆಟ್ ರೂಪಿಸಬೇಕು ಮತ್ತು ಜಾಬ್ ಕೋಡ್ ನೀಡಬೇಕಾಗಲಿದೆ. ಈ ನಿಯಮ ಜಾರಿಯಿಂದ ಪಾಲಿಕೆ ಆರ್ಥಿಕ ಹೊರೆ ಕಡಿಮೆಯಾಗಲಿದೆ.
Waste Disposal: ಇದೊಮ್ಮೆ ಕರುಣೆ ತೋರಿಸಿ, ಹೈಕೋರ್ಟ್‌ಗೆ ಕ್ಷಮೆ ಕೇಳಿದ ಬಿಬಿಎಂಪಿ
"ಪಾಲಿಕೆಯಲ್ಲಿ ಆರ್ಥಿಕ ಶಿಸ್ತು ಕಾಯ್ದುಕೊಳ್ಳುವುದಕ್ಕೆ ‘ಹಣಕಾಸು ಹೊಣೆಗಾರಿಕೆ ಹಾಗೂ ಆಯವ್ಯಯ ನಿರ್ವಹಣೆ ನಿಯಮ’ ಜಾರಿಗೊಳಿಸುವುದು ಅತ್ಯವಶ್ಯಕವಾಗಿದೆ. ಆರಂಭದಲ್ಲಿ ಕಷ್ಟಎನಿಸಿದರೆ ನಾಲ್ಕೈದು ವರ್ಷದಲ್ಲಿ ಬಿಬಿಎಂಪಿ ಆರ್ಥಿಕವಾಗಿ ಸ್ವಾವಲಂಬಿಯಾಗಲಿದೆ. ಸಂಪನ್ಮೂಲ ಸಂಗ್ರಹಕ್ಕೂ ದಾರಿಯಾಗಲಿದೆ" ಎಂದು ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತೆ ತುಳಸಿ ಮದ್ದಿನೇನಿ ಹೇಳಿದ್ದಾರೆ.
3,500 ಕೋಟಿ ರು. ಬಿಲ್ ಬಾಕಿ : ಈ ಹಿಂದಿನ ವರ್ಷದಲ್ಲಿ ಬಿಬಿಎಂಪಿ ಅದಾಯಕ್ಕಿಂತ ಹೆಚ್ಚಿನ ಮೊತ್ತದ ಬಜೆಟ್ ಘೋಷಣೆ ಮಾಡಿಕೊಂಡು ಕೈಗೊಂಡ ಕಾಮಗಾರಿಯಿಂದ ಗುತ್ತಿಗೆದಾರರಿಗೆ ಸುಮಾರು 3,500 ಕೋಟಿ ರು. ಬಿಲ್ ಪಾವತಿ ಬಾಕಿ ಇದೆ. ಇದಲ್ಲದೇ 7 ರಿಂದ 8 ಸಾವಿರ ಕೋಟಿ ರು. ಮೊತ್ತದ ಕಾಮಗಾರಿಗೆ ಜಾಬ್ ಕೋಡ್ ನೀಡಲಾಗಿದೆ. ಈ ಪೈಕಿ 4,200 ಕೋಟಿ ರು. ಮೊತ್ತದ ಕಾಮಗಾರಿ ಕಾರ್ಯಾದೇಶ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
BBMP: ದಾಖಲೆ ತೆರಿಗೆ ಸಂಗ್ರಹದತ್ತ ಪಾಲಿಕೆ ದಾಪುಗಾಲು!
ಆರ್ಥಿಕ ವರ್ಷ ಮುಕ್ತಾಯಕ್ಕೆ ಇನ್ನು ಕೆಲವು ವಾರಗಳು ಮಾತ್ರವೇ ಬಾಕಿ ಉಳಿದಿದ್ದು ಈಗಾಗಲೇ 2022-23ರ ಸಾಲಿನ ಬಿಬಿಎಂಪಿ ಬಜೆಟ್ ಗೆ ಅಂಗೀಕಾರ ಪಡೆಯಬೇಕಿತ್ತು. ಆದರೆ, ಈವರೆಗೂ ಬಜೆಟ್ ಮಂಡನೆಯ ದಿನಾಂಕವೇ ನಿಗದಿಯಾಗಿಲ್ಲ. 2020ರ ಬಿಬಿಎಂ ಕಾಯ್ದೆಯ ಸೆಕ್ಷನ್ 194ರ ಪ್ರಕಾರ ತೆರಿಗೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಜನವರಿ 15 ರಂದು ಅಥವಾ ನಂತರ ಆದಷ್ಟು ಬೇಗ ಮುಖ್ಯ ಆಯುಕ್ತರು ಬಜೆಟ್ ಗೆ ಸಂಬಂಧಪಟ್ಟಂತೆ ಕಳುಹಿಸುವ ಅಂದಾಜುಗಳನ್ನು ಮತ್ತು ಪ್ರಸ್ತಾವನೆಗಳನ್ನು ಪರಿಶೀಲನೆ ಮಾಡಬೇಕು. ಇತರ ಸ್ಥಾಯಿ ಸಮಿತಿಗಳ ಪ್ರಸ್ತಾವನೆಗಳೇನಾದರೂ ಇದ್ದಲ್ಲಿ ಅವುಗಳನ್ನು ಪಡೆದುಕೊಂಡು ಮುಖ್ಯ ಆಯುಕ್ತರಿಂದ ಇದರ ಕುರಿತು ವಿವರವಾದ ಮಾಹಿತಿ ಪಡೆದು ಬಜೆಟ್ ಅಂದಾಜನ್ನು ಸಿದ್ಧಪಡಿಸಬೇಕು. ಇದರ ಅನ್ವಯ ಹೇಳುವುದಾದರೆ ಮಾರ್ಚ್ 10ರರ ಒಳಗಾಗಿ ಬಿಬಿಎಂಪಿ ಬಜೆಟ್ ಮಂಡನೆಯಾಗಿರಬೇಕಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ