Vijayanagara ತಮಿಳುನಾಡು ಸಚಿವರ ಪುತ್ರಿಗೆ ಹಡಗಲಿಯಲ್ಲಿ ಕಂಕಣ ಭಾಗ್ಯ!

Kannadaprabha News   | Asianet News
Published : Mar 11, 2022, 05:45 AM IST
Vijayanagara ತಮಿಳುನಾಡು ಸಚಿವರ ಪುತ್ರಿಗೆ ಹಡಗಲಿಯಲ್ಲಿ ಕಂಕಣ ಭಾಗ್ಯ!

ಸಾರಾಂಶ

ಹರೇಹಡಗಲಿಯಲ್ಲಿ ಪ್ರೇಮ ವಿವಾಹವಾದ ನೆರೆ ರಾಜ್ಯದ ಸಚಿವರ ಪುತ್ರಿ ಜಯಕಲ್ಯಾಣಿ ತಮಿಳುನಾಡಿನ ಮುಜರಾಯಿ ಸಚಿವ ಶೇಖರ್ ಬಾಬು ಪುತ್ರಿ ಪೊಲೀಸ್ ಭದ್ರತೆಕೋರಿ ಬೆಂಗಳೂರಿಗೆ ಬಂದಿದ್ದ ಜಯಕಲ್ಯಾಣಿ

ಹೂವಿನಹಡಗಲಿ (ಮಾ.10): ತಮಿಳುನಾಡು ಸಚಿವರ (Tamil Nadu Minisiter) ಪುತ್ರಿ ಜಯಕಲ್ಯಾಣಿ (Jaya Kalyani) ಹಾಗೂ ಸತೀಶ (Satish) ಎಂಬ ಪ್ರೇಮಿಗಳಿಗೆ ಕರ್ನಾಟಕದಲ್ಲಿ ಕಂಕಣ ಭಾಗ್ಯ ಕೂಡಿ ಬಂದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಅನೇಕ ದಿನಗಳಿಂದ ಚರ್ಚೆಗೆ ಗ್ರಾಸವಾಗಿದ್ದ ತಮಿಳುನಾಡು ಮುಜರಾಯಿ ಸಚಿವ ಶೇಖರಬಾಬು ಪುತ್ರಿ ಜಯಕಲ್ಯಾಣಿ ( tamilnadu minister sekhar babu ) ಹಾಗೂ ಸತೀಶ ಜೋಡಿ ಪ್ರೇಮ ವಿವಾಹವು ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಹಿರೇಹಡಗಲಿಯ ಸದ್ಗುರು ಶಿವಯೋಗಿ ಹಾಲಸ್ವಾಮಿ ಮಠದಲ್ಲಿ (Sadguru Shivayogi Sri Haalaswami Mutt)  ಇತ್ತೀಚೆಗೆ ಜರುಗಿದೆ. ಈ ಕುರಿತು ರಾಜ್ಯ ಮಠಾ​ಧೀಶರ ಪರಿಷತ್‌ನ ಕಾರ್ಯದರ್ಶಿ ಹಾಗೂ ದಕ್ಷಿಣ ಭಾರತ ಯತಿಗಳ ಪ್ರತಿನಿ​ಧಿಯಾಗಿರುವ ಸದ್ಗುರು ಶಿವಯೋಗಿ ಹಾಲಸ್ವಾಮಿ ಮಠದ ಅಭಿನವ ಹಾಲಸ್ವಾಮೀಜಿ ಸ್ಪಷ್ಟನೆ ನೀಡಿದ್ದಾರೆ.

ಸಚಿವರ ಪುತ್ರಿ ಜಯಕಲ್ಯಾಣಿಯವರು ಎಂಬಿಬಿಎಸ್‌ ಪದವೀಧರೆ. ಈಕೆಯನ್ನು ತಮಿಳುನಾಡಿನ ಶ್ರೀಮಂತ ಮನೆತನಕ್ಕೆ ಸೇರಿದ ಅನ್ಯ ಧರ್ಮದ ವ್ಯಕ್ತಿಯೊಂದಿಗೆ ವಿವಾಹ ಮಾಡಲು ಸಚಿವ ಶೇಖರಬಾಬು ನಿಶ್ಚಯಿಸಿದ್ದರು ಎಂದು ತಿಳಿದು ಬಂದಿದೆ. ಕುಟುಂಬ ವರ್ಗದವರ ತೀರ್ಮಾನ ವಿರೋ​ಧಿಸಿ ತನ್ನ ಪ್ರೇಮಿ ಸತೀಶ್‌ನೊಂದಿಗೆ ಜಯಕಲ್ಯಾಣಿ ಮನೆ ಬಿಟ್ಟು ಬಂದಿದ್ದರು. ಪ್ರಿಯತಮ ಸತೀಶ ಚೆನ್ನೈ ನಗರದ ಸಾಮಾನ್ಯ ಕುಟುಂಬದ ವ್ಯಕ್ತಿಯಾಗಿದ್ದು, ಉದ್ಯಮ ನಡೆಸಿಕೊಂಡಿದ್ದನು. ಸಚಿವರ ಪುತ್ರಿ ಡಾ. ಜಯಕಲ್ಯಾಣಿ ಹಾಗೂ ಸತೀಶ ಇಬ್ಬರಲ್ಲಿ ಕಳೆದ ಆರೇಳು ವರ್ಷಗಳ ಹಿಂದೆ ಪ್ರೇಮಾಂಕುರವಾಗಿತ್ತು. ಇವರಿಬ್ಬರ ಪ್ರೇಮ ವಿವಾಹಕ್ಕೆ ಕುಟುಂಬದವರು ವಿರೋಧಿಸುತ್ತಿದ್ದರು. ಜತೆಗೆ ಇವರಿಬ್ಬರನ್ನು ಬೇರೆ ಮಾಡಿ ಕೆಲವು ತಿಂಗಳ ಕಾಲ ಸಚಿವರ ಪುತ್ರಿಯನ್ನು ಗೃಹ ಬಂಧನದಲ್ಲಿ ಇಟ್ಟಿದ್ದರು ಎನ್ನಲಾಗಿದೆ.

ಈ ಪ್ರೇಮ ವಿವಾಹಕ್ಕೆ ಪೋಷಕರಿಂದ ಬೆದರಿಕೆ ಇದ್ದ ಹಿನ್ನೆಲೆಯಲ್ಲಿ ಸಚಿವರ ಪುತ್ರಿ ಜಯಕಲ್ಯಾಣಿ ಹಾಗೂ ಸತೀಶ ಇಬ್ಬರೂ ಹಿಂದೂ ಪರ ಸಂಘಟನೆಯ ಮುಖಂಡ ಮಧುಗಿರಿಯ ಅತುಲ್‌ಕುಮಾರ್‌ ಅಗರ್‌ವಾಲ್‌ ಮೂಲಕ ಶ್ರೀಮಠದ ಅಭಿನವ ಹಾಲ ವೀರಪ್ಪಜ್ಜ ಸ್ವಾಮೀಜಿ ಸಂಪರ್ಕಿಸಿದ್ದಾರೆ.

ಇಬ್ಬರು ಪ್ರೇಮಿಗಳು ಭಾನುವಾರ ಹಾಲಸ್ವಾಮಿ ಮಠಕ್ಕೆ ಆಗಮಿಸಿ ಶ್ರೀಗಳ ಸಾನ್ನಿಧ್ಯದಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹ ಆಗಿದ್ದಾರೆ. ಅಂದೇ ಬೆಂಗಳೂರಿಗೆ ಹೋಗಿ ನಗರ ಪೊಲೀಸ್‌ ಕಮಿಷನರ್‌ ಕಮಲ್‌ ಪಂತ್‌ರನ್ನು ಭೇಟಿ ಮಾಡಿ ನಮಗೆ ರಕ್ಷಣೆ ಕೊಡಿ ಎಂದು ಕೋರಿದ್ದಾರೆ.

Shivamogga: ಹೊಳಲೂರು ಗ್ರಾಮಕ್ಕೆ ಪ್ರಧಾನಿ ಮೋದಿ ಭೇಟಿ, ಒಂದೂವರೆ ತಿಂಗಳಲ್ಲಿ 7 ಕೋಟಿ ಬಳಸಿ ಅಭಿವೃದ್ಧಿ
ಕಳೆದ 4 ತಿಂಗಳಿಂದ ಇಬ್ಬರೂ ಪ್ರೇಮಿಗಳು ಸಾಮಾಜಿಕ ಜಾಲತಾಣ ಮತ್ತು ಸಂಘಟನೆ ಮೂಲಕ ಹಿಂದೂ ಪರ ಬಲವಾದ ನಂಬಿಕೆ ಹೊಂದಿರುವ ಅಚಲವಾಗಿ ಪ್ರತಿಪಾದಿಸುವ ವ್ಯಕ್ತಿಯ ಶೋಧ ಮಾಡುತ್ತಿರುವ ವೇಳೆ ಮಧುಗಿರಿಯ ಅತುಲ್‌ಕುಮಾರ್‌ ಅಗರ್‌ವಾಲ್‌ರ ಸಂಪರ್ಕ ಮಾಡಿದ್ದಾರೆ. ಕೆಲ ದಿನಗಳ ನಂತರ ಅಗರ್‌ವಾಲ್‌ ಹಿರೇಹಡಗಲಿಯ ಹಾಲಸ್ವಾಮಿ ಮಠದ ಅಭಿನವ ಹಾಲವೀರಪ್ಪಜ್ಜ ಸ್ವಾಮೀಜಿ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಹಿಂದೂ ಧರ್ಮ ಮತ್ತು ಶೈವಪಂತದ ಬಲವಾದ ನಂಬಿಕೆ ಹೊಂದಿರುವ ಜಯಕಲ್ಯಾಣಿ, ತನ್ನ ಪೋಷಕರ ಧರ್ಮಕ್ಕೆ ಮತಾಂತರವಾಗುವುದನ್ನು ವಿರೋ​ಧಿಸಿ ಪ್ರೇಮ ವಿವಾಹವಾಗಿದ್ದಾರೆ ಎಂಬುದನ್ನು ಸ್ವಾಮೀಜಿ ಸ್ಪಷ್ಟಪಡಿಸಿದರು.

BBMP ಬಜೆಟ್‌ಗೆ ಸರ್ಕಾರ ಮೂಗುದಾರ
"ನಾನು ಸತೀಶ್ ಅವರನ್ನು ವಿವಾಹವಾಗಿದ್ದೇನೆ. ನಮ್ಮದು ಪ್ರೇಮವಿವಾಹ. ನಮ್ಮ ಹಿರಿಯರು ಈ ಮದುವೆಗೆ ಒಪ್ಪಿಗೆ ನೀಡಿರಲಿಲ್ಲ. ಕಳೆದ ಕೆಲವು ತಿಂಗಳಿನಿಂದ ಸತೀಶ್ ಮದುವೆಯಾಗುವ ಕುರಿತಾಗಿ ಮಾತನಾಡುತ್ತಿದ್ದರು. ಆದರೆ, ಎರಡು ತಿಂಗಳ ಹಿಂದೆ ಇವರನ್ನು ಸುಳ್ಳು ಕೇಸ್ ನಲ್ಲಿ ತಮಿಳುನಾಡು ಪೊಲೀಸರು ಬಂಧಿಸಿದ್ದರು. ನಾವಿಬ್ಬರೂ ಮೇಜರ್. ನಮ್ಮಿಬ್ಬರ ಒಪ್ಪಿಗೆಯ ಮೇಲೇ ಈ ವಿವಾಹ ನಡೆದಿದೆ. ತಮಿಳುನಾಡಿಗೆ ಹೋದರೆ ಅವರು ನಮ್ಮನ್ನು ಕೊಲ್ಲುತ್ತಾರೆ. ಹಾಗಾಗಿ ಬೆಂಗಳೂರು ಪೊಲೀಸರ ರಕ್ಷಣೆ ಕೇಳಿದ್ದೆವು" ಎಂದು ಜಯಕಲ್ಯಾಣಿ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿನಿಮಾ ರಿಲೀಸ್‌ಗೂ ಮುನ್ನವೇ ಜೈಲಲ್ಲಿ ಡೆವಿಲ್ ರೂಪ ತಾಳಿದ ದರ್ಶನ್; ಸಹ ಕೈದಿಗಳಿಗೆ ಕಾಲಿನಿಂದ ಒದ್ದು ದುರಹಂಕಾರ!
CM Siddaramaiahಗೆ ಈಶ್ವರಪ್ಪ ವಾರ್ನಿಂಗ್: ಭಗವದ್ಗೀತೆ ಓದಲಿ, ತಾಕತ್ತಿದ್ದರೆ ಕುರಾನ್ ಬಗ್ಗೆ ಮಾತನಾಲಿ