ಜಗತ್ತಿನ ಟಾಪ್ 100 ಐಕಾನಿಕ್ ಐಸ್‌ಕ್ರೀಂಗಳ ಪಟ್ಟಿ ಯೊಂದು ಬಿಡುಗಡೆಯಾಗಿದ್ದು, ಅದರಲ್ಲಿ ಕರ್ನಾಟಕದ ಎರಡು ಸೇರಿದಂತೆ ಭಾರತದ 5 ಐಸ್‌ಕ್ರೀಂಗಳು ಸ್ಥಾನ ಪಡೆದುಕೊಂಡಿವೆ.
ಮಂಗಳೂರು (ಜು.26): ಜಗತ್ತಿನ ಟಾಪ್ 100 ಐಕಾನಿಕ್ ಐಸ್‌ಕ್ರೀಂಗಳ ಪಟ್ಟಿಯೊಂದು ಬಿಡುಗಡೆಯಾಗಿದ್ದು, ಅದರಲ್ಲಿ ಕರ್ನಾಟಕದ ಎರಡು ಸೇರಿದಂತೆ ಭಾರತದ 5 ಐಸ್‌ಕ್ರೀಂಗಳು ಸ್ಥಾನ ಪಡೆದುಕೊಂಡಿವೆ. ವಿಶೇಷವೆಂದರೆ ಈ ಪೈಕಿ ಎರಡು ಐಸ್‌ಕ್ರೀಂ ಕನ್ನಡಿಗರ ಮಾಲೀಕತ್ವದ ಅಂಗಡಿಗಳಿದ್ದು. ಹೀಗೆ ಪಟ್ಟಿಯಲ್ಲಿ ಸ್ಥಾನ ಪಡೆದ ಕರ್ನಾಟಕ ಮತ್ತು ಕನ್ನಡಿಗರ ಐಸ್‌ಕ್ರೀಂ ಶಾಪ್‌ಗಳೆಂದರೆ ಬೆಂಗಳೂರಿನ ಕಾರ್ನರ್ ಹೌಸ್, ಮಂಗಳೂರಿನ ಐಡಿಯಲ್ ಪಬ್ಬಾಸ್ ಮತ್ತು ಮುಂಬೈನಲ್ಲಿರುವ ಮಂಗಳೂರು ಮೂಲದ ನ್ಯಾಚುರಲ್.
ಪಟ್ಟಿಯಲ್ಲಿ ಮುಂಚೂಣಿ ಸ್ಥಾನಗಳನ್ನು ಇಟಲಿಯ ಬೊಲಿಗ್ರಾ ನಗರದಲ್ಲಿರುವ ಕ್ಯಾಸ್ಟಿಗ್ಟನ್ ಶಾಪ್‌ನ 'ಪಿಸ್ಟಾಚಿಯೋ', ಬೊಲಿಗ್ರಾ ನಗರದ್ದೇ ಆದ ಗಲ್ಲಿಯೇರಾ 49 ಶಾಪ್‌ನ 'ಪಿಸ್ಟಾಚಿಯೋ' ಮತ್ತು ಇಟಲಿಯ ಕೆಟಾನಿಯಾ ನಗರದ ಡಾನ್ ಪೆಪ್ಪಿನೋಶಾಪ್‌ನ 'ಸಾಲೆಡ್ ಪಿಸ್ಟಾಚಿಯೋ' ಪಡೆದುಕೊಂಡಿದೆ. ಆನ್‌ಲೈನ್ ಆಹಾರ ಮತ್ತು ಪ್ರವಾಸೋದ್ಯಮ ಸಂಸ್ಥೆಯಾದ 'ಫುಡ್ ಅಟ್ಲಾಸ್' ಈ ವರದಿ ಬಿಡುಗಡೆ ಮಾಡಿದೆ.
undefined
ವಾಲ್ಮೀಕಿ, ಮುಡಾ ಅಕ್ರಮ ಹಂಚಿಕೆ ಹಗರಣ ಗದ್ದಲಕ್ಕೆ ಮುಂಗಾರು ಕಲಾಪವೇ ಬಲಿ: ಧರಣಿ, ಕೋಲಾಹಲ
ಭಾರತದ 5 ಐಸ್‌ಕ್ರೀಂ: ಫುಡ್ ಅಟ್ಲಾಸ್ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಬೆಂಗಳೂರಿನ ಸೇಂಟ್ ರಸ್ತೆಯಲ್ಲಿರುವ ಕಾರ್ನರ್ ಹೌಸ್ ಶಾಪ್‌ನ 'ಡೆತ್ ಬೈ ಚಾಕಲೇಟ್', ಮಂಗಳೂರಿನ ಐಡಿಯಲ್ ಪಬ್ಬಾಸ್ ಶಾಪ್‌ನ 'ಗಡ್ ಬಡ್', ಮುಂಬೈನ ಅಪ್ಪರಾ ಶಾಪ್‌ನ 'ಗ್ವಾವಾ', ಮುಂಬೈನ ಕೆ.ರುಸ್ತುಂ ಆ್ಯಂಡ್ ಕಂಪೆನಿಯ ಐಸ್‌ಕ್ರೀಂ ಸ್ಯಾಂಡ್‌ವಿಚ್ ಮತ್ತು ಮುಂಬೈನನ್ಯಾಚುರಲ್ಸ್‌ನ 'ಟೆಂಡರ್ ಕೋಕೋನಟ್' ಸ್ಥಾನ ಪಡೆದಿವೆ. ಈ ಪೈಕಿ ಪಬ್ಬಾಸ್ ಮಾಲೀಕರಾದ ಪ್ರಭಾಕರ್ ಕಾಮತ್ ಮತ್ತು ನ್ಯಾಚುರಲ್ಸ್‌ನ ಐಸ್‌ಕ್ರೀಂ ರಘುನಂದನ್ ಕಾಮತ್ ಇಬ್ಬರೂ ಕನ್ನಡಿಗರು. ಈ ಪೈಕಿ ರಘುನಂದನ್ ಕಾಮತ್ ಇತ್ತೀಚೆಗಷ್ಟೇ ನಿಧನರಾಗಿದ್ದರು.