Covid-19 Crisis: ಕರ್ನಾಟಕದಲ್ಲಿ ಕೊರೋನಾ ಮತ್ತಷ್ಟು ಇಳಿಕೆ..!

By Girish Goudar  |  First Published Mar 9, 2022, 9:04 AM IST

*  ಮಂಗಳವಾರ 197 ಹೊಸ ಕೋವಿಡ್‌ ಪ್ರಕರಣ: 8 ಸಾವು
*  ಬೆಂಗಳೂರಲ್ಲೇ ಹೆಚ್ಚು ಸಾವು 
*  ದೇಶದಲ್ಲಿ 3993 ಕೋವಿಡ್‌ ಕೇಸು: ಸಾರ್ವಕಾಲಿಕ ಕನಿಷ್ಠ


ಬೆಂಗಳೂರು(ಮಾ.09): ರಾಜ್ಯದಲ್ಲಿ(Karnataka) ಹೊಸ ಕೋವಿಡ್‌(Covid-19) ಪ್ರಕರಣಗಳು 200 ಆಸುಪಾಸಿನಲ್ಲಿಯೇ ಮುಂದುವರೆದಿದ್ದು, ಮಂಗಳವಾರ 197 ಮಂದಿ ಸೋಂಕಿತರಾಗಿದ್ದು, 8 ಸೋಂಕಿತರು ಸಾವಿಗೀಡಾಗಿದ್ದಾರೆ. ಶೇ.0.5ಕ್ಕಿಂತ ಕಡಿಮೆ ಪಾಸಿಟಿವಿಟಿ ದರ(Positivity Rate) ದಾಖಲಾಗಿದೆ. ಇದೇ ವೇಳೆ ಮೂರೂ ಅಲೆ ಸೇರಿ ಸಾವಿನ ಸಂಖ್ಯೆ 40 ಸಾವಿರದ ಗಡಿ ದಾಟಿದೆ. 258 ಮಂದಿ ಗುಣಮುಖರಾಗಿದ್ದಾರೆ. ಸದ್ಯ 2980 ಸಾವಿರ ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. ಸೋಂಕು ಪರೀಕ್ಷೆಗಳು 41 ಸಾವಿರ ನಡೆದಿದ್ದು, ಪಾಸಿಟಿವಿಟಿ ದರ ಶೇ.0.47 ರಷ್ಟುದಾಖಲಾಗಿದೆ. ಸೋಮವಾರಕ್ಕೆ ಹೋಲಿಸಿದರೆ ಪರೀಕ್ಷೆಗಳು 8 ಸಾವಿರ ಹೆಚ್ಚಳವಾಗಿದೆ.

ಬೆಂಗಳೂರಲ್ಲೇ ಹೆಚ್ಚು ಸಾವು:

Tap to resize

Latest Videos

undefined

ಕೊರೋನಾ(Coronavirus) ಮೂರು ಅಲೆಗಳನ್ನು ಸೇರಿ ಒಟ್ಟಾರೆ ಸೋಂಕಿತರ ಸಾವು 40,008ಕ್ಕೆ ತಲುಪಿದೆ. ಅತಿ ಹೆಚ್ಚು ಸಾವು ಬೆಂಗಳೂರಿನಲ್ಲಿ(Bengaluru) 16937 ದಾಖಲಾಗಿವೆ. ಉಳಿದಂತೆ 9 ಜಿಲ್ಲೆಗಳಲ್ಲಿ ಒಂದು ಸಾವಿರಕ್ಕಿಂತ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ.

Covid 19 Crisis: ಕೊರೋನಾ ಸೋಂಕು ತಗ್ಗಿದೆ, ಕೆಲಸ ಆರಂಭಿಸಿ: ಕೇಂದ್ರ

ಸದ್ಯ ಸಾವಿನ ಸಂಖ್ಯೆ ಎರಡು ವಾರಗಳಿಂದ ಬೆರಳೆಣಿಕೆಯಷ್ಟಿದೆ. ಮಂಗಳವಾರ ಸಾವಿಗೀಡಾದವರಲ್ಲಿ 31 ರಿಂದ 56 ವರ್ಷದ ಇಬ್ಬರು ಮಹಿಳೆಯರು, ಆರು ಪುರುಷರಿದ್ದಾರೆ. ಧಾರವಾಡ, ಮಂಡ್ಯ, ಚಿತ್ರದುರ್ಗ, ಮೈಸೂರು, ಬೆಂಗಳೂರು ಹಾಗೂ ಬೆಳಗಾವಿಯಲ್ಲಿ ತಲಾ ಒಬ್ಬರು, ರಾಯಚೂರಿನಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಇನ್ನು ಬೆಂಗಳೂರಿನಲ್ಲಿ 130 ಮಂದಿಗೆ ಸೋಂಕು ದೃಢಪಟ್ಟಿದ್ದು. ಉಳಿದಂತೆ ಯಾವ ಜಿಲ್ಲೆಯಲ್ಲೂ ಸೋಂಕಿತರ ಸಂಖ್ಯೆ ಬೆರಳೆಣಿಕೆ ದಾಟಿಲ್ಲ. 11 ಜಿಲ್ಲೆಗಳಲ್ಲಿ ಶೂನ್ಯವಿದೆ.

ತೀವ್ರವಾಗಿ ಕುಸಿದ ಕೊರೋನಾ ಸೋಂಕಿತರ ಸಾವಿನ ಸಂಖ್ಯೆ

ಬೆಂಗಳೂರು ನಗರದಲ್ಲಿ ಕೋವಿಡ್‌ ಮಂಗಳವಾರ 130 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಒಬ್ಬರು ಮೃತಪಟ್ಟಿದ್ದಾರೆ. 171 ಮಂದಿ ಚೇತರಿಸಿಕೊಂಡಿದ್ದಾರೆ. ಸದ್ಯ 2,308 ಸಕ್ರಿಯ ಪ್ರಕರಣಗಳಿದ್ದು ಈ ಪೈಕಿ 80 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ(Treatment) ಪಡೆಯುತ್ತಿದ್ದಾರೆ. 9 ಮಂದಿ ವೆಂಟಿಲೇಟರ್‌ ಸಹಿತ ತೀವ್ರ ನಿಗಾ ವಿಭಾಗ, 20 ಮಂದಿ ತೀವ್ರ ನಿಗಾ ವಿಭಾಗ, ಏಳು ಮಂದಿ ಆಮ್ಲಜನಕಯುಕ್ತ ಹಾಸಿಗೆ ಮತ್ತು 44 ಮಂದಿ ಜನರಲ್‌ ವಾರ್ಡ್‌ನಲ್ಲಿದ್ದಾರೆ. ಸಕ್ರಿಯ ಪ್ರಕರಣಗಳಲ್ಲಿ ಶೇ.3.44 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಮನೆ ಆರೈಕೆಯಲ್ಲಿದ್ದಾರೆ.

Covid Crisis: ಕೊರೋನಾ ದಿಢೀರ್‌ ಹೆಚ್ಚಳ..!

ದಾಸರಹಳ್ಳಿ, ಬೆಂಗಳೂರು ಪೂರ್ವ, ಬೆಂಗಳೂರು ದಕ್ಷಿಣ ಮತ್ತು ಯಲಹಂಕದಲ್ಲಿ ತಲಾ ಒಂದೊಂದು ಕಂಟೈನ್ಮೆಂಟ್‌ ವಲಯ ಇದೆ. ಈ ಮಧ್ಯೆ ಅತಿ ಹೆಚ್ಚು ಕಂಟೈನ್ಮೆಂಟ್‌ ವಲಯ ಇದ್ದ ಬೊಮ್ಮನಹಳ್ಳಿ ವಲಯ ಸದ್ಯ ಕಂಟೈನ್ಮೆಂಟ್‌ ವಲಯ ಮುಕ್ತವಾಗಿದೆ. ಒಬ್ಬರು ಮೃತರಾಗಿದ್ದು, ಕೋವಿಡ್‌ನಿಂದ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 16,938ಕ್ಕೆ ಏರಿದೆ.

3993 ಕೋವಿಡ್‌ ಕೇಸು: ಸಾರ್ವಕಾಲಿಕ ಕನಿಷ್ಠ

ನವದಹಲಿ: ದೇಶದಲ್ಲಿ(India) ಕೋವಿಡ್‌ ಪ್ರಕರಣಗಳ ಸಂಖ್ಯೆ ಮತ್ತಷ್ಟು ಇಳಿಕೆಯಾಗಿದ್ದು, ಮಂಗಳವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ ಕೇವಲ 3,993 ಪ್ರಕರಣಗಳು ದಾಖಲಾಗಿವೆ. ಇದು 662 ದಿನಗಳ ಕನಿಷ್ಠ ಪ್ರಮಾಣವಾಗಿದೆ. ಇದೇ ಅವಧಿಯಲ್ಲಿ ಸಕ್ರಿಯ ಕೇಸುಗಳ ಸಂಖ್ಯೆ 49,948ಕ್ಕೆ ಕುಸಿದಿದ್ದು, 664 ದಿನಗಳ ನಂತರ ದೇಶದಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ 50,000ಕ್ಕಿಂತಲೂ ಕಡಿಮೆಯಾಗಿದೆ. 24 ಗಂಟೆಗಳ ಅವಧಿಯಲ್ಲಿ 108 ಸೋಂಕಿತರು ಸಾವಿಗೀಡಾಗಿದ್ದಾರೆ(Death). ದೈನಂದಿನ ಪಾಸಿಟಿವಿಟಿ ದರವು ಶೇ. 0.46 ರಷ್ಟಿದ್ದು, ವಾರದ ಪಾಸಿಟಿವಿಟಿ ದರವು ಶೇ. 0.68ರಷ್ಟಿದೆ. ದೇಶದಲ್ಲಿ ಈವರೆಗೆ 179.13 ಕೋಟಿ ಡೋಸು ಲಸಿಕೆಯನ್ನು ವಿತರಿಸಲಾಗಿದೆ.
 

click me!