ಸಹಕಾರಿ ಸಾಲ ಮರುಪಾವತಿ ವಿಸ್ತರಣೆ: ಸಚಿವ ಸೋಮಶೇಖರ್‌

Published : Mar 09, 2022, 08:47 AM IST
ಸಹಕಾರಿ ಸಾಲ ಮರುಪಾವತಿ ವಿಸ್ತರಣೆ: ಸಚಿವ ಸೋಮಶೇಖರ್‌

ಸಾರಾಂಶ

*  ಜೂನ್‌ 1ರವರೆಗೆ ಕಂತು ಪಾವತಿ ಅವಕಾಶ *  ಸರ್ಕಾರದಿಂದ ಬಡ್ಡಿ ಸಹಾಯಧನ: ಸೋಮಶೇಖರ್‌ *  ಈಗಾಗಲೇ ಸಾಲ ಪಡೆದವರಿಗೂ ಬರುವ ದಿನಗಳಲ್ಲಿ ಸಾಲ ಸಿಗಲಿದೆ  

ಬೆಂಗಳೂರು(ಮಾ.09): ಕೋವಿಡ್‌(Covid-19) ಎರಡನೇ ಅಲೆಯ ಹಿನ್ನೆಲೆಯಲ್ಲಿ ಕಳೆದ ವರ್ಷದ ಮಾರ್ಚ್‌ 1ರಿಂದ ಜೂನ್‌ 30ರ ಅವಧಿಯಲ್ಲಿ ಮರು ಪಾವತಿಗೆ ಬರುವ ಸಾಲದ(Loan) ಕಂತುಗಳನ್ನು ಪಾವತಿಸುವ ಅವಧಿಯನ್ನು ಈ ವರ್ಷದ ಜೂನ್‌ 1ರವರೆಗೆ ವಿಸ್ತರಿಸಲಾಗಿದೆ. ಸಂಬಂಧಿಸಿದ 134 ಕೋಟಿ ರು. ಬಡ್ಡಿ ಸಹಾಯಧನವನ್ನು ಸರ್ಕಾರ ಭರಿಸುತ್ತಿದೆ ಎಂದು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌(ST Somashekhar) ತಿಳಿಸಿದ್ದಾರೆ.

ಬಿಜೆಪಿಯ(BJP) ಪಿ.ಎಂ. ಮುನಿರಾಜುಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೊರೋನಾ(Coronavirus) ಮೊದಲ ಎರಡು ಅಲೆಯಲ್ಲಿ ಮೃತಪಟ್ಟ ರೈತರ(Farmers) ಪೈಕಿ 10437 ರೈತರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು (ಪ್ಯಾಕ್ಸ್‌), ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳು (ಡಿಸಿಸಿ) ಮತ್ತು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ದಿ ಬ್ಯಾಂಕ್‌ (ಪಿಕಾರ್ಡ್‌)ಗಳಲ್ಲಿ ಸಾಲ ಪಡೆದಿರುತ್ತಾರೆ. ಈ ಎಲ್ಲ ರೈತರಿಗೂ ಸಹ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ(Government of Karnataka) ಒಟ್ಟು ತಲಾ 1.50 ಲಕ್ಷ ರು. ನೆರವು ನೀಡಲಾಗಿದೆ. ಇದರ ಜೊತೆಗೆ ಡಿಸಿಸಿ ಬ್ಯಾಂಕುಗಳು ಸಹ ತಮ್ಮ ಲಾಭಾಂಶದಲ್ಲಿ ಪರಿಹಾರ(Compensation) ನೀಡುವಂತೆ ಮೌಖಿಕವಾಗಿ ತಿಳಿಸಲಾಗಿದೆ. ಈಗಾಗಲೇ ತುಮಕೂರು ಡಿಸಿಸಿ ಬ್ಯಾಂಕ್‌ 326 ಜನರಿಗೆ 1.99 ಕೋಟಿ ರು., ಮತ್ತು ವಿಜಯನಗರ ಡಿಸಿಸಿ ಬ್ಯಾಂಕು 755 ರೈತರಿಗೆ 7.03 ಕೋಟಿ ರು. ಪರಿಹಾರವನ್ನು ನೀಡಿವೆ ಎಂದು ವಿವರಿಸಿದರು.

DCC Bank Scam: 15 ದಿನದಲ್ಲಿ ತನಿಖೆ ಪೂರ್ಣ: ಸಚಿವ ಸೋಮಶೇಖರ್‌

ಈಗಾಗಲೇ ಸಾಲ ಪಡೆದವರಿಗೂ ಬರುವ ದಿನಗಳಲ್ಲಿ ಸಾಲ ಸಿಗಲಿದೆ. ಸಹಕಾರ ಸಂಘಗಳ ಮೂಲಕ ಈ ವರ್ಷ 28,810 ಕೋಟಿ ರು. ಸಾಲ ನೀಡಲು ಉದ್ದೇಶಿಸಲಾಗಿದೆ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಈ ಹಿಂದೆ ಕೊರೋನಾದಿಂದ ಮೃತಪಟ್ಟ(Death) ರೈತರು ಮಾಡಿರುವ ಸುಮಾರು 91.97 ಕೋಟಿ ರು. ಸಾಲ ಮನ್ನಾ ಮಾಡುವ ಬಗ್ಗೆ ಡಿಸಿಸಿ ಬ್ಯಾಂಕುಗಳ ಜೊತೆ ನಡೆಸಿದ ಸಭೆಯಲ್ಲಿ ಚರ್ಚಿಸಲಾಗಿತ್ತು. ಆದರೆ ನಂತರದಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌. ಯಡಿಯೂರಪ್ಪ(BS Yediyurappa) ಅವರು ಕೊರೋನಾದಿಂದ ಮೃತಪಟ್ಟ ಎಲ್ಲರಿಗೂ ತಲಾ 1 ಲಕ್ಷ ರು. ಪರಿಹಾರ ನೀಡಲು ತೀರ್ಮಾನಿಸಿದರು. ಹಾಗಾಗಿ ಸಾಲ ಮನ್ನಾ ಆದೇಶ ಹೊರಡಿಸಿಲ್ಲ ಎಂದು ಸಚಿವರು ಹೇಳಿದರು.

APMC ತಿದ್ದುಪಡಿ ವಾಪಸ್‌ ಪ್ರಶ್ನೆಯೇ ಇಲ್ಲ: ಸಚಿವ ಸೋಮಶೇಖರ್

ಬೆಂಗಳೂರು: ರೈತರ(Farmers) ಹಿತದೃಷ್ಟಿಯಿಂದ ಜಾರಿಗೆ ತಂದಿರುವ ಎಪಿಎಂಸಿ ಕಾಯ್ದೆ(APMC Act) ತಿದ್ದುಪಡಿಯನ್ನು ಯಾವುದೇ ಕಾರಣಕ್ಕೂ ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ಸ್ಪಷ್ಟಪಡಿಸಿದ್ದರು.

ಫೆ.15 ರಂದು ಕಾಂಗ್ರೆಸ್‌ನ(Congress) ಕೆ. ಹರೀಶ್‌ಕುಮಾರ್‌ ಅವರ ಪ್ರಶ್ನೆಗೆ ಉತ್ತರಿಸಿದ್ದ ಸಚಿವರು, ರೈತರು ಹಿಂದೆ ಎಪಿಎಂಸಿಗಳಲ್ಲಿ ಮಾತ್ರ ಮಾರಾಟ ಮಾಡಬೇಕಿತ್ತು. ಬೇರೆ ಕಡೆಗೆ ಮಾರಾಟ ಮಾಡಿದರೆ 5ರಿಂದ 25 ಸಾವಿರ ರು.ವರೆಗೆ ದಂಡ ನೀಡಬೇಕಾಗಿತ್ತು. ಇದನ್ನು ತಪ್ಪಿಸಿ ರೈತರು ತಾವು ಬೆಳೆದ ಉತ್ಪನ್ನಗಳನ್ನು ಎಲ್ಲಿ ಬೇಕಾದರೂ, ಲಾಭ ಸಿಗುವ ಕಡೆ ಮಾರಾಟ ಮಾಡಲು ಕಾಯ್ದೆ ತಿದ್ದುಪಡಿ ಮಾಡಲಾಗಿದೆ. ಹೀಗಾಗಿ ತಿದ್ದುಪಡಿ ಹಿಂಪಡೆಯುವ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ ಎಂದು ಹೇಳಿದ್ದರು. 

Farmers Land: ರೈತರ ಜಮೀನು ಖರೀದಿ ನಿಲ್ಲಿಸಿ: ಸಚಿವ ಎಸ್‌.ಟಿ.ಸೋಮಶೇಖರ್‌

ಕಾಯ್ದೆಗೆ ತಿದ್ದುಪಡಿ ಮಾಡಿರುವುದರಿಂದ ಎಪಿಎಂಸಿಗಳಿಗೆ(APMC) ಬರುತ್ತಿದ್ದ ಆದಾಯ ಸಹಜವಾಗಿ ಕಡಿಮೆಯಾಗಿದೆ. ಆದರೆ ಯಾವುದೇ ಎಪಿಎಂಸಿ ನಷ್ಟದಲ್ಲಿ ಇಲ್ಲ. ಒಂದು ವೇಳೆ ನಷ್ಟಕ್ಕೆ ಒಳಗಾದರೆ ಅಲ್ಲಿಯ ಸಿಬ್ಬಂದಿಗಳಿಗೆ ವೇತನ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಸರ್ಕಾರವೇ ನೀಡಲಿದೆ ಎಂದು ಭರವಸೆ ನೀಡಿದ್ದರು. 

ರಾಜ್ಯದಲ್ಲಿ(Karnataka) ಇರುವ ಎರಡೆರಡು ಎಪಿಎಂಸಿಗಳನ್ನು ವಿಲೀನಗೊಳಿಸುವ ಪ್ರಸ್ತಾವನೆ ಸರ್ಕಾರದ(Government of Karnataka) ಮುಂದಿಲ್ಲ ಎಂದು ಉತ್ತರಿಸಿದ ಸಚಿವರು, ಸರ್ಕಾರವೇ ಸ್ವಯಂ ಪ್ರೇರಿತವಾಗಿ ಇಂತಹ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ತಿಳಿಸಿದ್ದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ
Breaking ಮಂಡ್ಯ ಬಸ್ ಅಪಘಾತದಲ್ಲಿ 23 ಪ್ರಯಾಣಿಕರಿಗೆ ಗಾಯ, ಇಬ್ಬರು ಗಂಭೀರ