ರಾಜ್ಯದಲ್ಲಿ ಭಾನುವಾರ 1837 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, 1017 ಮಂದಿ ಗುಣಮುಖರಾಗಿದ್ದಾರೆ. ಮೂವರು ಸಾವಿಗೀಡಾಗಿದ್ದಾರೆ. 29 ಸಾವಿರ ಸೋಂಕು ಪರೀಕ್ಷೆಗಳು ನಡೆದಿದ್ದು, ಪಾಸಿಟಿವಿಟಿ ದರ ಶೇ.6.3 ರಷ್ಟು ದಾಖಲಾಗಿದೆ.
ಬೆಂಗಳೂರು (ಆ.15): ರಾಜ್ಯದಲ್ಲಿ ಭಾನುವಾರ 1837 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, 1017 ಮಂದಿ ಗುಣಮುಖರಾಗಿದ್ದಾರೆ. ಮೂವರು ಸಾವಿಗೀಡಾಗಿದ್ದಾರೆ. 29 ಸಾವಿರ ಸೋಂಕು ಪರೀಕ್ಷೆಗಳು ನಡೆದಿದ್ದು, ಪಾಸಿಟಿವಿಟಿ ದರ ಶೇ.6.3 ರಷ್ಟು ದಾಖಲಾಗಿದೆ. ಶನಿವಾರಕ್ಕೆ ಹೋಲಿದರೆ ಸೋಂಕು ಪರೀಕ್ಷೆಗಳು ಎರಡು ಸಾವಿರ ಕಡಿಮೆ ನಡೆಸಲಾಗಿದೆ. ಆದರೂ, ಹೊಸ ಪ್ರಕರಣಗಳು 508 ಏರಿಕೆಯಾಗಿವೆ. ಶನಿವಾರ 1329 ಪ್ರಕರಣ, ಐದು ಸಾವು ಸಂಭವಿಸಿತ್ತು. ಧಾರವಾಡ, ಬಳ್ಳಾರಿ ಹಾಗೂ ಕೊಪ್ಪಳದಲ್ಲಿ ತಲಾ ಒಬ್ಬರು ವೃದ್ಧರು ಸಾವಿಗಿಡಾಗಿದ್ದಾರೆ.
ಈ ಮೂವರು ಸೋಂಕು ದೃಢಪಟ್ಟಹಿನ್ನೆಲೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಸದ್ಯ ಸಕ್ರಿಯ ಸೋಂಕಿತರ ಸಂಖ್ಯೆ 10,922ಕ್ಕೆ ಏರಿಕೆಯಾಗಿವೆ. ಈ ಪೈಕಿ 62 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 5 ಮಂದಿ ಐಸಿಯು, 6 ಮಂದಿ ಆಕ್ಸಿಜನ್, 51 ಮಂದಿ ಸಾಮಾನ್ಯ ಹಾಸಿಗೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ 10,860 ಮಂದಿ ಮನೆಯಲ್ಲಿ ಆರೈಕೆಯಲ್ಲಿದ್ದಾರೆ.
undefined
Corona Crisis: ಕೋವಿಡ್ ಸೋಂಕಿತರ ಸಾವು ಹೆಚ್ಚಳ: ಆತಂಕ
ದ.ಕ.ದಲ್ಲಿ 20 ಪಾಸಿಟಿವ್ ಕೇಸ್: ದ.ಕ. ಜಿಲ್ಲೆಯಲ್ಲಿ ಭಾನುವಾರ 20 ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. 4 ಮಂದಿ ಗುಣಮುಖರಾಗಿದ್ದಾರೆ. ಯಾವುದೇ ಸಾವು ಸಂಭವಿಸಿಲ್ಲ. ಪಾಸಿಟಿವಿಟಿ ದರ ಶೇ.2.36 ದಾಖಲಾಗಿದೆ. ಜಿಲ್ಲೆಯಲ್ಲಿ ಈಗ ಒಟ್ಟು ಸೋಂಕಿತರ ಸಂಖ್ಯೆ1,36,435ಕ್ಕೆ ಏರಿಕೆಯಾಗಿದೆ. ಈ ಪೈಕಿ 75 ಸಕ್ರಿಯ ಪ್ರಕರಣಗಳು. 1,34,503 ಮಂದಿ ಗುಣಮುಖರಾಗಿದ್ದಾರೆ. 1,857 ಮಂದಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಎಲ್ಲಿ ಎಷ್ಟು ಕೇಸ್?: ಭಾನುವಾರ ಪತ್ತೆಯಾದ ಹೊಸ ಪ್ರಕರಣಗಳ ಪೈಕಿ ಬೆಂಗಳೂರಿನಲ್ಲಿ 1108 ಪತ್ತೆಯಾಗಿವೆ. ಉಳಿದಂತೆ ಅತಿ ಹೆಚ್ಚು ಮೈಸೂರು 141, ರಾಮನಗರ 70, ಧಾರವಾಡ 62 ಮಂದಿಗೆ ಸೋಂಕು ತಗುಲಿದೆ. 6 ಜಿಲ್ಲೆಗಳಲ್ಲಿ ಬೆರಳೆಣಿಕೆ, ಗದಗ ಜಿಲ್ಲೆಯಲ್ಲಿ ಶೂನ್ಯ ಪ್ರಕರಣಗಳು ವರದಿಯಾಗಿವೆ.
ಉಚಿತ 3ನೇ ಡೋಸ್ ನೀಡಿದರೂ ಜನ ಪಡೆಯುತ್ತಿಲ್ಲ: ರಾಜ್ಯದಲ್ಲಿ ಕೋವಿಡ್ ಮೂರನೇ ಡೋಸ್ ಲಸಿಕೆಯನ್ನು ಶೇ.17ರಷ್ಟುಮಂದಿ ಮಾತ್ರ ಪಡೆದಿದ್ದು, ಉಚಿತವಾಗಿ ನೀಡುತ್ತಿದ್ದರೂ ಲಸಿಕೆ ಪಡೆಯಲು ಮುಂದೆ ಬಾರದಿರುವುದಕ್ಕೆ ಬೇಸರ ವ್ಯಕ್ತಪಡಿಸಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಲಸಿಕೆ ಪಡೆದರೆ ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾದರೂ ಸಾವು ಸಂಭವಿಸುವ ಸ್ಥಿತಿ ಸೃಷ್ಟಿಯಾಗುವುದಿಲ್ಲ. ಹೀಗಾಗಿ ಉತ್ತಮ ಆರೋಗ್ಯಕ್ಕಾಗಿ ಅರ್ಹರೆಲ್ಲರೂ ಲಸಿಕೆ ಪಡೆಯಬೇಕು ಎಂದು ಮನವಿ ಮಾಡಿದರು.
ಗುರುವಾರ ವಿಧಾನಸೌಧದಲ್ಲಿ ನಡೆದ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲ ಎರಡೂ ಡೋಸ್ ಲಸಿಕಾಕರಣ ಪ್ರಮಾಣ ಶೇ.100ರಷ್ಟುದಾಟಿದರೂ, ಮೂರನೇ ಡೋಸ್ ಸಲಿಕಾಕರಣ ಶೇ.17ರಷ್ಟುಮಾತ್ರ ಆಗಿದೆ. ಪ್ರಧಾನಿ ಮೋದಿ ಅವರು ಮೂರನೇ ಡೋಸ್ ಕೂಡ ಉಚಿತವಾಗಿ ನೀಡಲು ಕ್ರಮ ವಹಿಸಿದ್ದಾರೆ. ಲಕ್ಷಾಂತರ ಲಸಿಕೆ ಡೋಸ್ ಲಭ್ಯವಿದ್ದರೂ ಜನರು ಮುಂದೆ ಬಾರದಿರುವುದು ಬೇಸರ ತಂದಿದೆ. ಲಸಿಕೆ ಪಡೆದವರಲ್ಲಿ 6-7 ತಿಂಗಳ ನಂತರ ರೋಗ ನಿರೋಧಕ ಶಕ್ತಿ ಕ್ಷೀಣಿಸುವುದರಿಂದ ಮೂರನೇ ಡೋಸ್ ನೀಡಲಾಗುತ್ತಿದೆ. ಮೂರನೇ ಡೋಸ್ ಪಡೆದರೆ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತದೆ ಎಂದರು.
ಕೊರೋನಾ ಹೆಚ್ಚಳ: ಕರ್ನಾಟಕದಲ್ಲಿ ಮತ್ತೆ ಕಠಿಣ ನಿಯಮ ಜಾರಿ, ಗಣೇಶೋತ್ಸವಕ್ಕೂ ನಿರ್ಬಂಧ?
‘ರಾಜ್ಯದಲ್ಲಿ ಈ ತಿಂಗಳ 10ರವರೆಗೆ 24 ಮಂದಿ ಸಾವನ್ನಪ್ಪಿದ್ದು ಬಹುತೇಕರು 60 ವರ್ಷ ವಯಸ್ಸು ಮೇಲ್ಪಟ್ಟವರಾಗಿದ್ದಾರೆ. ಯುವಜನರು ಲಸಿಕೆ ಪಡೆಯುವ ಜತೆಗೆ ಮನೆಯ ಹಿರಿಯರಿಗೂ ಕೊಡಿಸಬೇಕು. ರಾಜ್ಯದಲ್ಲಿ ಶೇ.7.2ರಷ್ಟುಕೋವಿಡ್ ಪಾಸಿಟಿವಿಟಿ ದರ ಇದೆ. ಕೆಲವು ಜಿಲ್ಲೆಗಳಲ್ಲಿ ರಾಜ್ಯದ ಪಾಸಿಟಿವಿಟಿ ದರಕ್ಕಿಂತ ಹೆಚ್ಚು ದರ ದಾಖಲಾಗಿದೆ. ಧಾರವಾಡದಲ್ಲಿ ಅತಿ ಹೆಚ್ಚು ದಾಖಲಾಗಿದೆ. ರಾಜ್ಯದಲ್ಲಿ ಪ್ರತಿದಿನ 30 ಸಾವಿರ ಮಾದರಿಗಳನ್ನು ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ. ಕೇಂದ್ರದ ಮಾರ್ಗಸೂಚಿಯಂತೆ, ರೋಗ ಲಕ್ಷಣ ಇರುವವರಿಗೆ ಪರೀಕ್ಷೆ ಮಾಡಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.