ಟಿಪ್ಪು ಸುಲ್ತಾನ್‌ ಬ್ಯಾನರ್‌ ಹರಿದ ಪ್ರಕರಣ, ಸರ್ಕಾರದ ವಿರುದ್ಧ ಕಾಂಗ್ರೆಸ್‌ ಕಿಡಿ!

By Santosh NaikFirst Published Aug 14, 2022, 11:51 AM IST
Highlights

75ನೇ ಸ್ವಾತಂತ್ರ್ಯೋತ್ಸವ ಹಿನ್ನಲೆಯಲ್ಲಿ ಕಾಂಗ್ರೆಸ್‌ ಪಕ್ಷದ ನೇತೃತ್ವದಲ್ಲಿ ನಡೆಯಲಿರುವ ಫ್ರೀಡಮ್‌ ಮಾರ್ಚ್‌ಗೆ ಬೆಂಗಳೂರಿನಲ್ಲಿ ಭರ್ಜರಿ ಸಿದ್ಧತೆ ಮಾಡಲಾಗಿದೆ. ನಗರದ ಹೃದಯಭಾಗದಲ್ಲಿ ಹಾಕಲಾಗಿದ್ದ ವಿವಿಧ ಸ್ವಾತಂತ್ರ್ಯ ಹೋರಾಟಗಾರರ ಬ್ಯಾನರ್‌ನಲ್ಲಿ ಟಿಪ್ಪು ಸುಲ್ತಾನ್‌ ಚಿತ್ರ ಕೂಡ ಇದ್ದವು. ಇದನ್ನು ಕೆಲವರು ಹರಿದು ಹಾಕಿದ್ದಯ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಕಿಡಿಕಾರಿದೆ.

ಬೆಂಗಳೂರು (ಆ.14): ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷವಾದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ನಡೆಸುತ್ತಿರುವ ಹರ್‌ ಘರ್‌ ತಿರಂಗಾ ಅಭಿಯಾನಕ್ಕೆ ಪ್ರತಿಯಾಗಿ ಕಾಂಗ್ರೆಸ್ ಪಕ್ಷ ಫ್ರೀಡಂ ಮಾರ್ಚ್‌ಅನ್ನು ಆ. 15ಕ್ಕೆ ಆಯೋಜನೆ ಮಾಡಿದೆ. ಅದಕ್ಕೆ ಪ್ರತಿಯಾಗಿ ಬೆಂಗಳೂರಿನಲ್ಲಿ ಸ್ವಾತಂತ್ರ್ಯ ನಡಿಗೆಯ ಕುರಿತಾದ ದೊಡ್ಡ ದೊಡ್ಡ ಫ್ಲೆಕ್ಸ್‌ಗಳನ್ನು ಹಾಕಲಾಗಿದೆ. ಇದರಲ್ಲಿ ಟಿಪ್ಪು ಸುಲ್ತಾನ್‌ ಭಾವವಿತ್ರವಿರುವ ಬ್ಯಾನರ್‌ಗಳನ್ನು ಕೆಲವರು ಹರಿದು ಹಾಕಿದ್ದಾರೆ. ಕೆಎಆರ್‌ ಸರ್ಕಲ್‌ ಹಾಗೂ ಹಡ್ಸನ್‌ ಸರ್ಕಲ್‌ನಲ್ಲಿ ಹಾಕಿರುವ ಫ್ಲೆಕ್ಸ್‌ಗಳನ್ನು ಹರಿದು ಹಾಕಲಾಗಿದೆ. ಇದರ ಬೆನ್ನಲ್ಲಿಯೇ ಘಟನಾ ಸ್ಥಳಕ್ಕೆ ಹಲಸೂರು ಗೇಟ್‌ ಪೊಲೀಸರು ಆಗಮಿಸಿದ್ದು, ಹರಿದಿರುವ ಬ್ಯಾನರ್‌ಗಳನ್ನು ತೆರವು ಮಾಡಿದ್ದಾರೆ. ಇನ್ನು ಕಾಂಗ್ರೆಸ್‌ ಪಕ್ಷ ಹಾಗೂ ಯೂತ್‌ ಕಾಂಗ್ರೆಸ್‌ ಇದಕ್ಕಾಗಿ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. 'ನಗರದ ಹಲವೆಡೆ ಕಾಂಗ್ರೆಸ್‌ ಪಕ್ಷ ಈ ಬ್ಯಾನರ್‌ಗಳನ್ನು ಹಾಕಿದೆ. ಇದರಲ್ಲಿ ಎರಡು ಬ್ಯಾನರ್‌ಗಳನ್ನು ಭಗ್ನ ಮಾಡಲಾಗಿದೆ. ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದೇವೆ. ರಾತ್ರಿ 10.30ರ ನಂತರ ನಡೆದಿರುವ ಘಟನೆ ಇದಾಗಿದೆ. ಪೊಲೀಸರೇ ಸ್ವತಂತ್ರ್ಯವಾಗಿ ತನಿಖೆ ನಡೆಸುತ್ತಿದ್ದೇವೆ' ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್‌ ಗೌಡ ಹೇಳಿಕೆ ನೀಡಿದ್ದಾರೆ.

ಈ ಕುರಿತಾಗಿ ಮಾತನಾಡಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್‌, ಹಡ್ಸನ್ ಸರ್ಕಲ್ ಮಾತ್ರ ಅಲ್ಲ ಎರಡು ಕಡೆ ಬ್ಯಾನರ್‌ ಹರಿದು ಹಾಕಿದ್ದಾರೆ. ನಾವೂ ಕೂಡ ದೇಶಕ್ಕಾಗಿ ಹೋರಾಡಿದವರ ಚರಿತ್ರೆ ಓದಿದ್ದೇವೆ. ರಾಷ್ಟ್ರಪತಿಯಾಗಿದ್ದ ಕೋವಿಂದ್ ಕೂಡ ಬಂದು ಪಾಠ ಹೇಳಿದ್ದಾರೆ. ಇವತ್ತು ಟಿಪ್ಪು ಸುಲ್ತಾನ್ ಭಾವಚಿತ್ರ ಇರುವ ಬ್ಯಾನರ್ ಅನ್ನು ಕಿಡಿಗೇಡಿಗಳು ಹರಿದು ಹಾಕಿದ್ದಾರೆ. ನಾನು ಘಟನಾ ಸ್ಥಳಕ್ಕೆ ಬಂದು ಇದನ್ನು ನೋಡಿದ್ದೇನೆ. ಪೊಲೀಸರ ಕಾವಲು ಇದ್ದ ನಡುವೆಯೇ ಬ್ಯಾನರ್‌ಅನ್ನು ಹರಿದು ಹಾಕಿದ್ದಾರೆ. ಪೊಲೀಸರು ಕಾನೂನು ರೀತಿ ಕ್ರಮ ಕೈಗೊಳ್ಳೋದಾಗಿ ಹೇಳಿದ್ದಾರೆ. ಆದರೆ, ಅವರು ಬೇಗ ಕ್ರಮ ಕೈಗೊಳ್ಳಬೇಕು. ಇಲ್ಲದೇ ಇದ್ದಲ್ಲಿ ಪರಿಸ್ಥಿತಿ ಬೇರೆ ರೀತಿಗೆ ತಿರುಗಬಹುದು. ನಾವೆಲ್ಲ ಶಾಂತಿಯಿಂದ ಇರೋಣ. ಯಾರೋ ನಾಲ್ಕು ಜನ ಕಿಡಿಗೇಡಿಗಳು ಫೋಟೊ ಹರಿದ ಮಾತ್ರಕ್ಕೆ ಶಾಂತಿ ಸುವ್ಯವಸ್ಥೆ ಹಾಳು ಮಾಡೋದು ಬೇಡ. ಇದನ್ನು ಯಾರು ಮಾಡಿದ್ದಾರೆ ಅನ್ನೋದರ ಮಾಹಿತಿ ನನಗೆ ಇದೆ. ಆದರೆ, ಪೊಲೀಸರು ಕ್ರಮ ಕೈಗೊಳ್ಳಬೇಕು. ನಾವು ಕಾನೂನಾತ್ಮಕ ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ.

ಸ್ವಾತಂತ್ರ್ಯ ನಡಿಗೆ, ಕಾರ‍್ಯಕರ್ತರಿಗೆ ಕಾಂಗ್ರೆಸ್ಸಿಂದಲೇ ಮೆಟ್ರೋ ಟಿಕೆಟ್‌

ಟಿಪ್ಪು ಪ್ಯಾಲೇಸ್‌ಗೆ ಅಲಂಕಾರ: ಇಲ್ಲಿ ಕಿಡಿಗೇಡಿಗಳು ನಾವು ಹಾಕಿರುವ ಟಿಪ್ಪು ಸುಲ್ತಾನ್‌ ಬ್ಯಾನರ್‌ಅನ್ನು ಹರಿದು ಹಾಕಿದ್ದಾರೆ, ಆದರೆ, ಕೇಂದ್ರ ಸರ್ಕಾರದ ಅಡಿಯಲ್ಲಿ‌ ಬರುವ ಭಾರತೀಯ ಪುರಾತತ್ವ ಇಲಾಖೆ ಟಿಪ್ಪು ಪ್ಯಾಲೆಸ್ ಅನ್ನು ದೀಪಾಲಂಕಾರ ಮಾಡಿದ್ದಾರೆ. ಟಿಪ್ಪು ಪ್ಯಾಲೇಸ್‌ಗೆ ಅಲಂಕಾರ ಮಾಡುವ ಮೂಲಕ ಸ್ವಾತಂತ್ರ್ಯ ಸಂಭ್ರಮವನ್ನು ಆಚರಣೆ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಕೂಡ ಟಿಪ್ಪುವನ್ನು ಗೌರವವಿಂದ ಕಾಣುತ್ತಿದೆ. ಹಾಗಿದ್ದರೂ ಈ ರೀತಿ ಮಾಡ್ತಿದ್ದಾರೆ ಅನ್ನೋದೆ ವಿಪರ್ಯಾಸ ಎಂದು ಡಿಕೆ ಶಿವಕುಮಾರ್‌ ಹೇಳಿದ್ದಾರೆ.

ಕಾಂಗ್ರೆಸ್‌ ಸ್ವಾತಂತ್ರ್ಯ ನಡಿಗೆಗೆ 40 ಸಾವಿರ ಜನ ನೋಂದಣಿ: ಡಿ.ಕೆ. ಶಿವಕುಮಾರ್‌

ಕಾಂಗ್ರೆಸ್‌ನಿಂದ ದೂರು: ಟಿಪ್ಪು ಸುಲ್ತಾನ್‌ ಬ್ಯಾನರ್‌ ಹರಿದ ಪ್ರಕರಣದಲ್ಲಿ ಇತ್ತೀಚೆಗೆ ದೂರು ದಾಖಲಾಗಿದೆ. ಹಲಸೂರು ಗೇಟ್‌ ಪೊಲೀಸ್‌ ಠಾನೆಯಲ್ಲಿ ಕಾಂಗ್ರೆದ್ ಮುಖಂಡ ಮಂಜುನಾಥ್‌ರಿಂದ ದೂರು ದಾಖಲಾಗಿದೆ. ದೂರಿನ ಅನ್ವಯ ಎಫ್ ಐ ಆರ್ ದಾಖಲು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ನಡುವೆ ಯೂತ್‌ ಕಾಂಗ್ರೆಸ್‌, ಪ್ರಕರಣದ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದೆ. ಈ ಸರ್ಕಾರಕ್ಕೆ ಮಾನ ಮರ್ಯಾದೆ ಇದೆಯೇ? ಬ್ರಿಟಿಷರ ವಿರುದ್ಧ ಹೋರಾಡಿದ ದೇಶದ ಮೊದಲ ರಾಜ. ದೇಶದ ಸ್ವಾತಂತ್ರ್ಯಕ್ಕಾಗಿ ತನ್ನ ಮಕ್ಕಳನ್ನೇ ತ್ಯಾಗ ಮಾಡಿದ ದೇಶಪ್ರೇಮಿ ಎಂದು ಯೂತ್‌ ಕಾಂಗ್ರೆಸ್‌ ಅಧ್ಯಕ್ಷ ಶ್ರೀನಿವಾಸ್‌ ಹೇಳಿದ್ದಾರೆ.

click me!