
ಬೆಂಗಳೂರು (::ಜು.22) : ಹದಿನೈದು ದಿನಗಳ ಕಾಲ ನಡೆದ 16ನೇ ವಿಧಾನಸಭೆಯ ಮೊದಲ ಅಧಿವೇಶನದ ಮುಂದುವರೆದ ಕಾರ್ಯಕಲಾಪಗಳು ಶುಕ್ರವಾರ ಮುಕ್ತಾಯಗೊಂಡಿದ್ದು, ರಾಜ್ಯಪಾಲರ ಭಾಷಣ, ಬಜೆಟ್ ಮಂಡನೆ, ಇವುಗಳ ಮೇಲೆ ಚರ್ಚೆ ಉತ್ತರ ನೀಡಿಕೆ ನಡುವೆ 14 ವಿಧೇಯಕಗಳನ್ನು ಮಂಡಿಸಿ ಅಂಗೀಕರಿಸಲಾಗಿದೆ ಎಂದು ಸ್ಪೀಕರ್ ಯು.ಟಿ.ಖಾದರ್ ಮಾಹಿತಿ ನೀಡಿದರು.
ಶುಕ್ರವಾರ ವಿಧಾನಸಭೆ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ ಬಳಿಕ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಜು.3ರಿಂದ 21ರವರೆಗೆ ಒಟ್ಟು 15 ದಿನಗಳ ಕಾಲ 78 ಗಂಟೆ 25 ನಿಮಿಷಗಳ ಕಾಲ ಈ ಬಾರಿಯ ಕಾರ್ಯಕಲಾಪ ನಡೆಸಲಾಗಿದೆ. ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದಲ್ಲಿ 34 ಸದಸ್ಯರು ಒಟ್ಟು 12 ಗಂಟೆ 30 ನಿಮಿಷಗಳ ಕಾಲ ಚರ್ಚೆಯಲ್ಲಿ ಭಾಗವಹಿಸಿದ್ದರು. ಬಜೆಟ್ ಚರ್ಚೆಯಲ್ಲಿ 62 ಸದಸ್ಯರು ಒಟ್ಟು 12 ಗಂಟೆ 52 ನಿಮಿಷಗಳ ಕಾಲ ಭಾಗಿಯಾಗಿದ್ದರು. ಒಟ್ಟು 20 ಅಧಿಸೂಚನೆಗಳು, 2 ಅಧ್ಯಾದೇಶಗಳು ಮತ್ತು 70 ವಾರ್ಷಿಕ ವರದಿಗಳು, 99 ಲೆಕ್ಕ ಪರಿಶೋಧನಾ ವರದಿ, 4 ಅನುಪಾಲನಾ ವರದಿಗಳನ್ನು ಸದನದಲ್ಲಿ ಮಂಡಿಸಲಾಗಿದೆ ಎಂದು ತಿಳಿಸಿದರು.
ಹಾಲು, ಅಲ್ಕೋಹಾಲ್ ಆಯ್ತು, ಇದೀಗ ಸರಕು ವಾಹನಗಳ ಮೇಲಿನ ತೆರಿಗೆ ಡಬಲ್!
ಧನವಿಧೇಯಕ ಸೇರಿದಂತೆ 14 ವಿಧೇಯಕಗಳು ಅಂಗೀಕಾರಗೊಂಡಿವೆ. 120 ಪ್ರಶ್ನೆಗಳಿಗೆ ಸದನದಲ್ಲಿ ಉತ್ತರ, 966 ಪ್ರಶ್ನೆಗಳಿಗೆ ಲಿಖಿತ ಉತ್ತರ ನೀಡಲಾಗಿದೆ. ಸದನದ ಕಾರ್ಯಕಲಾಪಗಳಿಗೆ ನಿಗದಿತ ಸಮಯಕ್ಕೆ ಆಗಮಿಸಿದ ಸದಸ್ಯರ ಹೆಸರು ನಿತ್ಯ ಪ್ರಕಟಿಸುವಂತಹ ಹೊಸ ಪದ್ಧತಿ ಆರಂಭಿಸಲಾಗಿತ್ತು. ಒಟ್ಟಾರೆ ಸದನದಲ್ಲಿ ಶೇ.90 ಸದಸ್ಯರ ಹಾಜರಾತಿ ಇತ್ತು ಎಂದು ವಿವರಿಸಿದರು.
ಸ್ಪೀಕರ್ ಹುದ್ದೆಯ ಲಕ್ಷ್ಮಣ ರೇಖೆ ದಾಟಿಲ್ಲ:
ಸಭಾಧ್ಯಕ್ಷರ ಪೀಠಕ್ಕೆ ಅಗೌರವ ತೋರಿಸಿ ವ್ಯವಸ್ಥೆಗೆ ಕಪ್ಪು ಚುಕ್ಕೆ ಬರುವಂತೆ ನಡೆದುಕೊಂಡಿದ್ದರಿಂದ ಪ್ರತಿಪಕ್ಷಗಳ 10 ಶಾಸಕರ ವಿರುದ್ಧ ಅಮಾನತು ಕ್ರಮ ಕೈಗೊಳ್ಳಬೇಕಾಯಿತು. ಸದನದ ಗೌರವ ಉಳಿಸಲು ನನ್ನ ಕರ್ತವ್ಯ ನಾನು ಮಾಡಿದ್ದೇನೆಯೇ ಹೊರತು ಸಭಾಧ್ಯಕ್ಷ ಹುದ್ದೆಯ ಲಕ್ಷ್ಮಣ ರೇಖೆಯನ್ನು ದಾಟಿಲ್ಲ ಎಂದು ಸ್ಪೀಕರ್ ಯು.ಟಿ.ಖಾದರ್ ಇದೇ ವೇಳೆ ಬಿಜೆಪಿ ಶಾಸಕರ ಅಮಾನತು ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡರು.
ಕೆಎಸ್‌ಆರ್‌ಟಿಸಿ ಸಿಬ್ಬಂದಿಗೆ 1 ಕೋಟಿ ವಿಮೆ: ಇಷ್ಟು ಬೃಹತ್ ಮೊತ್ತದ ಪರಿಹಾರ ದೇಶದಲ್ಲೇ ಮೊದಲು..!
ಪ್ರತಿಪಕ್ಷಗಳ ಸಭೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಅವರು ಔತಣ ಕೂಟ ಏರ್ಪಡಿಸಿದ್ದರು. ನನ್ನನ್ನು ಆಹ್ವಾನಿಸಿದ್ದಕ್ಕೆ ಹೋಗಿದ್ದೆ. ಅಲ್ಲಿ ಯಾವುದೇ ಸಭೆಯಲ್ಲಿ ಭಾಗಿಯಾಗಿಲ್ಲ. ನಾಳೆ ಬೇರೆಯವರು ಊಟಕ್ಕೆ ಕರೆದರೂ ಕೂಡಾ ಹೋಗುತ್ತೇನೆ. ನನ್ನದು ಎಲ್ಲರನ್ನೂ ಒಳಗೊಳ್ಳುವ ಯೋಚನೆ.
- ಯು.ಟಿ.ಖಾದರ್, ಸ್ಪೀಕರ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ