
ಬೆಂಗಳೂರು(ಮಾ.20): ಕಾಶ್ಮೀರ ಫೈಲ್ಸ್ (The Kashmir Files) ಸಿನಿಮಾ ತೋರಿಸಿ ರಾಜ್ಯದಲ್ಲಿ ಆಗುತ್ತಿರುವ ಅಕ್ರಮಗಳನ್ನು ಮುಚ್ಚಿ ಹಾಕಲು ಬಿಜೆಪಿ(BJP) ಯತ್ನಿಸುತ್ತಿದೆ. ಗಂಗಾಕಲ್ಯಾಣ ಯೋಜನೆಯಡಿ ನೀಡಿರುವ ಗುತ್ತಿಗೆಯಲ್ಲಿ 130 ಕೋಟಿ ರು.ಗಳ ವ್ಯಾಪಕ ಅವ್ಯವಹಾರ ನಡೆದಿದೆ. ದಲಿತರ ಯೋಜನೆಯಲ್ಲಿ ಲೂಟಿ ಮಾಡಿ ಅದನ್ನು ಮರೆಮಾಚಲು ಕಾಶ್ಮೀರ ಫೈಲ್ಸ್, ಹಿಜಾಬ್, ಕೇಸರಿ ಶಾಲು ತಂದು ಧರ್ಮ ಪ್ರಚೋದನೆ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಪ್ರಿಯಾಂಕ ಖರ್ಗೆ(Priyank Kharge) ಆರೋಪಿಸಿದ್ದಾರೆ.
ಗಂಗಾಕಲ್ಯಾಣ ಯೋಜನೆಯಡಿ(Gangakalyana Project) ಅಕ್ರಮವಾಗಿ ಗುತ್ತಿಗೆದಾರರಿಗೆ ವಹಿವಾಟಿಗಿಂತ ದುಪ್ಪಟ್ಟು ಮೊತ್ತದ ಗುತ್ತಿಗೆ ನೀಡಲಾಗಿದೆ. ಜತೆಗೆ ಕಳೆದ ವರ್ಷಕ್ಕಿಂತ ಬೋರ್‌ವೆಲ್ ಕೊರೆಯುವ ದರ, ಪೈಪು ಅಳವಡಿಕೆಯನ್ನು ಏಕಾಏಕಿ ದುಪ್ಪಟ್ಟು ಮಾಡಲಾಗಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ನೀಡುತ್ತಿರುವ ದರಕ್ಕಿಂತ ದುಪ್ಪಟ್ಟು ದರವನ್ನು ನೀಡಲು ಸಮಾಜ ಕಲ್ಯಾಣ ಇಲಾಖೆ ಅನುಮೋದನೆ ನೀಡಿದೆ. ಹೀಗಾಗಿ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. ಇದಕ್ಕೆ ಅನುಮೋದನೆ ಕೊಟ್ಟಿರುವ ಸಚಿವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು. ಸಚಿವರ ರಾಜೀನಾಮೆ ಪಡೆಯಲಾಗದಿದ್ದರೆ ಮುಖ್ಯಮಂತ್ರಿಗಳೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
Right-Wing Activist Murder: ಗೃಹ ಸಚಿವರ ವೈಫಲ್ಯ, ಪ್ರಿಯಾಂಕ ಖರ್ಗೆ ಆರೋಪ
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗಂಗಾ ಕಲ್ಯಾಣ ಯೋಜನೆಯಡಿ 2019-20, 2020-21ನೇ ಸಾಲಿನಲ್ಲಿ ಈ ಯೋಜನೆಯಲ್ಲಿ 14,577 ಕೊಳವೆ ಬಾವಿಗೆ 431 ಕೋಟಿ ರು. ಮೊತ್ತದ ಟೆಂಡರ್ ಕರೆಯಲಾಗಿದೆ. ಗುತ್ತಿಗೆ ಪಡೆಯಲು ಸರ್ಕಾರಿ ಕಾಮಗಾರಿ ಮಾಡಿರುವ ಅನುಭವ ಇರಬೇಕು ಎಂದು ಮಾರ್ಗಸೂಚಿಯಲ್ಲಿದೆ. ಇದರ ಪ್ರಕಾರ 14,577 ಕೊಳವೆ ಬಾವಿ ಕೊರೆಯಲು ಎಲ್ಲ ಗುತ್ತಿಗೆದಾರರು ಸೇರಿ ಹಿಂದೆ 11,656 ಕೊಳವೆ ಬಾವಿ ಕೊರೆದಿರುವ ಅನುಭವ ಹೊಂದಿರಬೇಕು.
ಆದರೆ, ಕೃಷ್ಣ ಭಾಗ್ಯ ಜಲ ನಿಗಮ ಮತ್ತು ಸಣ್ಣ ನೀರಾವರಿಯಲ್ಲಿ ಈ ಗುತ್ತಿಗೆದಾರರು ಕಳೆದ ಐದು ವರ್ಷಗಳಲ್ಲಿ 500 ಕೊಳವೆಬಾವಿ ಕೊರೆದಿಲ್ಲ. ಅಂತಹವರಿಗೆ ಟೆಂಡರ್(Tender) ನೀಡಲಾಗಿದೆ ಎಂದು ಗುತ್ತಿಗೆದಾರರ ವಿವರಗಳ ಸಹಿತ ಬಹಿರಂಗಪಡಿಸಿ, ಇವರಿಗೆ ಕೆಲಸ ಮಾಡದೆಯೇ ನಕಲಿ ಪ್ರಮಾಣಪತ್ರ ನೀಡಲಾಗಿದೆ ಎಂದು ದೂರಿದರು.
ನಿಯಮ ಬಾಹಿರವಾಗಿ ಗುತ್ತಿಗೆ:
ಇನ್ನು ದಾಖಲೆ ಪರಿಶೀಲನೆ ವೇಳೆ ಒಂದು ನಿಗಮದಲ್ಲಿ ಕಾರ್ಯಾನುಭವ ಇಲ್ಲ ಎಂದು ಗುತ್ತಿಗೆ ನಿರಾಕರಿಸಿದ್ದ ಗುತ್ತಿಗೆದಾರನಿಗೆ ಮತ್ತೆ ಅರ್ಹರು ಎಂದು ಮಾನ್ಯ ಮಾಡಿದ್ದಾರೆ. ಇನ್ನು ಪಂಚಮುಖಿ ಎಂಬ ಕಂಪನಿ 28 ಕೋಟಿ ವಹಿವಾಟು ಮಾಡಿದ್ದು, 22 ಕೋಟಿ ವರೆಗಿನ ಟೆಂಡರ್ ಸಿಗಬೇಕು. ಆದರೆ ನಿಯಮ ಬಾಹಿರವಾಗಿ 73 ಕೋಟಿ ಮೊತ್ತದ ಟೆಂಡರ್ ನೀಡಲಾಗಿದೆ.
ದಯವಿಟ್ಟು ಶಿಕ್ಷಣ ವ್ಯವಸ್ಥೆ ಬದಲಾಯಿಸಲು ಹೋಗಬೇಡಿ: ಪ್ರಿಯಾಂಕ್ ಖರ್ಗೆ
ಈ ರೀತಿ 431 ಕೋಟಿಯಲ್ಲಿ 176 ಕೋಟಿ ಟೆಂಡರ್ ಕೇವಲ 3 ಗುತ್ತಿಗೆದಾರರಿಗೆ ನೀಡಲಾಗಿದೆ. ಪಂಚಮುಖಿಗೆ 73, ವೀರಭದ್ರಪ್ಪ ಎಂಬುವವರಿಗೆ 48, ಶರವಣ ಎನ್ನುವವರಿಗೆ 55 ಕೋಟಿ ರು. ಟೆಂಡರ್ ಸಿಕ್ಕಿದೆ. ಇವರೆಲ್ಲರಿಗೂ ಅವರ ವಹಿವಾಟು ಮೀರಿ ಟೆಂಡರ್ ನೀಡಲಾಗಿದೆ.
ಬಿಜೆಪಿ, ಸಂಘ ಪರಿವಾರದ ದೇಶಭಕ್ತಿ ನಕಲಿ, 1930ರ ದಾಖಲೆ ತೆಗೆದ ಪ್ರಿಯಾಂಕ್ ಖರ್ಗೆ
ಬೆಂಗಳೂರು: ಕೆಂಪುಕೋಟೆ ಮೇಲೆ ಕೇಸರಿ ಧ್ವಜ ಹಾರಿಸುವ ದಿನಗಳು ಬರುತ್ತವೆ ಅಂತಾ ಕೆಲ ದಿನಗಳ ಹಿಂದಷ್ಟೇ ಈಶ್ವರಪ್ಪ ನೀಡಿದ್ದ ಹೇಳಿಕೆ ವಿರುದ್ಧ ಕಾಂಗ್ರೆಸ್ ಸಿಡಿದೆದ್ದಿದೆ. ಸದನದಲ್ಲಿ ಕೋಲಾಹಲ(Karnataka Assembly Session)ವನ್ನೇ ಸೃಷ್ಟಿಸಿತ್ತು. ರಾಷ್ಟ್ರಧ್ವಜಕ್ಕೆ ಅಗೌರವ ತೋರಿರುವ ಈಶ್ವರಪ್ಪ (KS Eshwarappa) ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು. ಅವರನ್ನು ಸಂಪುಟದಿಂದ ಕೈಬಿಡಬೇಕೆಂದು ಕಾಂಗ್ರೆಸ್ ಪಟ್ಟು ಹಿಡಿದಿದೆ. ಈ ಬಗ್ಗೆ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ಮಧ್ಯೆ ಆರೋಪ-ಪ್ರತ್ಯಾರೋಪ ತಾರಕಕ್ಕೇರಿದೆ. ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge), ಬಿಜೆಪಿಗೆ (BJP) ರಾಷ್ಟ್ರ ಭಕ್ತಿ ಸವಾಲು ಹಾಕಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ