Vairamudi 9 ದಿನಗಳ ವೈರಮುಡಿ ಬ್ರಹ್ಮೋತ್ಸವಕ್ಕೆ ಸಂಭ್ರಮದ ತೆರೆ

By Suvarna News  |  First Published Mar 20, 2022, 12:11 AM IST

- ವೈರಮುಡಿ ಬ್ರಹ್ಮೋತ್ಸವ ಅಂತ್ಯ.

- ಈ ಬಾರಿ ಸಂಪ್ರದಾಯದ ಜೊತೆ ಭಕ್ತರಿಗೆ ಮನರಂಜನೆ.

- ಭಕ್ತರನ್ನ ರಂಜಿಸಿದ ಮ್ಯುಸಿಕಲ್ ನೈಟ್ಸ್, ಹೈಟೆಕ್ ತೆಪ್ಪೋತ್ಸವ.


ನಂದನ್ ರಾಮಕೃಷ್ಣ, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಡ್ಯ

ಮಂಡ್ಯ (ಮಾ.19): ವಿಶ್ವಪ್ರಸಿದ್ಧ ಮೇಲುಕೋಟೆ ವೈರಮುಡಿ ಬ್ರಹ್ಮೋತ್ಸವಕ್ಕೆ (Melukote Vairamudi Bramotsava ) ಶನಿವಾರ ತೆರೆ ಬಿದ್ದಿದೆ. ಕೊರೊನಾ (Corona) ಕಾರಣಕ್ಕೆ ಕಳೆದ 2 ವರ್ಷಗಳಿಂದ ಸ್ಥಗಿತವಾಗಿದ್ದ ಉತ್ಸವ ಈ ಬಾರಿ ವಿಜೃಂಭಣೆಯಿಂದ ಜರುಗಿತು. ಉತ್ಸವದ 4ನೇ ದಿನದಂದು ವಜ್ರಖಚಿತ ವೈರಮುಡಿಯಿಂದ ಶ್ರೀ ಚೆಲುವನಾರಾಯಣನನ್ನು (Cheluvarayaswami ) ಅಲಂಕರಿಸಲಾಗಿತ್ತು. ದೇಶದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಲಕ್ಷಾಂತರ ಭಕ್ತರಿಗೆ ಗರುಡರೂಢನಾದ ಚೆಲುವನಾರಾಯಣ ದರ್ಶನ ಭಾಗ್ಯ ಕರುಣಿಸಿದ್ರು. 9ನೇ ದಿನವಾದ ಶನಿವಾರ ಚೆಲುವ ನಾರಾಯಣ ಪಟ್ಟಾಭಿಷೇಕದೊಂದಿಗೆ ವೈರಮುಡಿ ಉತ್ಸವಕ್ಕೆ ತೆರೆಬಿದ್ದಿದೆ.

ಭಕ್ತಿ ಭಾವದ ಜೊತೆ ಮನರಂಜನೆಯಲ್ಲಿ ಮಿಂದೆದ್ದ ಭಕ್ತ ಸಮೂಹ: ಈ ಬಾರಿಯ ವೈರಮುಡಿ ಉತ್ಸವವನ್ನು ಹಿಂದೆಂದಿಗಿಂತಲೂ ಬಹಳ ವಿಶಿಷ್ಟವಾಗಿ ಆಯೋಜನೆ ಮಾಡಲಾಗಿತ್ತು. ಭಕ್ತಿ, ಸಂಪ್ರದಾಯ ಆಚರಣೆ ಜೊತೆ ಜೊತೆಗೆ ಮನರಂಜನಾ ಕಾರ್ಯಕ್ರಮಗಳುನ್ನು ಆಯೋಜಿಸಲಾಗಿತ್ತು. 9 ದಿನಗಳ ಉತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆಂದೆ ಬೃಹತ್ ವೇದಿಕೆ ನಿರ್ಮಿಸಿದ್ದರು. ಮಾ. 15 ರಂದು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಪ್ರೇಕ್ಷಕರನ್ನು ರಂಜಿಸಿದ್ರೆ. ಮಾ.16ರ ರಾತ್ರಿ ಗಾಯಕ ಸಂಜಿತ್ ಹೆಗ್ಡೆ ಹಾಗೂ ವಾಸುಕಿ ವೈಭವ್ ತಮ್ಮ ಮ್ಯುಸಿಕಲ್ ನೈಟ್ಸ್ ಮೂಲಕ ಭರಪೂರ ಮನರಂಜನೆ ನೀಡಿದ್ರು.

Tap to resize

Latest Videos

ಗಮನಸೆಳೆದ ಹೈಟೆಕ್ ತೆಪ್ಪೋತ್ಸವ:  ವೈರಮುಡಿ ಬ್ರಹ್ಮೋತ್ಸವದಲ್ಲಿ ತೆಪ್ಪೋತ್ಸವ (Teppotsava) ಕೂಡ ಪ್ರಮುಖ ಆಚರಣೆ. 9 ದಿನಗಳು ನಡೆಯುವ ಉತ್ಸವದಲ್ಲಿ 8ನೇ ದಿನ ತೆಪ್ಪೋತ್ಸವ ನಡೆಸಲಾಗುತ್ತದೆ. ಮೈಸೂರು ಮಹಾರಾಜರು ನೀಡಿದ ರಾಜಮುಡಿ (Rajamudi) ಕಿರೀಟದಿಂದ ಅಲಂಕೃತಕೊಂಡ ಶ್ರೀ ಚೆಲುವ ನಾರಾಯಣಸ್ವಾಮಿಯನ್ನು ತೆಪ್ಪದಲ್ಲಿ ಕೂರಿಸಿ ಕಲ್ಯಾಣಿಯಲ್ಲಿ ವಿಹರಿಸಲಾಗುತ್ತದೆ. ಅಂತಹ ತೆಪ್ಪೋತ್ಸವ ಈ ಬಾರಿ ಹೈಟೆಕ್ ಸ್ಪರ್ಶ ಪಡೆದುಕೊಂಡಿತ್ತು.

Mandya: ರಂಗನತಿಟ್ಟಿನಲ್ಲಿ ಪಕ್ಷಿಗಳ ಜತೆ ಪ್ರವಾಸಿಗರ ಕಲರವ.!
ಸರ್ವಾಲಂಕೃತಗೊಂಡ ತೆಪ್ಪದಲ್ಲಿ ವಿರಾಜಮಾನರಾಗಿ ಕುಳಿತ ಶ್ರೀ  ಚೆಲುವನಾರಾಯಣಸ್ವಾಮಿ ಮೇಲುಕೋಟೆ ಪಂಚಕಲ್ಯಾಣಿಯಲ್ಲಿ ವಿಹರಿಸುತ್ತಿದ್ರೆ. ಚಂಡೆವಾದನ, ಭರತನಾಟ್ಯ, ಯಕ್ಷಗಾನ ಕಲಾವಿದರ ನೃತ್ಯ ನೆರೆದಿದ್ದ ಭಕ್ತರ ಮನಗೆದ್ದಿತ್ತು. ಇನ್ನು ಕಲ್ಯಾಣಿ ಸುತ್ತಲೂ ಅಳವಡಿಸಿದ್ದ ಜಗಮಗಿಸುವ ಲೈಟ್‌ಗಳು, ವೈರಮುಡಿ ಕುರಿತು ಮಾಹಿತಿ ನೀಡುವ ಲೇಸರ್ ಶೋ ಜನರ ಖುಷಿ ಹೆಚ್ಚಿಸಿತು.

Mandya Accident: ಪಿಲ್ಲರ್‌ಗೆ ಡಿಕ್ಕಿ ಹೊಡೆದ ಟಿಪ್ಪರ್‌ಗೆ ಬೆಂಕಿ: ಡ್ರೈವರ್‌ ಸಜೀವ ದಹನ
ಮೊದಲ ಬಾರಿಗೆ ನಡೆದ ಗಂಗಾರತಿ;
ಮೇಲುಕೋಟೆ ತೆಪ್ಪೋತ್ಸವ ಈ ಬಾರಿ ಹಲವು ವೈಶಿಷ್ಟ್ಯಗಳಿಂದ ಕೂಡಿತ್ತು. ಇತಿಹಾಸದಲ್ಲಿ ಮೊದಲ ಬಾರಿಗೆ ಗಂಗಾರತಿ ಮಾಡಲಾಯ್ತು. ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರಗೊಂಡ ಪಂಚ ಕಲ್ಯಾಣಿ ಮೆಟ್ಟಿಲುಗಳ ಮೇಲೆ ನಿಂತಿದ್ದ ಅರ್ಚಕರು ಉತ್ತರ ಭಾರತದ ಗಂಗಾನದಿಯಲ್ಲಿ ನಡೆಸುವ ಗಂಗಾರತಿ ರೀತಿ ಕರ್ಪೂರ, ಧೂಪ ಸೇರಿದಂತೆ ಹಲವು ರೀತಿ ಆರತಿ ಮಾಡಿ ಗಂಗಾ ಮಾತೆಗೆ ನಮಿಸಿದ್ರು. ಗಂಗಾರತಿ ವೇಳೆ ಕೇಳಿ ಬರ್ತಿದ್ದ ಭಕ್ತಿ ಗೀತೆ ಹಾಗೂ ಚಂಡೆ ಮದ್ದಳೆಗಳ‌ ಶಬ್ದ ಸಹಸ್ರಾರು ಭಕ್ತರನ್ನ ರೋಮಾಂಚನ ಗೊಳಿಸಿತು.

click me!