ಚಿರತೆಗೆ ಮತ್ತೊಂದು ಮಗು ಬಲಿ.. ಬಳ್ಳಾರಿ ಜನರಿಗೆ ಪ್ರತಿದಿನ ಆತಂಕ

By Web Desk  |  First Published Dec 25, 2018, 11:05 PM IST

ಬಳ್ಳಾರಿ ನರಹಂತಕ ಚಿರತೆ ಮತ್ತೊಂದು ಮುಗ್ಧ ಜೀವವನ್ನು ಬಲಿ ಪಡೆದಿದೆ. 13 ವರ್ಷದ ಜಯಸುಧಾ ಎಂಬ ಬಾಲಕಿ ಚಿರತೆ ದಾಳಿಗೆ ಪ್ರಾಣ ಕಳೆದುಕೊಂಡಿದ್ದಾಳೆ. ಒಂದೇ ತಿಂಗಳಲ್ಲಿ ಚಿರತೆಗೆ ಎರಡು ಮಕ್ಕಳ ಬಲಿ ಮತ್ತೆ ಚಿರತೆ  ದಾಳಿಯಿಂದ ಕಂಗಾಲದ ಜನರು.. ದೇವಲಾಪುರ, ಸೋಮಲಾಪುರದಲ್ಲಿ ನಿಲ್ಲುತ್ತಿಲ್ಲ ದಾಳಿ .. ಒಂದು ಚರತೆ ಸೆರೆ ಮತ್ತಷ್ಟು ಚಿರತೆಗಳ ಆಗಮನ...


ಬಳ್ಳಾರಿ[ಡಿ.25] ಮೊನ್ನೆ ಮೊನ್ನೆಯಷ್ಟೇ ಚರತೆ ದಾಳಿಗೆ ಮಗು ಸಾವನ್ನಪ್ಪಿರುವ ಘಟನೆ ಮಾಸುವ ಮುನ್ನವೇ ಇದೀಗ ಬಳ್ಳಾರಿಯ ಮತ್ತೊಂದು ಮಗು ಚಿರತೆ ದಾಳಿಗೆ ಬಲಿಯಾಗಿದೆ.  ಹತ್ತು ದಿನ ಗಳ ಕಾಲ ಹಗಲು ರಾತ್ರಿಯೆನ್ನದೇ, ಬೋನಿಟ್ಟು,  ಒಂದು ಚಿರತೆ ಸೆರೆ ಹಿಡಿದು ನೆಮ್ಮದಿ ಯಿಂದ ಅರಣ್ಯ ಇಲಾಖೆಯವರಿಗೆ ಇದೀಗ ಇಂದು ನಡೆದ ಎರಡನೇ ದಾಳಿ ದಿಕ್ಕು ತಪ್ಪುವಂತೆ ಮಾಡಿದೆ.  ತಿಂಗಳಲ್ಲಿ ಅವಳಿ ಗ್ರಾಮದಲ್ಲಿ ಎರಡು ಮಕ್ಕಳನ್ನು ಕಳೆದು ಕೊಂಡ ಕರುಣಾಜನಕ ಕಥೆ ಇದು.

ಈ  ತಿಂಗಳ ಹನ್ನೊಂದನೆ ತಾರೀಖು ಕಂಪ್ಲಿ ತಾಲೂಕಿನ ಸೋಮಲಾಪುರ ಗ್ರಾಮದಲ್ಲಿ ಮನೆಯ ಮುಂದೆ ಆಟವಾಡುತ್ತಿದ್ದ ಮೂರು ವರ್ಷದ  ವೆಂಕಟಸಾಯಿ ಎನ್ನುವ ಮಗುವನ್ನು ಚಿರತೆ  ಹೊತ್ತೈದು ಕೊಂದುಹಾಕಿತ್ತು,  7 ಬೋನ್ ಅಳವಡಿಸಿ ಬರೋಬ್ಬರಿ ಹತ್ತು ದಿನಗಳ ಕಾದ ಬಳಿಕ ಚಿರತೆಯನ್ನು ಸೆರೆಹಿಡಿಯಲಾಗಿತ್ತು. ಅದ್ರೇ, ಆ ಒಂದು ಚಿರತೆ ಹೋಯಿತು ಎನ್ನುವಷ್ಟಲ್ಲಿ  ಇಂದು ಮತ್ತೊಂದು ಚಿರತೆ ಸೋಮಲಾಪುರ ಗ್ರಾಮದ ಪಕ್ಕದ ದೇವಲಾಪುರದ ಹೊಲದಲ್ಲಿ ಹದಿಮೂರು ವರ್ಷದ ಜಯಸುಧಾ ಎನ್ನುವ ಮಗುವನ್ನು ಕೊಂದಿದೆ.

Latest Videos

undefined

ಇದರಿಂದಾಗಿ ಮತ್ತೊಮ್ಮೆ ಅರಣ್ಯ ಇಲಾಖೆ ವಿರುದ್ಧ  ಗ್ರಾಮಸ್ಥರು ಆಕ್ರೋಶ ವ್ಯಕ್ತಪ ಡಿಸಿದ್ದಾರೆ. ಗಣಿಗಾರಿಕೆ ಉತ್ತುಂಗದಲ್ಲಿದ್ದಾಗ ಮಾಯವಾಗಿದ್ದ ಚಿರತೆಗಳು ಇದೀಗ ಗ್ರಾಮದತ್ತ ಮುಖ ಮಾಡುತ್ತಿರುವುದು ಜನರಲ್ಲಿ ಅತಂಕವನ್ನು ಹೆಚ್ಚು ಮಾಡಿದೆ. ಅಲ್ಲದೇ  ದರೋಜಿ ಕರಡಿ ಧಾಮದ ಪಕ್ಕದಲ್ಲಿರುವುದರಿಂದ  ಚಿರತೆ ಚಲನವಲನ ಹೆಚ್ಚಾಗಿದೆ. ಸದ್ಯ ಮಗುವಿನ ಸಾವಿಗೆ ಐದು ಲಕ್ಷ ಪರಿಹಾರ ನೀಡಿರುವ  ಇಲಾಖೆ ಮತ್ತಷ್ಟು ಬೋನ್ ಅಳವಡಿಸಲು ಚಿಂತನೆ ನಡೆಸಿದೆ..

ಬಳ್ಳಾರಿ: ಆಟವಾಡುತ್ತಿದ್ದ ಬಾಲಕನನ್ನು ಮನೆಯವರೆದುರೆ ಹೊತ್ತೊಯ್ದ ಚಿರತೆ

 ಒಂದು ಚಿರತೆಯನ್ನು ಸೆರೆ ಹಿಡಿದಿದ್ದರೂ ಕಳೆದೊಂದು ವಾರದಿಂದ ಮತ್ತೊಂದಿಷ್ಟು ಚಿರತೆಗಳು ನಸುಕಿನ ವೇಳೆ  ನಾಯಿ, ಕೋಳಿ,  ಹೊತ್ತೊಯ್ಯುತ್ತಿದ್ದವು.  ಇದು ಗ್ರಾಮಸ್ಥರಲ್ಲಿ  ಒಂದಷ್ಟು ಅತಂಕವನ್ನು ಹೆಚ್ಚಿಸಿತ್ತು. ಅದ್ರೇ, ಇದೀಗ ಮತ್ತೊಂದು ಮಗು ಬಲಿಯಾಗಿರುವುದರಿಂದ  ಗ್ರಾಮಗಳ ಸುತ್ತ ಬೇಲಿ ಹಾಕಬೇಕು ಮತ್ತು ಚಿರತೆಗಳನ್ನು ದಟ್ಟಾರಣ್ಯಕ್ಕೆ ಬಿಡಬೇಕೆನ್ನುವುದು ಗ್ರಾಮಸ್ಥರ ಆಗ್ರಹವಾಗಿದೆ. 
 
ಎರಡನೇ ಮಗುವಿನ ಬಲಿಯಿಂದಾಗಿ ಸೋಮಲಾಪುರ ಮತ್ತು ದೇವಲಾಪುರ ಸೇರಿದಂತೆ ಕಂಪ್ಲಿ ಮತ್ತು ಸಂಡೂರು  ಭಾಗದ ಜನರಲ್ಲಿ ಮತ್ತಷ್ಟು ಅತಂಕ ಹೆಚ್ಚಾಗಿದೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚತ್ತುಕೊಂಡು ಪರಿಹಾರ ಕ್ರಮ ತೆಗೆದುಕೊಳ್ಳಬೇಕು ಎಂಬುದು ಜನರ ಆಗ್ರಹ.

click me!