ಸರ್ಕಾರಿ ಇಲಾಖೆಗಳಿಂದಲೇ ಎಸ್ಕಾಂಗಳಿಗೆ ₹12240 ಕೋಟಿ ಬಾಕಿ!

By Kannadaprabha News  |  First Published Aug 5, 2023, 1:16 PM IST

ರಾಜ್ಯದಲ್ಲಿ ಎಸ್ಕಾಂಗಳಿಗೆ ವಿದ್ಯುತ್‌ ಬಿಲ್‌ ಬಾಕಿ ಇರುವ ಪೈಕಿ ಸರ್ಕಾರದ ಇಲಾಖೆಗಳೇ ಅತಿ ಹೆಚ್ಚು ಹಣ ಬಾಕಿ ಉಳಿಸಿಕೊಂಡಿದ್ದು, ರಾಜ್ಯದ ನಾಲ್ಕು ಎಸ್ಕಾಂಗಳಿಗೆ ಬರೋಬ್ಬರಿ 12,240 ಕೋಟಿ ರು. ಪಾವತಿ ಮಾಡಬೇಕಾಗಿದೆ.


ಬೆಂಗಳೂರು (ಆ.5) ರಾಜ್ಯದಲ್ಲಿ ಎಸ್ಕಾಂಗಳಿಗೆ ವಿದ್ಯುತ್‌ ಬಿಲ್‌ ಬಾಕಿ ಇರುವ ಪೈಕಿ ಸರ್ಕಾರದ ಇಲಾಖೆಗಳೇ ಅತಿ ಹೆಚ್ಚು ಹಣ ಬಾಕಿ ಉಳಿಸಿಕೊಂಡಿದ್ದು, ರಾಜ್ಯದ ನಾಲ್ಕು ಎಸ್ಕಾಂಗಳಿಗೆ ಬರೋಬ್ಬರಿ 12,240 ಕೋಟಿ ರು. ಪಾವತಿ ಮಾಡಬೇಕಾಗಿದೆ.

ಬೆಸ್ಕಾಂ ಒಂದಕ್ಕೇ ಬರೋಬ್ಬರಿ 5,653 ಕೋಟಿ ರು. ವಿದ್ಯುತ್‌ ಶುಲ್ಕದ ಬಾಕಿ ಪಾವತಿಸಬೇಕಾಗಿದೆ. ಬೆಸ್ಕಾಂ 2022-23ನೇ ಸಾಲಿನ ಹಣಕಾಸು ವರ್ಷದ ಅಂತ್ಯಕ್ಕೆ 5,246.64 ಕೋಟಿ ರು.ಗಳನ್ನು ವಿವಿಧ ಇಲಾಖೆಗಳು ಪಾವತಿ ಬಾಕಿ ಉಳಿಸಿಕೊಂಡಿದ್ದವು. ಪ್ರಸಕ್ತ ಸಾಲಿನ ಜೂ.30ರ ವೇಳೆಗೆ 5,653 ಕೋಟಿ ರು.ಗೆ ಮುಟ್ಟಿದೆ.

Tap to resize

Latest Videos

ಇಷ್ಟುದೊಡ್ಡ ಮೊತ್ತದ ಬಾಕಿಯು ಬೆಸ್ಕಾಂ ಕೆಲಸಕ್ಕೆ ನೇರವಾಗಿ ಅಡ್ಡಿಯಾಗುತ್ತಿಲ್ಲ ಎಂದು ಬೆಸ್ಕಾಂ ಅಧಿಕಾರಿಗಳು ಸಮರ್ಥಿಸಿಕೊಳ್ಳುತ್ತಿದ್ದಾರೆ. ಆದರೂ, ವಿದ್ಯುತ್‌ ಖರೀದಿ ಹಣದ ಸಕಾಲಿಕ ಬಾಕಿ ಪಾವತಿ ಮತ್ತಿತರ ವಿಳಂಬ, ಸಾಲ ಪ್ರಮಾಣದ ಹೆಚ್ಚಳದಿಂದ ಎಸ್ಕಾಂಗಳ ಸಾಲದ ಮೇಲಿನ ಬಡ್ಡಿ ಹೊರೆಯಾಗುತ್ತಿದೆ ಎಂಬುದನ್ನೂ ಒಪ್ಪಿಕೊಳ್ಳುತ್ತಾರೆ.

 

ಕೆಪಿಟಿಸಿಎಲ್‌ ನೌಕರರಿಗೆ ಶೆ.20 ವೇತನ ಹೆಚ್ಚಳ: ಹೋರಾಟಕ್ಕೂ ಮುನ್ನವೇ ಮುಷ್ಕರ ವಾಪಸ್‌

ಬೆಸ್ಕಾಂಗೆ ಬಾಕಿ ಉಳಿಸಿಕೊಂಡಿರುವ ಇಲಾಖೆಗಳ ಪೈಕಿ ಗ್ರಾಮೀಣಾಭಿವೃದ್ಧಿ ಇಲಾಖೆ 4,067 ಕೋಟಿ ರು., ನಗರಾಭಿವೃದ್ಧಿ ಇಲಾಖೆ 129 ಕೋಟಿ ರು., ಬಿಬಿಎಂಪಿ 684 ಕೋಟಿ ರು., ಬೆಂಗಳೂರು ಜಲಮಂಡಳಿ 484 ಕೋಟಿ ರು., ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ 59.51 ಕೋಟಿ ರು., ಜಲಸಂಪನ್ಮೂಲ ಇಲಾಖೆ 44.23 ಕೋಟಿ ರು., ಸಣ್ಣ ನೀರಾವರಿ ಇಲಾಖೆ 7.51 ಕೋಟಿ ರು., ಕೇಂದ್ರ ಇಲಾಖೆ ಕಚೇರಿಗಳಿಂದ 59.90 ಕೋಟಿ ರು., ಇತರೆ ರಾಜ್ಯ ಸರ್ಕಾರಿ ಕಚೇರಿಗಳಿಂದ 107.53 ಕೋಟಿ ರು. ಸೇರಿದಂತೆ ಒಟ್ಟು 5,653 ಕೋಟಿ ರು. ಬಾಕಿ ಇದೆ.

ಇನ್ನು ಹುಬ್ಬಳ್ಳಿ ಮೂಲದ ಹೆಸ್ಕಾಂ ವ್ಯಾಪ್ತಿಯಲ್ಲಿ 3,666 ಕೋಟಿ ರು., ಕಲಬುರಗಿ ವ್ಯಾಪ್ತಿಯ ಜೆಸ್ಕಾಂಗೆ 2,065 ಕೋಟಿ ರು., ಮಂಗಳೂರು ವ್ಯಾಪ್ತಿಯ ಮೆಸ್ಕಾಂಗೆ 400 ಕೋಟಿ ರು., ಹುಕ್ಕೇರಿ ಸೊಸೈಟಿಗೆ 343.36 ಕೋಟಿ ರು. ವಿದ್ಯುತ್‌ ಶುಲ್ಕವನ್ನು ವಿವಿಧ ಇಲಾಖೆಗಳು ಬಾಕಿ ಉಳಿಸಿಕೊಂಡಿವೆ. ಇನ್ನು ಮೈಸೂರು ವ್ಯಾಪ್ತಿಯ ಚಾಮುಂಡೇಶ್ವರಿ (ಚೆಸ್ಕಾಂ) ವಿದ್ಯುತ್‌ ಸರಬರಾಜು ನಿಗಮದ ಅಧಿಕಾರಿಗಳು ಇಲಾಖೆಗಳು ಬಾಕಿ ಉಳಿಸಿಕೊಂಡಿರುವ ಮೊತ್ತದ ಬಗ್ಗೆ ತಿಳಿಸಲು ನಿರಾಕರಿಸಿದರು.

ರಾಜ್ಯದ ಜನತೆಗೆ ವಿದ್ಯುತ್ ಶಾಕ್, ಜುಲೈ 1ರಿಂದ ದರ‌ ಏರಿಕೆ, ಕೆಇಆರ್‌ಸಿ ಒಪ್ಪಿಗೆ

click me!