ಚಾಲಕನ ಬದುಕಿಸಲು ಉಸಿರು ಕೊಟ್ಟ 10 ಮಂದಿಗೆ ಕೊರೋನಾ!

By Kannadaprabha NewsFirst Published Jul 18, 2020, 7:33 AM IST
Highlights

ಚಾಲಕನ ಬದುಕಿಸಲು ಉಸಿರು ಕೊಟ್ಟ10 ಮಂದಿಗೆ ಕೊರೋನಾ| ಆಘಾತ- ಹೃದಯಾಘಾತದಿಂದ ಮೃತಪಟ್ಟಿದ್ದ ಚಾಲಕನಿಗೆ ಪಾಸಿಟಿವ್‌

ಮುಳಗುಂದ(ಜು.18): ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಮೃತಪಟ್ಟಕೊರೋನಾ ಸೋಂಕಿತ ಚಾಲಕನ ಬಾಯಿಗೆ ಬಾಯಿಟ್ಟು ಉಸಿರು ಕೊಟ್ಟವ್ಯಕ್ತಿ ಸೇರಿದಂತೆ 10 ಮಂದಿಗೆ ಕೊರೋನಾ ದೃಢವಾಗಿರುವುದರಿಂದ ಭಯಗೊಂಡಿರುವ ಗದಗ ಜಿಲ್ಲೆಯ ಸೀತಾಲಹರಿ ಗ್ರಾಮದ ಕೆಲ ಕುಟುಂಬಸ್ಥರು ಊರ ತೊರೆದು ಜಮೀನುಗಳಲ್ಲಿ ಜೀವನ ನಡೆಸುತ್ತಿದ್ದಾರೆ.

ರಾಜ್ಯದಲ್ಲಿ ಶೇ.68 ಸೋಂಕಿತರ ಸೋಂಕಿನ ಮೂಲವೇ ಗೊತ್ತಿಲ್ಲ!

ಈಚೇಗೆ ಕೊಪ್ಪಳ ಡಿಪೋದ ಕೆಎಸ್‌ಆರ್‌ಟಿಸಿ ಚಾಲಕನೊಬ್ಬ ಕೆಮ್ಮು, ಶೀತ, ಉಸಿರಾಟದ ತೊಂದರೆ ಹಾಗೂ ಜ್ವರದಿಂದ ಬಳಲುತ್ತಿದ್ದನು. ಬಳಿಕ ಗ್ರಾಮಸ್ಥರು ಗದಗಿನ ಜಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸದಿ ಕೋವಿಡ್‌-19 ಟೆಸ್ಟ್‌ ಮಾಡಿಸಿಕೊಂಡು ವಾಪಸ್‌ ಗ್ರಾಮಕ್ಕೆ ಮರಳಿದ್ದರು. ಆದರೆ, ಕೋವಿಡ್‌ ಟೆಸ್ಟ್‌ ವರದಿ ಬರುವ ಮೊದಲೇ ಆತನಿಗೆ ಹೃದಯಾಘಾತವಾಗಿದ್ದು, ಗ್ರಾಮಸ್ಥರು ಚಾಲಕನ ಬಾಯಿಗೆ ಬಾಯಿಟ್ಟು ಉಸಿರು ಕೊಟ್ಟಿದ್ದಾರೆ. ಕಿರುನಾಲಿಗೆ ಒತ್ತಿ ಹಿಡಿದು ಎದೆಗೆ ಹೊಡೆದು ಬದುಕಿಸಲು ಯತ್ನಿಸಿದ್ದಾರೆ. ಆದರೆ, ಆತ ಸಾವನ್ನಪ್ಪಿದ್ದಾನೆ. ಈ ವೇಳೆ ಹಲವು ಜನರು ಆತನನ್ನು ಮುಟ್ಟಿಮುಟ್ಟಿಕಣ್ಣಿರು ಹಾಕಿದ್ದರು. ಬಳಿಕ ವರದಿಯಲ್ಲಿ ಮೃತ ಚಾಲಕನಿಗೆ ಕೊರೋನಾ ಇರುವುದು ದೃಢಪಟ್ಟಿದ್ದು, ಆತನ ಸಂಪರ್ಕದಲ್ಲಿದ್ದ 10 ಮಂದಿಗೆ ಪಾಸಿಟಿವ್‌ ಬಂದಿದೆ. ಅವನ ಸಾವಿನಿಂದಾಗಿ ಇಡೀ ಗ್ರಾಮಕ್ಕೆ ಗ್ರಾಮವೇ ಸ್ಮಶಾನ ಮೌನ ಆವರಿಸಿದೆ.

'ರಾಜ್ಯದಲ್ಲಿ ಅತಿ ಹೆಚ್ಚು ಟೆಸ್ಟ್‌: WHO ಮಿತಿಗಿಂತ ಹೆಚ್ಚು ಪರೀಕ್ಷೆ!'

ಗ್ರಾಮದ ಕೆಲ ಕುಟುಂಬಗಳ ಸದಸ್ಯರು ಕೆಲ ದಿನಗಳಿಂದ ಮಕ್ಕಳು, ಮುದುಕರು, ದನಕರುಗಳೊಂದಿಗೆ ಹೊಲದಲ್ಲಿ, ರಸ್ತೆ ಪಕ್ಕದ ಬಯಲುಜಾಗದಲ್ಲಿ ತಾತ್ಕಾಲಿಕವಾಗಿ ಟೆಂಟ್‌ ಹಾಕಿಕೊಂಡು ಜೀವನ ನಡೆಸುತ್ತಿದ್ದಾರೆ.

click me!