
ಬೆಂಗಳೂರು(ಜು.18): ಕೊರೋನಾ ನಿಯಂತ್ರಣ ಸಲುವಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಹಗಲು-ಇರುಳು ಕಾರ್ಯಪ್ರವೃತ್ತರಾಗಿದ್ದು ಶುಕ್ರವಾರ ತಡರಾತ್ರಿ ದಢೀರನೇ ಮಲ್ಲೇಶ್ವರದ ಕೆ.ಸಿ.ಜನರಲ್ ಆಸ್ಪತ್ರೆಗೆ ಭೇಟಿ ನೀಡಿ ಪಿಪಿಇ ಕಿಟ್‌ಗಳ ಗುಣಮಟ್ಟ, ಕೊರೋನಾ ಸೋಂಕಿತರ ಆರೈಕೆ, ಶುಚಿತ್ವ, ಸಿಬ್ಬಂದಿಯ ಹಾಜರಾತಿ ಪರಿಶೀಲನೆ ನಡೆಸಿದರು.
"
ಪ್ರತಿಯೊಂದು ವಿಭಾಗದಲ್ಲೂ ಕೆ.ಸಿ.ಜನರಲ್ ಆಸ್ಪತ್ರೆಯ ವೈಫಲ್ಯಗಳನ್ನು ಎಳೆ-ಎಳೆಯಾಗಿ ಪರಿಶೀಲಿಸಿದ ಡಾ. ಕೆ.ಸುಧಾಕರ್ ಅವರಿಗೆ ಆಸ್ಪತ್ರೆಯಲ್ಲಿನ ನಿರ್ವಹಣೆಯ ವೈಫಲ್ಯ ಹಾಗೂ ಅವ್ಯವಸ್ಥೆಗಳನ್ನು ತಾವಾಗಿಯೇ ಬಯಲಿಗೆಳೆದರು.
ಕೊರೋನಾ ಆರ್ಭಟ: 100 ಟಿಟಿ ವಾಹನಗಳು ಆ್ಯಂಬುಲೆನ್ಸಾಗಿ ಪರಿವರ್ತನೆ
ಆಸ್ಪತ್ರೆಯಲ್ಲಿ 35 ಮಂದಿ ವೈದ್ಯಕೀಯ ಸಿಬ್ಬಂದಿಗೆ ಸೋಂಕು ತಗುಲಿದ್ದು, ಇದರಿಂದ ಅನುಮಾನಗೊಂಡ ಡಾ. ಕೆ.ಸುಧಾಕರ್ ಪಿಪಿಇ ಕಿಟ್, ಫೇಸ್‌ಶೀಲ್ಡ್ ಹಾಗೂ ಮಾಸ್ಕ್ ತರಿಸಿ ಪರಿಶೀಲನೆ ನಡೆಸಿದರು. ಈ ವೇಳೆ ಎನ್-95 ಮಾಸ್ಕ್ ಬದಲಿಗೆ ಬೇರೆ ಮಾಸ್ಕ್ ಪೂರೈಸಲಾಗಿತ್ತು.
ಇದಕ್ಕೆ ತೀವ್ರ ಗರಂ ಆದರ ಸುಧಾಕರ್, ಸುರಕ್ಷತಾ ಸಾಮಗ್ರಿ ಗುಣಮಟ್ಟದ್ದು ನೀಡದಿದ್ದರೆ ವೈದ್ಯರಿಗೆ, ಶುಶ್ರೂಷಕರಿಗೆ, ಸಿಬ್ಬಂದಿಗೆ ಕೊರೋನಾ ಸೋಂಕು ತಗುಲದೆ ಇರುತ್ತದೆಯೇ? 95 ಜಿಎಸ್‌ಎಂ ಮಾನದಂಡ ಇರಬೇಕಿದ್ದ ಪಿಪಿಇ ಕಿಟ್‌ನಲ್ಲಿ 65 ಜಿಎಸ್‌ಎಂ ವಸ್ತುಗಳನ್ನು ಪೂರೈಸಲಾಗಿದೆ. ಇದಕ್ಕೆ ಯಾರು ಹೊಣೆ ಎಂದು ನಿವಾಸಿ ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸೂಕ್ತ ಗುಣಮಟ್ಟದ ಪಿಪಿಇ ಕಿಟ್ ಪೂರೈಸಿಲ್ಲ, ಇದಕ್ಕೆ ಯಾರು ಹೊಣೆ ಎಂಬ ಬಗ್ಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ ಬರೆಯಿರಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ