Shivamogga: ಹರ್ಷ ಕುಟುಂಬಕ್ಕೆ ಬಿಜೆಪಿಯಿಂದ 10 ಲಕ್ಷ ನೆರವು

By Kannadaprabha News  |  First Published Feb 24, 2022, 8:26 AM IST

*  ಚೆಕ್‌ ವಿತರಿಸಿದ ಕಟೀಲ್‌
*  ಸಚಿವ ಅಶ್ವತ್ಥನಾರಾಯಣ 10 ಲಕ್ಷ ನೆರವು
*  ಹರ್ಷ ನಿವಾಸಕ್ಕೆ ಕಟೀಲ್‌, ಈಶ್ವರಪ್ಪ, ವಿಜಯೇಂದ್ರ ಭೇಟಿ, ಕುಟುಂಬಸ್ಥರಿಗೆ ಸಾಂತ್ವನ
 


ಬೆಂಗಳೂರು(ಫೆ.24):  ಶಿವಮೊಗ್ಗದಲ್ಲಿ(Shivamogga) ದುಷ್ಕರ್ಮಿಗಳಿಂದ ಹತ್ಯೆಗೀಡಾಗಿರುವ(Murder) ಬಜರಂಗದಳದ ಕಾರ್ಯಕರ್ತ ಹರ್ಷ(Harsha) ಅವರ ಕುಟುಂಬಕ್ಕೆ ಬುಧವಾರವೂ 21 ಲಕ್ಷ ರು. ನೆರವು ಬಂದಿದೆ. ಭಾರತೀಯ ಜನತಾಪಕ್ಷದ(BJP ವತಿಯಿಂದ 10 ಲಕ್ಷ ರು., ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್‌.ಅಶ್ವತ್ಥನಾರಾಯಣ(CN Ashwath Narayan) ಅವರು 10 ಲಕ್ಷ, ವಿಧಾನ ಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ಅವರು ವೈಯಕ್ತಿಕವಾಗಿ 1 ಲಕ್ಷ ನೀಡುವುದಾಗಿ ಘೋಷಿಸಿದ್ದಾರೆ.

ಶಿವಮೊಗ್ಗದಲ್ಲಿ ಹರ್ಷ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌(Nalin Kumar Kateel) ಅವರು ಪಕ್ಷದ ವತಿಯಿಂದ 10 ಲಕ್ಷದ ಚೆಕ್‌ ನೀಡಿದರು. ಇದೇ ವೇಳೆ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ತಮ್ಮ ಫೌಂಡೇಶನ್‌ನಿಂದ 10 ಲಕ್ಷ ರು. ನೀಡಲಾಗುವುದು ಎಂದು ತಿಳಿಸಿದ್ದಾರೆ. ಬುಧವಾರ ಸಂಜೆ ಸಚಿವರು ಹರ್ಷ ಅವರ ತಾಯಿ ಜತೆ ದೂರವಾಣಿ ಮೂಲಕ ಮಾತನಾಡಿ ಸಾಂತ್ವನ ಹೇಳಿದರು. ಘೋಷಿಸಿರುವ ಹಣವನ್ನು ಹರ್ಷನ ತಾಯಿಯವರ ಬ್ಯಾಂಕ್‌ ಖಾತೆಗೆ ನೇರವಾಗಿ ವರ್ಗಾಯಿಸಲಾಗುವುದು ಎಂದು ಪ್ರಕಟಣೆ ಮೂಲಕ ತಿಳಿಸಿದ್ದಾರೆ. ಇನ್ನು ರಾಮನಗರದಲ್ಲಿ ಮಾತನಾಡಿದ ಸಿಪಿವೈ, ಹರ್ಷನ ಕುಟುಂಬಕ್ಕೆ ವೈಯಕ್ತಿಕವಾಗಿ 1 ಲಕ್ಷ ನೆರವು ನೀಡುತ್ತೇನೆ ಎಂದರು.

Tap to resize

Latest Videos

Shivamogga: 'ಹರ್ಷ ಕುಟುಂಬಕ್ಕೆ ನೆರವಾಗಿ' ಅಭಿಯಾನಕ್ಕೆ ಭಾರೀ ಜನ ಸ್ಪಂದನೆ

ಗಣ್ಯರ ಭೇಟಿ: 

ಹರ್ಷ ನಿವಾಸಕ್ಕೆ ಬುಧವಾರ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕಟೀಲ್‌, ಸಚಿವ ಕೆ.ಎಸ್‌.ಈಶ್ವರಪ್ಪ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಭೇಟಿ ನೀಡಿ ಸಾಂತ್ವನ ಹೇಳಿದರು.

ಒಂದೇ ದಿನ 16 ಲಕ್ಷ ನೆರವು: ‘ಹರ್ಷನ ಕುಟುಂಬಕ್ಕೆ ನೆರವಾಗಿ’ ಅಭಿಯಾನಕ್ಕೆ ಜನ ಸ್ಪಂದನೆ

ಶಿವಮೊಗ್ಗ: ಹತ್ಯೆಗೀಡಾದ ಹಿಂದೂಪರ ಕಾರ್ಯಕರ್ತ ಹರ್ಷನ ಕುಟುಂಬಕ್ಕೆ ಹಣಕಾಸು ನೆರವು(Financial Aid) ನೀಡುವ ಅಭಿಯಾನ ಆರಂಭವಾಗಿದ್ದು, ಒಂದೇ ದಿನದಲ್ಲಿ 16 ಲಕ್ಷ ಸಂಗ್ರಹವಾಗಿರುವ ಮಾಹಿತಿ ಸಿಕ್ಕಿದೆ. ಹರ್ಷದ ತಾಯಿ ಪದ್ಮಾ ಅವರ ಇಂಡಿಯನ್‌ ಓವರ್‌ಸೀಸ್‌ನ ಶಿವಮೊಗ್ಗ ಶಾಖೆಯ ಐಎಫ್‌ಎಸ್‌ಸಿ ಕೋಡ್‌ ಸಹಿತ ಉಳಿತಾಯ ಖಾತೆಯ ಸಂಖ್ಯೆ ನೀಡಿ, ಹರ್ಷನ ಕುಟುಂಬಕ್ಕೆ ನಾವು ನೆರವಾಗೋಣ ಎಂಬ ಅಭಿಯಾನದ ಸಂದೇಶ ವಾಟ್ಸಾಪ್‌ ಗ್ರೂಪ್‌ಗಳಲ್ಲಿ ಹರಿದಾಡುತ್ತಿದೆ.

ಇದಕ್ಕೆ ಸಾಕಷ್ಟು ಮಂದಿ ಹಣ(Money) ಹಾಕಿದ್ದು, ಸಂಜೆಯವರೆಗೆ ಸುಮಾರು 16 ಲಕ್ಷ ಸಂಗ್ರಹವಾಗಿದೆ ಎಂದು ಮಾಹಿತಿ ಸಿಕ್ಕಿದೆ. ವಾಸ್ತವವಾಗಿ ಹರ್ಷ ಅವರ ತಾಯಿ ಅವರ ಹೆಸರಿನಲ್ಲಿ ಇದುವರೆಗೆ ಯಾವುದೇ ಬ್ಯಾಂಕ್‌ ಖಾತೆ(Bank Account) ಇರಲಿಲ್ಲ. ಮನೆಯಲ್ಲಿ ಸಂಕಷ್ಟದ ಸ್ಥಿತಿ ಕೂಡ ಇತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿ(BJP) ಯುವ ಮೋರ್ಚಾದ ಕೆಲವು ಯುವಕರು ಮಂಗಳವಾರ ಬೆಳಗ್ಗೆ ಬ್ಯಾಂಕ್‌ನಲ್ಲಿ ಖಾತೆಯೊಂದನ್ನು ತೆರೆದು ಅದನ್ನು ಸಾಮಾಜಿಕ ಜಾಲತಾಣದಲ್ಲಿ(Social Media) ಹರಿಬಿಟ್ಟು ಹರ್ಷ ಕುಟುಂಬಕ್ಕೆ ನೆರವಾಗಿ ಎಂದು ಅಭಿಯಾನವೊಂದನ್ನು ಆರಂಭಿಸಿದ್ದರು. ಇದಕ್ಕೆ ಅತ್ಯುತ್ತಮ ಸ್ಪಂದನೆ ಸಾರ್ವಜನಿಕ ವಲಯದಲ್ಲಿ ಸಿಕ್ಕಿದೆ ಎಂದು ಗೊತ್ತಾಗಿದೆ.

ಮಂಗಳೂರು(Mangaluru): ಶಿವಮೊಗ್ಗದಲ್ಲಿ ಹತ್ಯೆಯಾದ ಹಿಂದೂ ಸಂಘಟನೆಯ ಹರ್ಷ ಅವರ ಕುಟುಂಬಕ್ಕೆ ದೇಣಿಗೆ ಹರಿದು ಬರುತ್ತಿದೆ. ಮಂಗಳೂರು ಉತ್ತರ ಶಾಸಕ ಡಾ. ಭರತ್‌ ಶೆಟ್ಟಿ(Bharath Shetty) ಅವರು ತನ್ನ ತಿಂಗಳ ವೇತನವನ್ನು ಕೊಡುಗೆಯಾಗಿ ನೀಡುತ್ತೇನೆ ಎಂದು ಪ್ರಕಟಿಸಿದ್ದಾರೆ. ಬಂಟ್ವಾಳ ಶಾಸಕ ರಾಜೇಶ್‌ ನಾಯ್ಕ್‌(Rajesh Naik) ಉಳಿಪ್ಪಾಡಿಗುತ್ತು ಅವರು ವೈಯಕ್ತಿಕ ನೆಲೆಯಲ್ಲಿ ಅವರ ಬ್ಯಾಂಕ್‌ ಖಾತೆಯಿಂದ 1 ಲಕ್ಷವನ್ನು ಹರ್ಷ ಅವರ ಕುಟುಂಬದ ಬ್ಯಾಂಕ್‌ ಖಾತೆಗೆ ವರ್ಗಾಯಿಸಿದ್ದಾರೆ. ಇನ್ನು ಮಂಗಳೂರು ದಕ್ಷಿಣ ಕ್ಷೇತ್ರದ ವೇದವ್ಯಾಸ್‌ ಕಾವತ್‌(Vedavyas Kamat) ಅವರು 1 ಲಕ್ಷ ನೀಡುವುದಾಗಿ ಘೋಷಿಸಿದ್ದರು.

Shivamogga Riots: ಮಚ್ಚು, ಲಾಂಗು ಝಳಪಿಸಿದ್ದೇ ಗಲಭೆಗೆ ಕಾರಣ: ವಿಜಯೇಂದ್ರ

ಹರ್ಷ ಅವರ ಮನೆಗೆ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್‌ಪಾಲ್‌ ಸುವರ್ಣ ಅವರು ಭೇಟಿ ನೀಡಿ ತಾಯಿ ಹಾಗೂ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ತಮ್ಮ ವೈಯಕ್ತಿಕ ನೆಲೆಯಲ್ಲಿ 1 ಲಕ್ಷ ಮೊತ್ತದ ಚೆಕ್‌ ನೀಡಿ ಈ ಸಂಕಷ್ಟದ ಸಂದರ್ಭದಲ್ಲಿ ಸಮಸ್ತ ಹಿಂದೂ ಸಮಾಜ ಕುಟುಂಬದ ಜತೆ ನಿಲ್ಲುವ ಭರವಸೆ ನೀಡಿದರು.

ಬೈಂದೂರು ಶಾಸಕ ಸುಕುಮಾರ ಶೆಟ್ಟಿ ಅವರು ಮೃತ ಹರ್ಷ ಅವರ ತಾಯಿಯ ಖಾತೆಗೆ .1 ಲಕ್ಷ ಜಮಾ ಮಾಡಿದ್ದಾರೆ. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್‌.ಜೀವರಾಜ್‌ರಿಂದ .1 ಲಕ್ಷ ನೆರವು ಸಿಕ್ಕಿದೆ. ಸೋಮವಾರ ಶಾಸಕರಾದ ರೇಣುಕಾಚಾರ್ಯ 2 ಲಕ್ಷ, ಅರವಿಂದ ಲಿಂಬಾವಳಿ 1 ಲಕ್ಷ ನೀಡುವುದಾಗಿ ಘೋಷಿಸಿದ್ದರು.
 

click me!