ಯುಗಾದಿ ಹಬ್ಬಕ್ಕೆ ನಮ್ಮ ಮೆಟ್ರೊದಿಂದ ಪ್ರಯಾಣಿಕರಿಗೆ ಬಂಪರ್ ಆಫರ್!

Published : Mar 30, 2022, 11:53 PM IST
ಯುಗಾದಿ ಹಬ್ಬಕ್ಕೆ ನಮ್ಮ ಮೆಟ್ರೊದಿಂದ ಪ್ರಯಾಣಿಕರಿಗೆ ಬಂಪರ್ ಆಫರ್!

ಸಾರಾಂಶ

* ಒಂದು ದಿನದ ಹಾಗೂ ಮೂರು ದಿನದ ಪಾಸ್ ವಿತರಣೆ * ಒಂದು ದಿನದ ಪಾಸ್ ಗೆ 200 ರೂಪಾಯಿ, ಇದರಲ್ಲಿ 50 ರೂಪಾಯಿ ಹಿಂಪಡೆಯುವ ಅವಕಾಶ * ಮೂರು ದಿನದ ಪಾಸ್ ಗೆ 400 ರೂಪಾಯಿ, ಬಿಎಂಆರ್ ಸಿಎಲ್ ಘೋಷಣೆ

ಮಮತಾ ಮರ್ಧಾಳ

ಬೆಂಗಳೂರು (ಮಾ. 30): ಹೊಸ ವರ್ಷ ಯುಗಾದಿ‌ (Ugadi) ಬರಮಾಡಿಕೊಳ್ಳಲು ಜನ ಕಾತರರಾಗಿದ್ದಾರೆ. ಇದರ ಬೆನ್ನಲ್ಲೆ ನಮ್ಮ ಮೆಟ್ರೋ (Namma Metro) ನಿಗಮದಿಂದ ಯುಗಾದಿ ಹಬ್ಬಕ್ಕೆ ಮೆಟ್ರೋ ಪ್ರಯಾಣಿಕರಿಗೆ ಸ್ಪೆಷಲ್ ಆಫರ್ ನೀಡ್ತಿದೆ. ಇದುವರೆಗೂ ತಿಂಗಳ ಪಾಸ್ (Monthly Pass) ಬಳಸಿ ಮೆಟ್ರೋ ರೈಲಲ್ಲಿ ಪ್ರಯಾಣಿಸಲು ಅವಕಾಶ ಇತ್ತು. ಅದರ ಜೊತೆಗೆ ಯುಗಾದಿ ಹಬ್ಬದಿಂದ ದಿನದ ಪಾಸ್ ನೀಡ್ತಿದೆ ಬಿಎಂಆರ್ಸಿಎಲ್ (BMRCL). 

ಪ್ರಯಾಣಿಕರಿಗೆ ಅನುಕೂಲವಾಗುವಂತೆ 1 ಹಾಗೂ 3 ದಿನದ ಪಾಸ್ ಗಳನ್ನು ಪರಿಚಯಿಸುತ್ತಿದೆ. ಒಂದು ದಿನದ ಪಾಸ್ ದರ 200ರೂ ಆಗಿದ್ದು, ಖರೀದಿ ಮಾಡಿದ ದಿನದಂದು ಅನಿಯಮಿತವಾಗಿ ಪ್ರಯಾಣಿಸ್ಬಹುದು. ಹಾಗೂ ಮೂರು ದಿನದ ಪಾಸ್ ದರ 400ರೂ ಆಗಿದ್ದು, ಖರೀದಿ ದಿನದಿಂದ ಮೂರು ದಿನಗಳವರೆಗೆ ಅನಿಯಮಿತವಾಗಿ ಪ್ರಯಾಣಿಸಲು ನಮ್ಮ ಮೆಟ್ರೋ ಅವಕಾಶ ಮಾಡಿಕೊಟ್ಟಿದೆ. ಏಪ್ರಿಲ್ 2ರಿಂದ ಪ್ರಯಾಣಿಕರು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು

Bengaluru: ವೀಕೆಂಡ್‌ನಲ್ಲಿ ಮೆಟ್ರೋ ಸೇವೆಯಲ್ಲಿ ವ್ಯತ್ಯಯ: ಪ್ರಯಾಣಿಕರಿಗೆ ಬೇಸರ

ಒಂದು ದಿನದ ಹಾಗು 3 ದಿನದ ಪಾಸುಗಳು‌ ಮೆಟ್ರೋ ನಿಲ್ದಾಣದ ಟಿಕೆಟ್ ಕೌಂಟರ್ ಗಳಲ್ಲಿ ಲಭ್ಯವಿದ್ದು ಪ್ರಯಾಣಿಕರು ಪಡೆದುಕೊಳ್ಳಬಹುದು. ಇನ್ನು ಪ್ರಯಾಣಿಕರು 1 ಅಥವಾ 3 ದಿನದ ಪ್ರಯಾಣವನ್ನು ಮುಗಿಸಿ ಪಾಸುಗಳನ್ನು ಯಾವುದೇ ಗ್ರಾಹಕ ಸಂಪರ್ಕ ಕೇಂದ್ರದಲ್ಲಿ ಹಿಂತಿರುಗಿಸಿದಲ್ಲಿ  ಪಾಸ್ ಮೊತ್ತದಲ್ಲಿ 50 ರೂ ವಾಪಾಸ್ ಪಡೆಯಲು ಪ್ರಯಾಣಿಕರಿಗೆ ಅವಕಾಶವಿದೆ.

Bengaluru: ಮೆಟ್ರೋ ರೈಲಿನಿಂದ ನಗರದ ಮಾಲಿನ್ಯ ಇಳಿಕೆ!

ಅಧಿಕಾರಿಗಳು ಪ್ರತಿದಿನ 4.5 ಲಕ್ಷ ರೈಡ್‌ಗಳನ್ನು ನಿರೀಕ್ಷೆ ಮಾಡಿದ್ದರು. ಆದರೆ,  ನಮ್ಮ ಮೆಟ್ರೋದ ಪ್ರಯಾಣಿಕರ ಸಂಖ್ಯೆ ಕೋವಿಡ್ ಪೂರ್ವದ ಮಟ್ಟಕ್ಕಿಂತ ತೀರಾ ಕೆಳಗಿರುವ ಕಾರಣದಿಂದ ನೀತಿಯಲ್ಲಿ ಬದಲಾವಣೆ ಬಂದಿದೆ. ಫೆಬ್ರವರಿ 2022 ತಿಂಗಳ ಸರಾಸರಿ ದೈನಂದಿನ ಸವಾರರ ಸಂಖ್ಯೆ 2.97 ಲಕ್ಷ. ಪಾಸ್‌ಗಳು ಹೆಚ್ಚು ಸವಾರರನ್ನು ಆಕರ್ಷಿಸುತ್ತವೆ ಎಂದು ಅಧಿಕಾರಿಗಳು ಭಾವಿಸಿದ್ದಾರೆ. ಹಿಂದಿನ ಅಧಿಕಾರಿಗಳು ದೈನಂದಿನ ಅಥವಾ ಮಾಸಿಕ ಪಾಸ್‌ಗಳ ಕಲ್ಪನೆಯನ್ನು ವಿರೋಧಿಸಿದ್ದರು. 2ನೇ ಹಂತದ ಕಾಮಕಾರಿ ಪೂರ್ಣಗೊಂಡ ನಂತರ ಅಂತಹ ನೀತಿ ನಿರ್ಧಾರಗಳನ್ನು ಮಂಡಳಿಯು ತೆಗೆದುಕೊಳ್ಳಬಹುದು ಎಂದು ಹೇಳಿದ್ದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ
Karnataka News Live: Namratha Gowda ಪ್ರೀತಿಯಲ್ಲಿದ್ದಾರಾ? ಆ ಕಪ್ಪು ಬ್ಯಾಂಡ್‌ ಕೊಟ್ಟ ಸುಳಿವಿನ ಬಗ್ಗೆ Karthik Mahesh ಏನಂದ್ರು?