ಹಲಾಲ್ ಮಾಡಿ ಕತ್ತರಿಸಿದ ಮಾಂಸ ಬಹಿಷ್ಕಾರಿಸಲು ಹಿಂದು ಸಂಘಟನೆಗಳು ಕರೆ ಕೊಟ್ಟಿದೆ. ಈ ವಿಚಾರದ ಬಗ್ಗೆ ಈಗ ಎಲ್ಲೆಡೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಪರ ವಿರೋಧ ಅಭಿಪ್ರಾಯಗಳು ಕೇಳಿ ಬಂದಿದೆ.
ಬೆಂಗಳೂರು (ಮಾ.30): ಹಲಾಲ್ ಮಾಡಿ ಕತ್ತರಿಸಿದ ಮಾಂಸ (Halal Meat) ಬಹಿಷ್ಕಾರಿಸಲು ಹಿಂದು ಸಂಘಟನೆಗಳು ಕರೆ ಕೊಟ್ಟಿದೆ. ಈ ವಿಚಾರದ ಬಗ್ಗೆ ಈಗ ಎಲ್ಲೆಡೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಪರ ವಿರೋಧ ಅಭಿಪ್ರಾಯಗಳು ಕೇಳಿ ಬಂದಿದೆ. ಹಲಾಲ್ ಮಾಂಸ ಬಹಿಷ್ಕಾರದ ಅಭಿಯಾನದ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಎಲ್ಲ ಸಂಘಟನೆಗಳು ಹಲವಾರು ವಿಚಾರದಲ್ಲಿ ಬ್ಯಾನ್ ಮಾಡುತ್ತಲೇ ಇರುತ್ತವೆ. ಆದರೆ ಇದಕ್ಕೆಲ್ಲಾ ಸರ್ಕಾರ ತನ್ನ ನಿಲುವನ್ನು ಹೇಳುತ್ತಾ ಇರಲು ಆಗಲ್ಲ, ಯಾವಾಗ ಏನು ಹೇಳಬೇಕೋ ಆಗ ಹೇಳಲಿದ್ದೇವೆ. ಯಾವಾಗ ನಿಲುವು ವ್ಯಕ್ತಪಡಿಸಬೇಕೋ ಆಗ ವ್ಯಕ್ತಪಡಿಸಲಿದ್ದೇವೆ ಎಂದು ಹೇಳುವ ಮೂಲಕ ತಮ್ಮ ನಿಲವನ್ನು ಸ್ಪಷ್ಟಪಡಿಸಿದ್ದಾರೆ.
ನೋ ರೈಟ್ಸ್ ನೋ ಲೆಫ್ಟ್ ನಮ್ಮದೂ ಯಾವುದು ಇಲ್ಲ: ವಿಧಾನಸೌಧದಲ್ಲಿ ಇಂದು ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ರಾಜ್ಯದಲ್ಲಿ ಹಿಜಾಬ್ ವಿಚಾರ, ಹಲಾಲ್ ವಿವಾದ ಇನ್ನೆತರೆ ಸಂದರ್ಭಗಳಲ್ಲಿ ಕಾನೂನು ವ್ಯವಸ್ಥೆಗೆ ಧಕ್ಕೆಯಾಗದಂತೆ ನೋಡಿಕೊಂಡಿದ್ದೇವೆ ಮುಂದೆಯೂ ಕಾನೂನು ವ್ಯವಸ್ಥೆ ಕಾಪಾಡುತ್ತೇವೆ. ಶಾಂತಿ, ಅಭಿವೃದ್ಧಿ, ಸಾಮಾನ್ಯ ವ್ಯಕ್ತಿಗೆ ಭದ್ರತೆ ನಮ್ಮ ಸರ್ಕಾರದ ಆಧ್ಯತೆಯಾಗಿದೆ ಎಂದರು. ಕೆಲವು ನಿಯಮಗಳು, ಆಚರಣೆಗಳು ಮೊದಲಿಂದಲೂ ಇವೆ, ಅದರಂತೆ ನಡೆದುಕೊಂಡು ಹೋಗ್ತಿದೆ. ಧಾರ್ಮಿಕ ದತ್ತಿ ಕಾಯ್ದೆಯ ನಿಯಮದ ಬಗ್ಗೆ ಗಂಭೀರ ಆಕ್ಷೇಪಗಳು ಎದ್ದಿವೆ. ಅದರ ಬಗ್ಗೆ ಅವಲೋಕನ ಮಾಡ್ತೇವೆ. ನಮ್ಮ ಸರ್ಕಾರ ಅಭಿವೃದ್ಧಿಯತ್ತ ಮಾತ್ರ ಗಮನ ಕೊಡುತ್ತೆ. ನೋ ರೈಟ್ ನೋ ಲೆಫ್ಟ್ ಯಾವುದು ಅಲ್ಲ. ನಾವು ಶಾಂತಿ, ಸಾಮಾನ್ಯ ಜನರ ಭದ್ರತೆ, ಅಭಿವೃದ್ಧಿಗಳಂಥ ಸಿದ್ಧಾಂತಗಳನ್ನು ನಂಬುತ್ತೇವೆ ಎಂದು ತಿಳಿಸಿದರು.
Halal Controversy ಹೊಸತೊಡಕಿನಲ್ಲಿ ಬಳಸಬೇಡಿ, ಹಲಾಲ್ ಮಾಂಸ ಬಹಿಷ್ಕರಿಸಲು ಹಿಂದೂ ಸಂಘಟನೆಗಳ ಕರೆ!
ಬುದ್ಧಿಜೀವಿಗಳಿಂದ ಪತ್ರ ಬರೆದ ವಿಚಾರ: ಶಾಲೆಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಬೇಕು, ಜಾತ್ರಾ ಮಹೋತ್ಸವಗಳಲ್ಲಿ ಮುಸ್ಲಿಂರ ಅಂಗಡಿಗಳಿಗೆ ನಿರ್ಬಂಧ ಹೇರಬಾರದು, ಭಗವದ್ಗೀತೆಯನ್ನ ಪಠ್ಯದಲ್ಲಿ ಸೇರಿಸಬಾರದು ಎಂದು 61 ಸಾಹಿತಿ ಬುದ್ಧಿಜೀವಿಗಳಿಂದ ಸಿಎಂ ಬೊಮ್ಮಾಯಿಗೆ ಪತ್ತ ಬರೆದಿದ್ದರು. ಈ ಪತ್ರದ ಬಗ್ಗೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದು, ಪತ್ರದಲ್ಲಿನ ಅಂಶಗಳನ್ನ ಅಧ್ಯಯನ ಮಾಡಿ ಅವರು ಹೇಳಿರುವುದನ್ನು ಪರಿಗಣಿಸಿ, ವಾಸ್ತವಾಂಶ ಏನಿದೆ ಅಂತ ಪರಿಗಣಿಸುತ್ತೇವೆ. ಅದರ ಆಧಾರದಲ್ಲಿ ಮುಂದಿನ ದಿನಗಳಲ್ಲಿ ಯಾವ ರೀತಿ ಪರಿಸ್ಥಿತಿ ನಿಭಾಯಿಸಬೇಕು ಎಂದು ನಿರ್ಧರಿಸಲಾಗುತ್ತೆ ಎಂದು ಸಿಎಂ ಉತ್ತರಿಸಿದ್ದಾರೆ.
ಹಲಾಲ್ ಮಾಂಸ ಬಹಿಷ್ಕರಿಸಿದ್ರೆ ತಪ್ಪೇನಿದೆ: ಹಿಜಾಬ್ ಹಿಂದೂ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ಬಳಿಕ, ಹಲಾಲ್ ಬಾಯ್ಕಾಟ್ ಅಭಿಯಾನ ರಾಜ್ಯದಲ್ಲಿ ಮುಂಚೂಣಿಗೆ ಬಂದಿದೆ. ಹಲಾಲ್ ಮಾಡಿ ಕತ್ತರಿಸಿರುವ ಕೋಳಿ, ಕುರಿ ಹಾಗೂ ಮೇಕೆ ಮಾಂಸವನ್ನು ಬಹಿಷ್ಕರಿಸಿ ಕೆಲ ಹಿಂದೂ ಪರ ಸಂಘಟನೆಗಳು ‘ಹಲಾಲ್ ಬಾಯ್ಕಾಟ್’ ಅಭಿಯಾನಕ್ಕೆ ಕರೆಕೊಟ್ಟಿವೆ. ಹಿಂದೂಗಳು ಯಾವುದೇ ಕಾರಣಕ್ಕೂ ಮುಸ್ಲಿಂ ವರ್ತಕರ ಮಳಿಗೆಗಳಲ್ಲಿ ಹಲಾಲ್ ಕಟ್ ಮಾಂಸವನ್ನು ಖರೀದಿಸಬಾರದು ಎಂದು ಮನವಿ ಮಾಡಿವೆ. 'ಹಲಾಲ್ ಮಾಂಸ ಬಾಯ್‌ಕಟ್ ಮಾಡಿದ್ರೆ ತಪ್ಪೇನಿದೆ..? ಹಲಾಲ್ ಕಟ್ ಮಾಡುವಾಗ ಪ್ರತಿಯೊಂದು ಕೆಲಸವನ್ನೂ ಮುಸಲ್ಮಾನರೇ ಮಾಡುತ್ತಾರೆ. ಹಿಂದೂಗಳನ್ನು ಹೊರಗಿಡುತ್ತಾರೆ. ಹಾಗಿರುವಾಗ ನಾವು ಹಲಾಲ್‌ನ್ನು ಬಹಿಷ್ಕರಿಸುವುದರಲ್ಲಿ ತಪ್ಪೇನಿದೆ..? ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ (Chakravrthy Sulibele) ಪ್ರಶ್ನಿಸಿದ್ದಾರೆ.
'ಭಗವದ್ಗೀತೆ - ಕುರಾನ್‌ನಲ್ಲಿ ಕೆಟ್ಟ ಸಂಗತಿ ಇದ್ರೆ ಎರಡನ್ನೂ ಅರಬ್ಬೀ ಸಮುದ್ರಕ್ಕೆ ಬಿಸಾಕಿ'
ಹಲಾಲ್ ಕಟ್ ಎಂದರೇನು?: ಪ್ರಾಣಿ, ಪಕ್ಷಿಯನ್ನು ಕೊಲ್ಲುವುದಕ್ಕೂ ಮುನ್ನ ಪಾಲಿಸುವ ನಿಯಮವೇ ಹಲಾಲ್. ಮೊದಲು ಪ್ರಾಣಿಗೆ ನೀರು ಕುಡಿಸಿ, ಬಳಿಕ ಮೆಕ್ಕಾದತ್ತ ಮುಖ ಮಾಡಿ ವಧಿಸಬೇಕು. ತಲೆ ಸಂಪೂರ್ಣ ಕತ್ತರಿಸದೆ ಗಂಟಲು ಸೀಳಿ ಸಾಯಿಸಬೇಕು. ಪ್ರಾಣಿಯ ದೇಹದಿಂದ ರಕ್ತವೆಲ್ಲವೂ ಹೊರಬರಲು ಬಿಡಬೇಕು. ವಧಿಸುವ ವ್ಯಕ್ತಿಯು ಮುಸ್ಲಿಂ ಆಗಿರಬೇಕು ಮತ್ತು ಅಲ್ಲಾನ ನಾಮೋಚ್ಚಾರ ಮಾಡುತ್ತಾ ವಧಿಸಬೇಕು. ವಧಿಸುವ ಮೊದಲೇ ಪ್ರಾಣಿ ಸತ್ತಿರಬಾರದು. ಈ ರೀತಿ ಧರ್ಮಬದ್ಧವಾಗಿ ಸಿದ್ಧಪಡಿಸಿದ್ದು ಹಲಾಲ್ ಮಾಂಸವಾಗಿರುತ್ತದೆ.