2015ರವರೆಗಿನ ಖಾಲಿ ಬೋಧಕ ಹುದ್ದೆಗೆ ಶೀಘ್ರವೇ ನೇಮಕಾತಿ: ಸಚಿವ ಬಿ ಸಿ ನಾಗೇಶ್‌

By Suvarna News  |  First Published Dec 27, 2022, 3:36 PM IST

ರಾಜ್ಯದಲ್ಲಿ 2015ರ ಡಿ.31ರ ಅಂತ್ಯಕ್ಕೆ ಖಾಲಿಯಾಗಿರುವ ಬೋಧಕ ಹುದ್ದೆಗಳನ್ನು ಭರ್ತಿ ಮಾಡುವಂತೆ ಆರ್ಥಿಕ ಇಲಾಖೆ ತಿಳಿಸಿದ್ದು, ಈ ಹುದ್ದೆಗಳ ಭರ್ತಿ ನಂತರ 2016ರ ನಂತರ ಖಾಲಿಯಾಗಿರುವ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಬಿ.ಸಿ. ನಾಗೇಶ್‌ ತಿಳಿಸಿದ್ದಾರೆ. 


ವಿಧಾನ ಪರಿಷತ್‌ (ಡಿ.27): ರಾಜ್ಯದಲ್ಲಿ 2015ರ ಡಿ.31ರ ಅಂತ್ಯಕ್ಕೆ ಖಾಲಿಯಾಗಿರುವ ಬೋಧಕ ಹುದ್ದೆಗಳನ್ನು ಭರ್ತಿ ಮಾಡುವಂತೆ ಆರ್ಥಿಕ ಇಲಾಖೆ ತಿಳಿಸಿದ್ದು, ಈ ಹುದ್ದೆಗಳ ಭರ್ತಿ ನಂತರ 2016ರ ನಂತರ ಖಾಲಿಯಾಗಿರುವ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಬಿ.ಸಿ. ನಾಗೇಶ್‌ ತಿಳಿಸಿದ್ದಾರೆ. ಸೋಮವಾರ ಬಿಜೆಪಿಯ ಶಶೀಲ್‌ ಜಿ. ನಮೋಶಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, 2015ರಿಂದ 2022ರ ಡಿ. 31ರವರೆಗೆ ಬೋಧಕ/ಬೋಧಕೇತರ ವರ್ಗದಲ್ಲಿ ನಿವೃತ್ತಿ, ಮರಣ ಇತ್ಯಾದಿ ಕಾರಣಗಳಿಂದ ಪ್ರೌಢಶಾಲೆಗಳಲ್ಲಿ 6022, ಪದವಿ ಪೂರ್ವ ಕಾಲೇಜುಗಳಲ್ಲಿ 2169 ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆ ಸಹಮತಿ ಕೋರಲಾಗಿತ್ತು. ಆದರೆ ಆರ್ಥಿಕ ಇಲಾಖೆ 2015ರ ಅಂತ್ಯಕ್ಕೆ ಖಾಲಿಯಾಗಿರುವ ಬೋಧಕ ಹುದ್ದೆಗಳ ಭರ್ತಿಗೆ ಆದ್ಯತೆ ನೀಡುವಂತೆ ತಿಳಿಸಿದೆ. ಇದಾದ ನಂತರ 2016ರ ನಂತರ ಖಾಲಿಯಾಗಿರುವ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಶಿಕ್ಷಕರ ನೇಮಕಾತಿ ಅಕ್ರಮ ತಡೆಗೆ ಕ್ರಮ: ರಾಜ್ಯದಲ್ಲಿ 2012-13 ಮತ್ತು 2014-15ನೇ ಸಾಲಿನಲ್ಲಿ ಸಹ ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಈ ರೀತಿ ನಡೆಯದಂತೆ ಹಲವಾರು ಕ್ರಮ ಕೈಗೊಳ್ಳಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ. ನಾಗೇಶ್‌ ತಿಳಿಸಿದ್ದಾರೆ.

Tap to resize

Latest Videos

5, 8ನೇ ಕ್ಲಾಸ್‌ ‘ಪಬ್ಲಿಕ್‌ ಪರೀಕ್ಷೆ’ ಖಾಸಗಿ ಶಾಲೆಗಳಿಗೆ ಚಿಂತೆ..!

ಬಿಜೆಪಿಯ ತುಳಸಿ ಮುನಿರಾಜುಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಪರೀಕ್ಷಾ ತಂತ್ರಾಂಶ ಸಂಸ್ಥೆಗಳ ಬದಲಾಗಿ ಎನ್‌ಐಸಿ/ಎಸ್‌ಡಿಸಿ ಸರ್ಕಾರಿ ಸಂಸ್ಥೆಗಳ ಸಹಕಾರ ಮತ್ತು ಮಾರ್ಗದರ್ಶನಲ್ಲಿ ಅರ್ಜಿ, ಪರೀಕ್ಷೆ, ಮೌಲ್ಯಮಾಪನ, ಆಯ್ಕೆ ಪಟ್ಟಿತಯಾರಿಸಲು ಕ್ರಮ ವಹಿಸಲಾಗಿದೆ. ವಿಷಯ ಪರಿಣಿತರಿಂದ ಒಂದು ವಿಷಯಕ್ಕೆ ನಾಲ್ಕು ವಿಭಿನ್ನ ಪ್ರಶ್ನೆ ಪತ್ರಿಕೆಗಳನ್ನು ತಯಾರಿಸಿ ಅದರಲ್ಲಿ ಎರಡನ್ನು ಮುದ್ರಿಸಿ ಒಂದು ಪತ್ರಿಕೆಯನ್ನು ಬ್ಯಾಂಕ್‌ನಲ್ಲಿ, ಮತ್ತೊಂದು ಪ್ರಶ್ನೆ ಪತ್ರಿಕೆಯನ್ನು ಖಜಾನೆಯಲ್ಲಿ ಇರಿಸಲಾಗುತ್ತದೆ. ಪರೀಕ್ಷೆಯ ದಿನದಂದು ಯಾವ ಪತ್ರಿಕೆಯನ್ನು ವಿತರಿಸಬೇಕೆಂದು ನಿರ್ಧರಿಸಲಾಗುತ್ತದೆ. ಕ್ಯೂ ಆರ್‌ ಕೋಡ್‌ ಹೊಂದಿರುವ ಉತ್ತರ ಪತ್ರಿಕೆಗಳನ್ನು ಎರಡು ಬಾರಿ ಡಿಜಿಟಲ್‌ ಮೌಲ್ಯಮಾಪನಕ್ಕೆ ಒಳಪಡಿಸಲಾಗುತ್ತದೆ ಎಂದರು.

TEACHERS TRANSFER: ಡಿ.28 ರಿಂದ ಫೆ.28ರವರೆಗೆ ಶಿಕ್ಷಕರ ವರ್ಗಾವರ್ಗಿ

ಜಿಲ್ಲಾ ಹಂತದಲ್ಲಿ ಪರೀಕ್ಷಾ ಮೇಲ್ವಿಚಾರಣೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರ ತ್ರಿಸದಸ್ಯ ಸಮಿತಿ ರಚಿಸಲಾಗಿದೆ. ಕ್ಯೂ ಆರ್‌ ಕೋಡ್‌ ಹೊಂದಿರುವ ಉತ್ತರ ಪತ್ರಿಕೆಗಳನ್ನು ಎರಡು ಬಾರಿ ಡಿಜಿಟಲ್‌ ಮೌಲ್ಯಮಾಪನಕ್ಕೆ ಒಳಪಡಿಸಲಾಗುತ್ತದೆ. ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಜಿಲ್ಲಾ ಹಂತದಲ್ಲಿ ಪ್ರಕಟಿಸಿ ಆಕ್ಷೇಪಣೆಗಳನ್ನು ಸ್ವೀಕರಿಸಿ, ಅರ್ಹ ಆಕ್ಷೇಪಣೆಗಳನ್ನು ಪರಿಗಣಿಸಿ ಅಂತಿಮಪಟ್ಟಿ ಪ್ರಕಟಿಸಲಾಗುವುದು ಎಂದು ವಿವರಿಸಿದರು.

click me!