Shivamogga District Court Recruitment 2022: PUC ಪಾಸಾದವರಿಗೆ ಶಿವಮೊಗ್ಗ ಜಿಲ್ಲಾ ಕೋರ್ಟ್​​ನಲ್ಲಿ ವಿವಿಧ​ ಹುದ್ದೆ

By Suvarna News  |  First Published Dec 25, 2021, 8:45 PM IST
  • PUC ಪಾಸಾದವರಿಗೆ ಶಿವಮೊಗ್ಗ ಜಿಲ್ಲಾ ಕೋರ್ಟ್​​ನಲ್ಲಿ ಉದ್ಯೋಗ
  • ಟೈಪಿಸ್ಟ್ , ಸ್ಟೆನೋಗ್ರಾಫರ್ ಸೇರಿ ಒಟ್ಟು 17  ಹುದ್ದೆಗಳು ಖಾಲಿ
  • ಜನವರಿ 30, 2022 ಅರ್ಜಿ ಸಲ್ಲಿಸಲು ಕೊನೆಯ ದಿನ

ಬೆಂಗಳೂರು(ಡಿ.25): ಶಿವಮೊಗ್ಗ ಜಿಲ್ಲಾ ನ್ಯಾಯಾಲಯ (Shimoga District Court ) ಖಾಲಿ ಇರುವ ವಿವಿಧ  ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಟೈಪಿಸ್ಟ್ (Typist)​, ಸ್ಟೆನೋಗ್ರಾಫರ್ (Stenographer) ಸೇರಿ ಒಟ್ಟು 17  ಹುದ್ದೆಗಳು ಖಾಲಿ ಇದ್ದು, PUC ಪಾಸಾಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಡಿಸೆಂಬರ್ 27ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು, ಆಸಕ್ತರು ಆನ್​ಲೈನ್​ (Online) ಮೂಲಕ ಅರ್ಜಿ ಸಲ್ಲಿಸಲು ಕೋರಲಾಗಿದೆ. ಜನವರಿ 30, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ತಾಣ districts.ecourts.gov.in ಗೆ ಭೇಟಿ ನೀಡಲು ಕೋರಲಾಗಿದೆ. ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ ಜನವರಿ31,2022 ಆಗಿದೆ.

ಹುದ್ದೆಯ ಮಾಹಿತಿ ವಿವರ ಇಂತಿದೆ:
ಸ್ಟೆನೋಗ್ರಾಫರ್- 4
ಟೈಪಿಸ್ಟ್​- 9
ಟೈಪಿಸ್ಟ್​_ಕಾಪಿಯಿಸ್ಟ್​-4
ಒಟ್ಟು 17 ಹುದ್ದೆಗಳು

Tap to resize

Latest Videos

undefined

ವಿದ್ಯಾರ್ಹತೆ ಮತ್ತು ವಯೋಮಿತಿ: ಶಿವಮೊಗ್ಗ ಜಿಲ್ಲಾ ನ್ಯಾಯಾಲಯ ನೇಮಕಾತಿಯ ಟೈಪಿಸ್ಟ್​, ಸ್ಟೆನೋಗ್ರಾಫರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಬೋರ್ಡ್​ನಿಂದ ಕಡ್ಡಾಯವಾಗಿ ದ್ವಿತೀಯ ಪಿಯುಸಿ ಪಾಸಾಗಿರಬೇಕು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 18- 35 ವರ್ಷದೊಳಗಿರಬೇಕು. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್​ಸಿ/ಎಸ್​ಟಿ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ.

SSLC EXAMINATION 2022: SSLC ಪರೀಕ್ಷೆ ನೋಂದಣಿ ವಿಸ್ತರಣೆ, ಮೇ ನಲ್ಲಿ ಪರೀಕ್ಷೆ ನಡೆಸಲು ಚಿಂತನೆ

ವೇತನ ಮತ್ತು ಆಯ್ಕೆ ಪ್ರಕ್ರಿಯೆ: ಟೈಪಿಸ್ಟ್​, ಸ್ಟೆನೋಗ್ರಾಫರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಳನ್ನು ಲಿಖಿತ ಪರೀಕ್ಷೆ ಮತ್ತು ಟೈಪಂಗ್ ಟೆಸ್ಟ್ ಮೂಲಕ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಸಾರ ವೇತನ ಇರಲಿದೆ. 
ಸ್ಟೆನೋಗ್ರಾಫರ್- ಮಾಸಿಕ 27,650 ರಿಂದ 52,650ರೂ
ಟೈಪಿಸ್ಟ್​- ಮಾಸಿಕ  21,400 ರಿಂದ 42,000ರೂ
ಟೈಪಿಸ್ಟ್​_ಕಾಪಿಯಿಸ್ಟ್​- ಮಾಸಿಕ 21,400 ರಿಂದ 42,000ರೂ

ಅರ್ಜಿ ಶುಲ್ಕ ಮಾಹಿತಿ:
ಸಾಮಾನ್ಯ, ಒಬಿಸಿ ಅಭ್ಯರ್ಥಿಗಳಿಗೆ- 200 ರೂ. ಅರ್ಜಿ ಶುಲ್ಕ
2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ- 100 ರೂ. ಅರ್ಜಿ ಶುಲ್ಕ
ಎಸ್​ಸಿ/ಎಸ್​ಟಿ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇಲ್ಲ.

IMA RECRUITMENT 2022: 10,12ನೇ ತರಗತಿ ಆದವರಿಗೆ ಭಾರತೀಯ ಮಿಲಿಟರಿ ಅಕಾಡೆಮಿಯಲ್ಲಿ ಉದ್ಯೋಗ, 63 ಸಾವಿರದವರೆಗೂ ವೇತನ

ಶಿವಮೊಗ್ಗದಲ್ಲಿ ಖಾಲಿ ಇರುವ 7 ಪ್ರೊಸೆಸ್ ಸರ್ವರ್ ಹುದ್ದೆಗೆ ಅರ್ಜಿ ಸಲ್ಲಿಸಿ: ಶಿವಮೊಗ್ಗ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಕಚೇರಿ(Shimoga District Court) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 7 ಪ್ರೊಸೆಸ್ ಸರ್ವರ್ (Process Server) ಹುದ್ದೆಗಳು ಖಾಲಿ ಇದ್ದು, SSLC ಪಾಸಾಗಿರುವ ಆಸಕ್ತರು ಆನ್​ಲೈನ್ (Online)​ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಡಿಸೆಂಬರ್ 30 ಕೊನೆಯ ದಿನಾಂಕವಾಗಿದೆ. 

ಹುದ್ದೆಯ ಮಾಹಿತಿ:
ಪ್ರೊಸೆಸ್ ಸರ್ವರ್- 07 ಹುದ್ದೆಗಳು
ಸಾಮಾನ್ಯ-3
ಪರಿಶಿಷ್ಟ ಜಾತಿ(SC)- 1
ಪ್ರವರ್ಗ 2ಎ-1
ಪ್ರವರ್ಗ 2ಬಿ- 1
ಪ್ರವರ್ಗ 3ಬಿ-1

ವಿದ್ಯಾರ್ಹತೆ:ಶಿವಮೊಗ್ಗ ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ ಪ್ರೊಸೆಸ್ ಸರ್ವರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಬೋರ್ಡ್​/ ಶಿಕ್ಷಣ ಸಂಸ್ಥೆಯಿಂದ ಕಡ್ಡಾಯವಾಗಿ SSLC ಪಾಸಾಗಿರಬೇಕು. ಜೊತೆಗೆ ವಾಹನ ಚಾಲನೆಯ ಪರವಾನಗಿ(ಲೈಸೆನ್ಸ್​) ಇರುವವರಿಗೆ ಆದ್ಯತೆ ನೀಡಲಾಗುತ್ತದೆ.

ವಯೋಮಿತಿ:
ಸಾಮಾನ್ಯ ವರ್ಗ- 35 ವರ್ಷ
2ಎ, 2ಬಿ, 3ಎ, 3ಬಿ- 38 ವರ್ಷ
SC/ST-40 ವರ್ಷ
ವಿಧವೆಯರಿಗೆ ಹಾಗೂ ಅಂಗವಿಕಲರಿಗೆ 10 ವರ್ಷಗಳ ಸಡಿಲಿಕೆ ನೀಡಲಾಗಿದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹ 19,950-37,900 ವೇತನ ನೀಡಲಾಗುತ್ತದೆ.

click me!