DHFWS Haveri Recruitment 2022: ವೈದ್ಯರು, ಫಿಸಿಯೋಥೆರಪಿಸ್ಟ್, ಫಿಸಿಷಿಯನ್, ನರ್ಸ್ ಉದ್ಯೋಗಕ್ಕೆ ಹಾವೇರಿಯಲ್ಲಿ ನೇರ ಸಂದರ್ಶನ

By Suvarna News  |  First Published Dec 24, 2021, 10:11 PM IST
  • ಫಿಜಿಷಿಯನ್, ಎಂಬಿಬಿಎಸ್ ವೈದ್ಯರು, ಫಿಸಿಯೋಥೆರಪಿಸ್ಟ್ ಮತ್ತು ಶುಶ್ರೂಷಕರು ಹುದ್ದೆಗಳಿಗೆ ನೇಮಕ
  • ರಾಷ್ಟ್ರೀಯ ಆರೋಗ್ಯ ಅಭಿಯಾನದ ಎನ್‌ಪಿಸಿಡಿಸಿಎಸ್ ಕಾರ್ಯಕ್ರಮದಡಿ ಹಲವು ಹುದ್ದೆಗಳ ನೇಮಕ
  • ಅಗತ್ಯ ದಾಖಲೆಗಳೊಂದಿಗೆ ಡಿ. 28 ರಂದು ನಡೆಯುವ ನೇರ ಸಂದರ್ಶನದಲ್ಲಿ ಭಾಗವಹಿಸಿ
     

ಬೆಂಗಳೂರು(ಡಿ.24): ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (Department of Health and Family Welfare Services) ಹಾವೇರಿ.  ಹಾವೇರಿ (Haveri) ಜಿಲ್ಲೆಯ ರಾಷ್ಟ್ರೀಯ ಆರೋಗ್ಯ ಅಭಿಯಾನದ ಎನ್‌ಪಿಸಿಡಿಸಿಎಸ್ ಕಾರ್ಯಕ್ರಮದಡಿ 9 ಎಂಬಿಬಿಎಸ್ ವೈದ್ಯರು (Doctors), 1 ಫಿಸಿಯೋಥೆರಪಿಸ್ಟ್, 1 ಫಿಸಿಷಿಯನ್ (Physician) ಮತ್ತು 3 ಶುಶ್ರೂಷಕರು (Nurses)ಹುದ್ದೆಗಳನ್ನು ಭರ್ತಿ ಮಾಡಲು ನೇರ ಸಂದರ್ಶನದ ಮೂಲಕ ಆಹ್ವಾನಿಸಲಾಗಿದೆ. ಆಸಕ್ತರು ನೇಮಕಾತಿ ಬಗೆಗೆ ಸಂಪೂರ್ಣ ಮಾಹಿತಿಯನ್ನು ಓದಿಕೊಂಡು ಅಗತ್ಯ ದಾಖಲೆಗಳೊಂದಿಗೆ ಡಿಸೆಂಬರ್ 28,2021ರಂದು ನಡೆಯುವ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್ https://haveri.nic.in/ ಗೆ ಭೇಟಿ ನೀಡಿ ಅಧಿಸೂಚನೆಯನ್ನು ಓದಿಕೊಳ್ಳಲು ಕೋರಲಾಗಿದೆ.

ವಿದ್ಯಾರ್ಹತೆ ವಿವರ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾವೇರಿ ನೇಮಕಾತಿಯ ಹುದ್ದೆಯ ನೇಮಕಾತಿಯಲ್ಲಿ ಭಾಗವಹಿಸುವ  ಫಿಜಿಷಿಯನ್, ಎಂಬಿಬಿಎಸ್ ವೈದ್ಯರು, ಫಿಸಿಯೋಥೆರಪಿಸ್ಟ್ ಮತ್ತು ಶುಶ್ರೂಷಕರು ಹುದ್ದೆಗಳಿಗೆ   ಮಾನ್ಯತೆ ಪಡೆದ ಬೋರ್ಡ್/ಸಂಸ್ಥೆ/ವಿಶ್ವವಿದ್ಯಾಲಯದಿಂದ  ಎಂಬಿಬಿಎಸ್ ಪದವಿ, ಬಿಪಿಟಿ, ಬಿ.ಎಸ್ಸಿ ನರ್ಸಿಂಗ್ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ನೇರ ಸಂದರ್ಶನದಲ್ಲಿ ಭಾಗವಹಿಸಬಹುದು.

Tap to resize

Latest Videos

undefined

ವಯೋಮಿತಿ ವಿವರ: ನೇಮಕಾತಿಯ ಫಿಜಿಷಿಯನ್, ಎಂಬಿಬಿಎಸ್ ವೈದ್ಯರು, ಫಿಸಿಯೋಥೆರಪಿಸ್ಟ್ ಮತ್ತು ಶುಶ್ರೂಷಕರು ಹುದ್ದೆಗಳಿಗೆ ಅನುಸಾರ ಗರಿಷ್ಟ 40 ಮತ್ತು 70 ವರ್ಷ ವಯೋಮಿತಿ ಇರಬೇಕು. ಅಭ್ಯರ್ಥಿಗಳಿಗೆ ನೇಮಕಾತಿ ನಿಯಮಾನುಸಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.

ESIC RECRUITMENT 2022: 11 ಡೀನ್ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನಿಸಿದ ನೌಕರರ ರಾಜ್ಯ ವಿಮಾ ನಿಗಮ

ಆಯ್ಕೆ ಪ್ರಕ್ರಿಯೆ ಮತ್ತು ವೇತನ: ಫಿಜಿಷಿಯನ್, ಎಂಬಿಬಿಎಸ್ ವೈದ್ಯರು, ಫಿಸಿಯೋಥೆರಪಿಸ್ಟ್ ಮತ್ತು ಶುಶ್ರೂಷಕರು ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇರ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ನಿಯಮಾನುಸಾರ ವೇತನವನ್ನು ನೀಡಲಾಗುವುದು.

ಅರ್ಜಿ ಶುಲ್ಕ: ಅಭ್ಯರ್ಥಿಗಳನ್ನು ನೇರ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತಿದ್ದು, ಯಾವುದೇ ಅರ್ಜಿ ಶುಲ್ಕವನ್ನು ಸಲ್ಲಿಸಬೇಕಾಗಿಲ್ಲ.

Davanagere Anganwadi Recruitment 2022: ದಾವಣಗೆರೆಯಲ್ಲಿ 120 ಅಂಗನವಾಡಿ ಹುದ್ದೆಗಳು ಖಾಲಿ

ಸಂದರ್ಶನದ ವಿವರ: ನೇಮಕಾತಿಗಾಗಿ ಡಿಸೆಂಬರ್ 28,2021ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1ರ ವರೆಗೆ ನೇರ ಸಂದರ್ಶನ ನಡೆಸಲಾಗುತ್ತಿದೆ. ಅದೇ ದಿನ ಅರ್ಜಿ ವಿತರಿಸಲಾಗುವುದು ಹಾಗೂ ಅದೇ ದಿನ ಅರ್ಜಿಗಳನ್ನು ಭರ್ತಿ ಮಾಡಿ ಪಡೆದುಕೊಳ್ಳಲಾಗುವುದು. ಆವರಣದಲ್ಲಿ ಅಭ್ಯರ್ಥಿಗಳು ಹಾಜರಿದ್ದು, ಅರ್ಜಿಯನ್ನು ಪಡೆದು ಅರ್ಜಿಯೊಂದಿಗೆ ಮೂಲ ದಾಖಲಾತಿಗಳ ದೃಢೀಕರಿಸಿದ ಝೆರಾಕ್ಸ್ ಪ್ರತಿ ಹಾಗೂ ತಮ್ಮ ಇತ್ತೀಚಿನ ಭಾವಚಿರ ಲಗತ್ತಿಸಲು ಸೂಚಿಸಲಾಗಿದೆ.

ಕಚೇರಿ ವಿಳಾಸ :
ಜಿಲ್ಲಾ ಸರ್ವೇಕ್ಷಣಾ ಘಟಕ,
ಜಿಲ್ಲಾ ಆಸ್ಪತ್ರೆ ಹಾವೇರಿ ಆವರಣ,
ಹಾವೇರಿ.

Upcoming Government Exams 2022: ಉದ್ಯೋಗ ನಿರೀಕ್ಷೆಯಲ್ಲಿರುವವರಿಗೆ 2022ರಲ್ಲಿ ಭರ್ಜರಿ ಸುದ್ದಿ

ಶಿಕ್ಷಕ ಹುದ್ದೆ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ: ಶಿಕ್ಷಕರ ಹುದ್ದೆ ನೇಮಕಾತಿ (Teachers Recruitment) ನಿಯಮಗಳಲ್ಲಿ ರಾಜ್ಯ ಸರ್ಕಾರ ಮಹತ್ವದ ಬದಲಾವಣೆ ಮಾಡಿದೆ. ಇದರಿಂದ ಶಿಕ್ಷಕರ ಹುದ್ದೆ ನಿರೀಕ್ಷೆಯಲ್ಲಿದ್ದವರಿಗೆ ನಿಟ್ಟುಸಿರು ಬಿಟ್ಟಿದ್ದಾರೆ. ಯಾವುದೇ ಪದವಿಯಲ್ಲಿ(Degree) ಯಾವುದೇ ವಿಷಯ ಓದಿದ್ದರೂ, ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸುವ ಕುರಿತಂತೆ ಶಿಕ್ಷಣ ಇಲಾಖೆ (Education Department) ನಿಯಮಾವಳಿಗೆ ತಿದ್ದುಪಡಿ ತಂದಿದೆ. 

ಈ ಮೊದಲು ಆರರಿಂದ ಎಂಟನೇ ತರಗತಿ ಶಿಕ್ಷಕರ ನೇಮಕಾತಿ ಸಂದರ್ಭದಲ್ಲಿ ಬಿಎಸ್ಸಿಯಲ್ಲಿ ಪಿಸಿಎಂ ಮತ್ತು ಬಿಎ ನಲ್ಲಿ ಇಂಗ್ಲಿಷ್ ಐಚ್ಛಿಕವಾಗಿ ಓದಿದವರಿಗೆ ಮಾತ್ರ ನೇಮಕಾತಿಯಲ್ಲಿ ಅವಕಾಶ ನೀಡುತ್ತಿದ್ದ ಕಾರಣ ಬೇರೆ ಪದವಿ ಪಡೆದವರಿಗೆ ಶಿಕ್ಷಕರ ಹುದ್ದೆ ಅವಕಾಶ ಇರಲಿಲ್ಲ. 

ಈಗ ಬಿಎಡ್ 2 ವರ್ಷದ ಕೋರ್ಸ್ ಆದ ನಂತರ ಯಾವುದೇ ಪದವಿಯಲ್ಲಿ ಓದಿದವರಿಗೂ ಬಿಎಡ್ ಮಾಡಲು ಅವಕಾಶ ನೀಡಿದ್ದು, ನೇಮಕಾತಿ ನಿಯಮದಲ್ಲಿ ಎಲ್ಲಾ ಪದವೀಧರರಿಗೆ ಅವಕಾಶ ನೀಡಲಾಗಿದೆ.

click me!