KSMCL Recruitment 2022: ರಾಜ್ಯ ಮಿನೆರಲ್ಸ್​ ಕಾರ್ಪೊರೇಷನ್ ನಲ್ಲಿ ಇಂಜಿನಿಯರಿಂಗ್, ಐಟಿಐ ಆದವರಿಗೆ ಉದ್ಯೋಗವಕಾಶ

Published : Dec 25, 2021, 03:05 PM IST
KSMCL Recruitment 2022: ರಾಜ್ಯ ಮಿನೆರಲ್ಸ್​ ಕಾರ್ಪೊರೇಷನ್ ನಲ್ಲಿ ಇಂಜಿನಿಯರಿಂಗ್, ಐಟಿಐ ಆದವರಿಗೆ ಉದ್ಯೋಗವಕಾಶ

ಸಾರಾಂಶ

KSMCL ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ ಎಂಜಿನಿಯರಿಂಗ್  ಹಾಗೂ ಐಟಿಐ ಆದವರಿಗೆ ಅವಕಾಶ ಜನವರಿ 12 ರಂದು ನಡೆಯುವ ನೇರ ಸಂದರ್ಶನದಲ್ಲಿ ಅಭ್ಯರ್ಥಿಗಳ ಆಯ್ಕೆ

ಬೆಂಗಳೂರು(ಡಿ.25): ಕರ್ನಾಟಕ ರಾಜ್ಯ ಮಿನೆರಲ್ಸ್​ ಕಾರ್ಪೊರೇಷನ್ ಲಿಮಿಟೆಡ್​​(Karnataka State Minerals Corporation Limited-KSMCL) ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ  ಮತ್ತು ಆಸಕ್ತ  ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.  ಇಲಾಖೆಯಲ್ಲಿ ಅಸಿಸ್ಟೆಂಟ್​ ಮ್ಯಾನೇಜರ್ (Assistant Manager), ಎಂಜಿನಿಯರ್ (Engineer), ಮೆಕ್ಯಾನಿಕ್​(Mechanic) ಸೇರಿ ಒಟ್ಟು 9 ಹುದ್ದೆಗಳು ಖಾಲಿ ಇದೆ. ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಅಭ್ಯರ್ಥಿಗಳನ್ನು ನೇರ ಸಂದರ್ಶನದಲ್ಲಿ ಆಯ್ಕೆ ಮಾಡಿಕೊಳ್ಳುತ್ತಿದ್ದು ಎಂಜಿನಿಯರಿಂಗ್ (Engineering) ಹಾಗೂ ಐಟಿಐ (Industrial Training Institutes) ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಅರ್ಜಿ ಸಲ್ಲಿಸಿರುವ ಆಸಕ್ತ  ಅಭ್ಯರ್ಥಿಗಳು ಜನವರಿ 12ರಂದು ನಡೆಯಲಿರುವ ನೇರ ಸಂದರ್ಶನದಲ್ಲಿ (Walk-in-Interview)ಭಾಗವಹಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್​ಸೈಟ್​ ksmc.karnataka.gov.in ಗೆ ಭೇಟಿ ನೀಡಬಹುದು.

9 ಹುದ್ದೆಗಳ ಮಾಹಿತಿ ಈ ಕೆಳಗಿನಂತಿದೆ:
ಅಸಿಸ್ಟೆಂಟ್ ಮ್ಯಾನೇಜರ್-2
ಮೆಕ್ಯಾನಿಕಲ್​ ಎಂಜಿನಿಯರ್-2
ಸಿವಿಲ್ ಎಂಜಿನಿಯರ್-2
ಮೆಕ್ಯಾನಿಕ್(HEMM)- 2
ಬ್ಲಾಸ್ಟರ್-1

ವಿದ್ಯಾರ್ಹತೆಯ ವಿವರ:
ಅಸಿಸ್ಟೆಂಟ್ ಮ್ಯಾನೇಜರ್- ಮೈನಿಂಗ್ ಎಂಜಿನಿಯರಿಂಗ್​
ಮೆಕ್ಯಾನಿಕಲ್​ ಎಂಜಿನಿಯರ್-ಮೆಕ್ಯಾನಿಕಲ್ ಎಂಜಿನಿಯರಿಂಗ್​
ಸಿವಿಲ್ ಎಂಜಿನಿಯರ್-ಸಿವಿಲ್​ ಎಂಜಿನಿಯರಿಂಗ್​
ಮೆಕ್ಯಾನಿಕ್ (HEMM)- ಹೆವ್ವಿ ಮೆಕ್ಯಾನಿಕಲ್​​​ನಲ್ಲಿ ಐಟಿಐ ಸರ್ಟಿಫಿಕೇಟ್​
ಬ್ಲಾಸ್ಟರ್-ಕಾಂಪಿಟೆನ್ಸಿಯಲ್ಲಿ ಬ್ಲಾಸ್ಟರ್​ ಸರ್ಟಿಫಿಕೇಟ್​

Upcoming Government Exams 2022: ಉದ್ಯೋಗ ನಿರೀಕ್ಷೆಯಲ್ಲಿರುವವರಿಗೆ 2022ರಲ್ಲಿ ಭರ್ಜರಿ ಅವಕಾಶ

ಅನುಭವ ಮತ್ತು ವಯೋಮಿತಿ: ಕರ್ನಾಟಕ ರಾಜ್ಯ ಮಿನೆರಲ್ಸ್​ ಕಾರ್ಪೊರೇಷನ್ ಲಿಮಿಟೆಡ್ ನೇಮಕಾತಿಯ ಅಸಿಸ್ಟೆಂಟ್​ ಮ್ಯಾನೇಜರ್, ಎಂಜಿನಿಯರ್, ಮೆಕ್ಯಾನಿಕ್​ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 10 ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿರಬೇಕು. ಅಭ್ಯರ್ಥಿಗಳ ವಯಸ್ಸು 23-45 ವರ್ಷದೊಳಗಿರಬೇಕು.

ಆಯ್ಕೆ ಪ್ರಕ್ರಿಯೆ ಮತ್ತು ವೇತನ: ಕರ್ನಾಟಕ ರಾಜ್ಯ ಮಿನೆರಲ್ಸ್​ ಕಾರ್ಪೊರೇಷನ್ ಲಿಮಿಟೆಡ್ ನೇಮಕಾತಿಯ ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಮೆರಿಟ್ ಲಿಸ್ಟ್​, ಪರ್ಫಾರ್ಮೆನ್ಸ್​ , ಕೆಲಸದ ಅನುಭವ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.  ಅಸಿಸ್ಟೆಂಟ್​ ಮ್ಯಾನೇಜರ್, ಎಂಜಿನಿಯರ್, ಮೆಕ್ಯಾನಿಕ್​ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ  ಹುದ್ದೆಯ ಅನುಸಾರವಾಗಿ ತಿಂಗಳಿಗೆ  20,000 ರಿಂದ 36,000 ರೂ ವರೆಗೆ ವೇತನ ಸಿಗಲಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಉದ್ಯೋಗ ನೀಡಲಾಗುತ್ತದೆ.

Udupi Anganwadi Recruitment 2022: ಉಡುಪಿ ಅಂಗನವಾಡಿ ಹುದ್ದೆಗಳು,ಆಸಿಡ್ ಸಂತ್ರಸ್ತರು

ನೇರ ಸಂದರ್ಶನ ನಡೆಯುವ ಸ್ಥಳ:
ಕಾರ್ಪೋರೇಟ್​ ಕಚೇರಿ
ಟಿಟಿಎಂಸಿ 'A' ಬ್ಲಾಕ್,
5ನೇ ಹಂತ
ಬಿಎಂಟಿಸಿ ಬಿಲ್ಡಿಂಗ್​,
ಕೆಹೆಚ್​​ ರಸ್ತೆ
ಶಾಂತಿನಗರ-560027

ದ್ವಿತೀಯ PUC ಆದವರಿಗೆ ರಾಷ್ಟ್ರೀಯ ತನಿಖಾ ದಳದಲ್ಲಿ ಉದ್ಯೋಗವಕಾಶ: ರಾಷ್ಟ್ರೀಯ ತನಿಖಾ ದಳ (National Investigation Agency) ಖಾಲಿ ಇರುವ ಕಾನ್ಸ್​​ಟೇಬಲ್ (Constable)​ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 28 ಕಾನ್ಸ್​​ಟೇಬಲ್ ​ ಹುದ್ದೆಗಳು ಖಾಲಿ ಇದ್ದು, 12ನೇ ತರಗತಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಆಸಕ್ತರು ಆಫ್​ಲೈನ್ (Offline)​ ಮೂಲಕ ಅರ್ಜಿ ಸಲ್ಲಿಸಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಜನವರಿ 17, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು, ಅಭ್ಯರ್ಥಿಗಳು ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು  www.nia.gov.in ಗೆ ಭೇಟಿ ನೀಡಲು ಕೋರಲಾಗಿದೆ.

ವಯೋಮಿತಿ ವಿವರ: ರಾಷ್ಟ್ರೀಯ ತನಿಖಾ ದಳ ನೇಮಕಾತಿಯ ಕಾನ್ಸ್​ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ  ಅಭ್ಯರ್ಥಿಗಳ ವಯಸ್ಸು ಗರಿಷ್ಠ 56 ವರ್ಷ ಮೀರಿರಬಾರದು.

ಆಯ್ಕೆ ಪ್ರಕ್ರಿಯೆ ಮತ್ತು ವೇತನ ವಿವರ: ರಾಷ್ಟ್ರೀಯ ತನಿಖಾ ದಳ (NIA) ನೇಮಕಾತಿಯ ಕಾನ್ಸ್​ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ದಾಖಲಾತಿ ಪರಿಶೀಲನೆ ಮತ್ತು ವೈಯಕ್ತಿಕ ಸಂದರ್ಶನದ ಮೂಲಕ ಆರಿಸಿಕೊಳ್ಳಲಾಗುತ್ತದೆ ಮತ್ತು ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 21,700 ರಿಂದ 69,100 ರೂ ವೇತನ ನಿಗದಿಯಾಗಿದೆ.

PREV
Read more Articles on
click me!

Recommended Stories

ಮಂಗಳೂರು: 'ಡಿಕೆಶಿ ಮುಂದಿನ ಸಿಎಂ’ ಘೋಷಣೆ ಕೂಗಿದ ಐವನ್, ಮಿಥುನ್‌ಗೆ ನೋಟಿಸ್?
ಸೋಶಿಯಲ್ ಮೀಡಿಯಾದಿಂದ ದೂರವಿದ್ದು 10 ಸರ್ಕಾರಿ ನೌಕರಿ ಪಡೆದು ಸ್ಫೂರ್ತಿಯಾದ ಸಾಧಕ!