2,000 ಹುದ್ದೆಗಳ ನೇಮಕಾತಿಗೆ ಕೆಪಿಎಸ್‌ಸಿ ಸಜ್ಜು

By Kannadaprabha NewsFirst Published Nov 10, 2023, 6:27 AM IST
Highlights

ಪಶು ವೈದ್ಯಾಧಿಕಾರಿಗಳ ಹುದ್ದೆಗಳಿಗೆ ಸಂಬಂಧಿಸಿದಂತೆ ಹೈಕೋರ್ಟ್‌ ತಡೆಯಾಜ್ಞೆ ಕುರಿತು ಇಲಾಖೆಯಿಂದ ಸ್ಪಷ್ಟನೆ ಕೇಳಲಾಗಿದೆ. ಉಳಿದ ಇಲಾಖೆಗಳು ನೀಡಿರುವ ಹುದ್ದೆಗಳ ಪ್ರಸ್ತಾವನೆಗಳಿಗೆ ಅನುಮೋದನೆ, ಪರಿಶೀಲನೆ ಮತ್ತು ಕೆಲವು ಸ್ಪಷ್ಟೀಕರಣ ಕೋರಿ ಪತ್ರ ವ್ಯವಹಾರ ನಡೆದಿದೆ.

ಬೆಂಗಳೂರು(ನ.10): ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 2,000 ಹುದ್ದೆಗಳ ನೇಮಕಾತಿಗೆ ಸರ್ಕಾರದ ವಿವಿಧ ಇಲಾಖೆಗಳಿಂದ ಬಂದಿರುವ/ಬಾಕಿ ಇರುವ ಪ್ರಸ್ತಾವನೆಗಳ ವಿವರವನ್ನು ಕೆಪಿಎಸ್‌ಸಿ ಪ್ರಕಟಿಸಿದೆ.

ಪಶು ವೈದ್ಯಾಧಿಕಾರಿಗಳ 400 ಹುದ್ದೆಗಳು, ಕೃಷಿ ಸಹಾಯಕ ಅಧಿಕಾರಿಗಳ 300 ಹುದ್ದೆಗಳು, ಶಿಕ್ಷಣ ಇಲಾಖೆಯಲ್ಲಿ 140 ಮುಖ್ಯೋಪಾಧ್ಯಾಯರ ಹುದ್ದೆಗಳು, ಜಲ ಸಂಪನ್ಮೂಲ ಇಲಾಖೆಯಲ್ಲಿ 100 ಸಹಾಯಕ ಎಂಜಿನಿಯರ್ ಹುದ್ದೆ, ಬಿಬಿಎಂಪಿ ಸಹಾಯಕ ಎಂಜಿನಿಯರ್‌ಗಳ 100 ಹುದ್ದೆ, ಸಾರಿಗೆ ಇಲಾಖೆ ಮೋಟಾರು ವಾಹನ ನಿರೀಕ್ಷಕರ 76 ಹುದ್ದೆ, ಜಲಸಂಪನ್ಮೂಲ ಇಲಾಖೆಯ ಕಿರಿಯ ಎಂಜಿನಿಯರ್‌ಗಳ 300 ಹುದ್ದೆ, 43 ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳು ಹಾಗೂ ವಿವಿಧ ಇಲಾಖೆಗಳಲ್ಲಿ ಪ್ರಥಮ ದರ್ಜೆ ಸಹಾಯಕ ಮತ್ತು ದ್ವಿತೀಯ ದರ್ಜೆ ಸಹಾಯಕ, ಶೀಘ್ರ ಲಿಪಿಗಾರ, ಬೆರಳಚ್ಚುಗಾರರ ಸುಮಾರು 2 ಸಾವಿರ ಹುದ್ದೆಗಳ ಪ್ರಸ್ತಾವನೆಗಳ ವಿವರಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

10 ನೇ ತರಗತಿಯಾದವರಿಗೆ ಸಂತಸದ ಸುದ್ದಿ, ಕೇಂದ್ರ ಗುಪ್ತಚರ ಇಲಾಖೆಯಲ್ಲಿ ನೇಮಕಾತಿ

ಇಲಾಖೆಗಳು ಪ್ರಸ್ತಾವನೆ ಸಲ್ಲಿಸುವ ಪ್ರಕ್ರಿಯೆಯನ್ನು ಒಂದು ತಿಂಗಳ ಹಿಂದೆ ಆನ್‌ಲೈನ್ ಮಾಡಲಾಗಿದೆ. ಮೊದಲಿನಂತೆ ಕಚೇರಿಗೆ ನೀಡಬೇಕಿಲ್ಲ. ಲಾಗಿನ್ ಆಗುವ ಮೂಲಕ ಪ್ರಸ್ತಾವನೆ ಸಲ್ಲಿಸಬಹುದಾಗಿದೆ. ಈ ಕುರಿತು ಸರ್ಕಾರದ ಎಲ್ಲ ಇಲಾಖೆಗಳಿಗೂ ಪತ್ರ ಬರೆಯಲಾಗಿದೆ. ಹಳೆಯ ಪದ್ಧತಿಯಂತೆ ಪ್ರಸ್ತಾವನೆ ಸಲ್ಲಿಸಿದ ಇಲಾಖೆಗಳಿಗೆ ಆನ್‌ಲೈನ್ ಮೂಲಕ ಸಲ್ಲಿಸುವಂತೆ ಸೂಚಿಸಲಾಗಿದೆ. ಇದರಿಂದ ಸಂಬಂಧಪಟ್ಟ ಇಲಾಖೆ ಮತ್ತು ಕೆಪಿಎಸ್‌ಸಿ ಕೆಲಸ ತ್ವರಿತಿಗತಿಯಲ್ಲಿ ಆಗುತ್ತದೆ ಎಂದು ಕೆಪಿಎಸ್‌ಸಿ ಕಾರ್ಯದರ್ಶಿ ಕೆ.ಎಸ್. ಲತಾ ಕುಮಾರಿ ತಿಳಿಸಿದರು.

ಪಶು ವೈದ್ಯಾಧಿಕಾರಿಗಳ ಹುದ್ದೆಗಳಿಗೆ ಸಂಬಂಧಿಸಿದಂತೆ ಹೈಕೋರ್ಟ್‌ ತಡೆಯಾಜ್ಞೆ ಕುರಿತು ಇಲಾಖೆಯಿಂದ ಸ್ಪಷ್ಟನೆ ಕೇಳಲಾಗಿದೆ. ಉಳಿದ ಇಲಾಖೆಗಳು ನೀಡಿರುವ ಹುದ್ದೆಗಳ ಪ್ರಸ್ತಾವನೆಗಳಿಗೆ ಅನುಮೋದನೆ, ಪರಿಶೀಲನೆ ಮತ್ತು ಕೆಲವು ಸ್ಪಷ್ಟೀಕರಣ ಕೋರಿ ಪತ್ರ ವ್ಯವಹಾರ ನಡೆದಿದೆ.

ಕೆಪಿಎಸ್‌ಸಿ ಪರೀಕ್ಷೆಗೆ ಬಂದ ಸ್ತ್ರೀಯರ ತಾಳಿ, ಕಾಲುಂಗರ ತೆಗೆಸಿದ ಸಿಬ್ಬಂದಿ!

ವಿವಿಧ ಇಲಾಖೆಗಳಲ್ಲಿನ ಖಾಲಿ ಹುದ್ದೆ ವಿವರ ಪ್ರಕಟ: ಯಾವ ಹುದ್ದೆ ಎಷ್ಟು ಭರ್ತಿ?

ಪಶುವೈದ್ಯಾಧಿಕಾರಿ 400
ಕೃಷಿ ಸಹಾಯಕ ಅಧಿಕಾರಿ 300
ಮುಖ್ಯೋಪಾಧ್ಯಾಯರು 140
ಸಹಾಯಕ ಎಂಜಿನಿಯರ್ (ಜಲಸಂಪನ್ಮೂಲ) 100
ಕಿರಿಯ ಇಂಜಿನಿಯರ್ (ಜಲಸಂಪನ್ಮೂಲ) 300
ಸಹಾಯಕ ಎಂಜಿನಿಯರ್ (ಬಿಬಿಎಂಪಿ) 100
ಮೋಟಾರು ವಾಹನ ನಿರೀಕ್ಷಕ 76
ಗೆಜೆಟೆಡ್ ಪ್ರೊಬೆಷನರಿ ಅಧಿಕಾರಿ 43
ಎಫ್‌ಡಿಎ, ಎಸ್‌ಡಿಎ, ಸ್ಟೆನೋ ಹುದ್ದೆಗಳು

click me!