NIMHANS Recruitment 2022: Msc ಆದವರಿಗೆ ಕನ್ನಡ ಸ್ಪಷ್ಟವಾಗಿ ಬರೆಯಲು ಬಂದರೆ ನಿಮ್ಹಾನ್ಸ್​​ನಲ್ಲಿ ಉದ್ಯೋಗ

By Suvarna News  |  First Published Dec 27, 2021, 7:46 PM IST
  • ನಿಮ್ಹಾನ್ಸ್​​ನಲ್ಲಿ ಜೂನಿಯರ್ ರಿಸರ್ಚ್​​ ಫೆಲೋ ಹುದ್ದೆ ಖಾಲಿ
  • ಎಂಎಸ್ಸಿ, ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಗಳಿಗೆ ಅವಕಾಶ
  • ಜನವರಿ 2, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ

ಬೆಂಗಳೂರು(ಡಿ.27): ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ- ಬೆಂಗಳೂರು (National Institute of Mental Health and Neuro Sciences) ಇಲ್ಲಿ ಖಾಲಿ ಇರುವ ಹುದ್ದೆಯನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 1 ಜೂನಿಯರ್ ರಿಸರ್ಚ್​​ ಫೆಲೋ (Junior Research Fellow) ಹುದ್ದೆ ಖಾಲಿ ಇದ್ದು, ಎಂಎಸ್ಸಿ (MSc), ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕೋರಲಾಗಿದೆ. ಡಿಸೆಂಬರ್ 24ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆನ್​ಲೈನ್ (Online)​ ಮೂಲಕ ಅರ್ಜಿ ಸಲ್ಲಿಸಲು. ಜನವರಿ 2, 2022 ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು nimhans.ac.in ಗೆ ಭೇಟಿ ನೀಡಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಶೈಕ್ಷಣಿಕ ವಿದ್ಯಾರ್ಹತೆ: ನಿಮ್ಹಾನ್ಸ್​​ನಲ್ಲಿ ಖಾಲಿ ಇರುವ ಜೂನಿಯರ್ ರಿಸರ್ಚ್​ ಫೆಲೋ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್​ನಿಂದ ಕಡ್ಡಾಯವಾಗಿ ಆಡಿಯಾಲಜಿ ಮತ್ತು ಸ್ಪೀಚ್​ & ಲಾಂಗ್ವೇಜ್​ ಫೆಥಾಲಜಿಯಲ್ಲಿ ಎಂ.ಎಸ್ಸಿ, ಸ್ನಾತಕೋತ್ತರ ಪದವಿ ಪಡೆದಿರಬೇಕು. ಮಾತ್ರವಲ್ಲ ಕನ್ನಡ ಭಾಷೆಯನ್ನು  ಓದಲು ಮತ್ತು ಬರೆಯಲು ಮಾತನಾಡಲು ಬರಬೇಕು.

Tap to resize

Latest Videos

undefined

ಆಯ್ಕೆ ಪ್ರಕ್ರಿಯೆ ಮತ್ತು ವೇತನ: ಜೂನಿಯರ್ ರಿಸರ್ಚ್​ ಫೆಲೋ ಹುದ್ದೆಗೆ  ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾಗುವ ಅಭ್ಯರ್ಥಿಗೆ  ತಿಂಗಳಿಗೆ 31,000ರೂ ವೇತನ ನೀಡಲಾಗುತ್ತದೆ. ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಬೇಕಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ: ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಇ-ಮೇಲ್ ಐಡಿ- pradaud@gmail.com ಗೆ ಜನವರಿ 2, 2022ರೊಳಗೆ ಕಳುಹಿಸಲು ಕೋರಲಾಗಿದೆ.

Indian Military Academy Recruitment 2022: ಇಂಜಿನಿಯರಿಂಗ್ ಪದವೀಧರರಿಗೆ ಭರ್ಜರಿ ಅವಕಾಶ

ವೈದ್ಯರು, ಫಿಸಿಯೋಥೆರಪಿಸ್ಟ್, ಫಿಸಿಷಿಯನ್, ನರ್ಸ್ ಉದ್ಯೋಗಕ್ಕೆ ಹಾವೇರಿಯಲ್ಲಿ ನೇರ ಸಂದರ್ಶನ ಡಿ.28 ಕೊನೆಯ ದಿನ: ಹಾವೇರಿ (Haveri) ಜಿಲ್ಲೆಯ ರಾಷ್ಟ್ರೀಯ ಆರೋಗ್ಯ ಅಭಿಯಾನದ ಎನ್‌ಪಿಸಿಡಿಸಿಎಸ್ ಕಾರ್ಯಕ್ರಮದಡಿ 9 ಎಂಬಿಬಿಎಸ್ ವೈದ್ಯರು (Doctors), 1 ಫಿಸಿಯೋಥೆರಪಿಸ್ಟ್, 1 ಫಿಸಿಷಿಯನ್ (Physician) ಮತ್ತು 3 ಶುಶ್ರೂಷಕರು (Nurses)ಹುದ್ದೆಗಳನ್ನು ಭರ್ತಿ ಮಾಡಲು ನೇರ ಸಂದರ್ಶನದ ಮೂಲಕ ಆಹ್ವಾನಿಸಲಾಗಿದೆ. ಆಸಕ್ತರು ನೇಮಕಾತಿ ಬಗೆಗೆ ಸಂಪೂರ್ಣ ಮಾಹಿತಿಯನ್ನು ಓದಿಕೊಂಡು ಅಗತ್ಯ ದಾಖಲೆಗಳೊಂದಿಗೆ ಡಿಸೆಂಬರ್ 28,2021ರಂದು ನಡೆಯುವ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್ https://haveri.nic.in/ ಗೆ ಭೇಟಿ ನೀಡಿ ಅಧಿಸೂಚನೆಯನ್ನು ಓದಿಕೊಳ್ಳಲು ಕೋರಲಾಗಿದೆ.

ವಿದ್ಯಾರ್ಹತೆ ವಿವರ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾವೇರಿ ನೇಮಕಾತಿಯ ಹುದ್ದೆಯ ನೇಮಕಾತಿಯಲ್ಲಿ ಭಾಗವಹಿಸುವ  ಫಿಜಿಷಿಯನ್, ಎಂಬಿಬಿಎಸ್ ವೈದ್ಯರು, ಫಿಸಿಯೋಥೆರಪಿಸ್ಟ್ ಮತ್ತು ಶುಶ್ರೂಷಕರು ಹುದ್ದೆಗಳಿಗೆ   ಮಾನ್ಯತೆ ಪಡೆದ ಬೋರ್ಡ್/ಸಂಸ್ಥೆ/ವಿಶ್ವವಿದ್ಯಾಲಯದಿಂದ  ಎಂಬಿಬಿಎಸ್ ಪದವಿ, ಬಿಪಿಟಿ, ಬಿ.ಎಸ್ಸಿ ನರ್ಸಿಂಗ್ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ನೇರ ಸಂದರ್ಶನದಲ್ಲಿ ಭಾಗವಹಿಸಬಹುದು.

PARIKSHA PE CHARCHA 2022: ಮೋದಿ ಜತೆ ಮಾತನಾಡ ಬಯಸುವ ವಿದ್ಯಾರ್ಥಿಗಳಿಗೆ ಡಿ.28 ರಿಂದ ನೋಂದಣಿ

ವಯೋಮಿತಿ ವಿವರ: ನೇಮಕಾತಿಯ ಫಿಜಿಷಿಯನ್, ಎಂಬಿಬಿಎಸ್ ವೈದ್ಯರು, ಫಿಸಿಯೋಥೆರಪಿಸ್ಟ್ ಮತ್ತು ಶುಶ್ರೂಷಕರು ಹುದ್ದೆಗಳಿಗೆ ಅನುಸಾರ ಗರಿಷ್ಟ 40 ಮತ್ತು 70 ವರ್ಷ ವಯೋಮಿತಿ ಇರಬೇಕು. ಅಭ್ಯರ್ಥಿಗಳಿಗೆ ನೇಮಕಾತಿ ನಿಯಮಾನುಸಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.

ಸಂದರ್ಶನದ ವಿವರ: ನೇಮಕಾತಿಗಾಗಿ ಡಿಸೆಂಬರ್ 28,2021ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1ರ ವರೆಗೆ ನೇರ ಸಂದರ್ಶನ ನಡೆಸಲಾಗುತ್ತಿದೆ. 

ಕಚೇರಿ ವಿಳಾಸ :
ಜಿಲ್ಲಾ ಸರ್ವೇಕ್ಷಣಾ ಘಟಕ,
ಜಿಲ್ಲಾ ಆಸ್ಪತ್ರೆ ಹಾವೇರಿ ಆವರಣ,
ಹಾವೇರಿ.

click me!