* 727 ಪಿಡಿಒ ಸಹಿತ ಒಟ್ಟು 2,800ಕ್ಕೂ ಅಧಿಕ ಹುದ್ದೆಗಳು ಖಾಲಿ
* ಕುಂಠಿತಗೊಂಡ ಗ್ರಾಮೀಣಾಭಿವೃದ್ಧಿ
* ಖಾಲಿ ಹುದ್ದೆಗಳ ನೇಮಕದ ಬಗ್ಗೆ ಯಾವುದೇ ಚಿಂತನೆ ನಡೆಸಿಲ್ಲ: ಸಚಿವ ಈಶ್ವರಪ್ಪ
ಬಾಲಕೃಷ್ಣ ಜಾಡಬಂಡಿ
ಹುಬ್ಬಳ್ಳಿ(ಡಿ.27): ರಾಜ್ಯದಲ್ಲಿರುವ 5,962 ಗ್ರಾಮ ಪಂಚಾಯಿತಿಗಳಲ್ಲಿ(Gram Panchayat) ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಗ್ರಾಪಂ ಕಾರ್ಯದರ್ಶಿ ಗ್ರೇಡ್-1, 2 ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಸಾವಿರಾರು ಹುದ್ದೆಗಳು(Vacancies) ಖಾಲಿ ಇವೆ. ಒಂದು ಗ್ರಾಮದ ಅಭಿವೃದ್ಧಿಯಲ್ಲಿ ಅಧಿಕಾರಿಗಳ ಪಾತ್ರ ಪ್ರಮುಖವಾಗಿರುತ್ತದೆ. ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಮಹತ್ತರ ಹೊಣೆ ಸ್ಥಳೀಯ ಅಧಿಕಾರಿಗಳದ್ದಾಗಿದೆ. ಪಿಡಿಒ, ಪಂಚಾಯಿತಿ ಕಾರ್ಯದರ್ಶಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗಳು ಗ್ರಾಮೀಣ ಅಭಿವೃದ್ಧಿಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿವೆ. ರಾಜ್ಯದ(Karnataka) ನೂರಾರು ಗ್ರಾಮ ಪಂಚಾಯಿತಿಗಳಲ್ಲಿ ಹುದ್ದೆಗಳು ಖಾಲಿ ಇರುವುದರಿಂದ ಗ್ರಾಮೀಣಾಭಿವೃದ್ಧಿ(Rural Development) ಕುಂಠಿತವಾಗಿದೆ.
ಪಿಡಿಒ 727, ಗ್ರಾಪಂ ಕಾರ್ಯದರ್ಶಿ ಗ್ರೇಡ್ 1,2-1,591, ದ್ವಿತೀಯ ದರ್ಜೆ ಲೆಕ್ಕ ಸಹಾಯಕರ 505 ಸೇರಿ ಒಟ್ಟು 2,800ಕ್ಕೂ ಅಧಿಕ ಹುದ್ದೆಗಳು ಖಾಲಿ ಇವೆ. ರಾಜ್ಯದ 127 ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಎರಡಕ್ಕಿಂತ ಹೆಚ್ಚು ಪಂಚಾಯಿತಿಗಳಲ್ಲಿ ಪ್ರಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
IIIT Bangalore Recruitment 2022: ಬೆಂಗಳೂರಿನ ಐಐಐಟಿಯಲ್ಲಿ Research Associate ಹುದ್ದೆಗೆ ಅರ್ಜಿ ಸಲ್ಲಿಸಿ
ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್-1 ಮತ್ತು ಗ್ರೇಡ್-2 ವೃಂದದ ನೇಮಕಾತಿಗಾಗಿ ಜಿಲ್ಲಾ ಪಂಚಾಯಿತಿಗಳ ಉಪ ಕಾರ್ಯದರ್ಶಿ (ಅಭಿವೃದ್ಧಿ) ನೇತೃತ್ವದಲ್ಲಿ ಪ್ರಾಧಿಕಾರ ರಚಿಸಲಾಗಿದ್ದು, ಅರ್ಹ ನೌಕರರು ಲಭ್ಯವಾದಂತೆ ಜೇಷ್ಠತೆ ಮತ್ತು ಅರ್ಹತೆ ಆಧಾರದ ಮೇಲೆ ಮುಂಬಡ್ತಿ ಮೂಲಕ ಭರ್ತಿ ಮಾಡಲು ಸರ್ಕಾರದಿಂದ ಎಲ್ಲ ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಆದರೆ ಹಲವು ಜಿಲ್ಲೆಗಳಲ್ಲಿ ಈ ಪ್ರಕ್ರಿಯೆ ನಡೆಯುತ್ತಿಲ್ಲ ಎಂಬ ಆರೋಪವು ಕೇಳಿ ಬರುತ್ತಿದೆ.
ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್-2 ವೃಂದದ 343 ಹುದ್ದೆಗಳಿಗೆ (80 ಕಲ್ಯಾಣ ಕರ್ನಾಟಕ (ಕಕ), 263 ಕಕ ಹೊರತುಪಡಿಸಿ) ನೇರ ನೇಮಕಾತಿ ಮಾಡಿಕೊಳ್ಳಲು ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕರ 158 ಹುದ್ದೆಗಳನ್ನು (ಕಲ್ಯಾಣ ಕರ್ನಾಟಕ 55, ಕಕ ಹೊರತುಪಡಿಸಿ 103) ನೇರ ನೇಮಕಾತಿ ಮಾಡಲು ಇಲಾಖೆ ಉದ್ದೇಸಿಸಿದ್ದು, ಅದು ಶೀಘ್ರ ಕಾರ್ಯರೂಪಕ್ಕೆ ಬರಬೇಕಾಗಿದೆ.
Wipro Recruitment 2022: ಎಂಜಿನಿಯರಿಂಗ್ ಅಭ್ಯರ್ಥಿಗಳಿಗೆ ವಿಪ್ರೋ ಭರ್ಜರಿ ಆಫರ್, ಹೊಸಬರಿಗೆ ಮಾತ್ರ ಅವಕಾಶ
ಪಿಡಿಒ, ಎಫ್‌ಡಿಎ ಪರೀಕ್ಷೆಗಾಗಿ ಪದವಿ, ಸ್ನಾತಕೋತ್ತರ ಪದವಿ ಪಡೆದ ಸಾಕಷ್ಟು ಅಭ್ಯರ್ಥಿಗಳು(Candidates) ಅನೇಕ ವರ್ಷಗಳಿಂದ ಸಿದ್ಧತೆ ನಡೆಸಿದ್ದು, ನೇಮಕಾತಿ(Recruitment) ಪ್ರಕ್ರಿಯೆ ಆರಂಭವಾಗುವುದನ್ನೇ ಕಾಯುತ್ತಿದ್ದಾರೆ.
ಸದ್ಯಕ್ಕೆ ಇಲಾಖೆಯಲ್ಲಿರುವ ಖಾಲಿ ಹುದ್ದೆಗಳ ನೇಮಕದ ಬಗ್ಗೆ ಯಾವುದೇ ಚಿಂತನೆ ನಡೆಸಿಲ್ಲ. ಮುಂದಿನ ದಿನಗಳಲ್ಲಿ ಈ ಕುರಿತು ಯೋಚಿಸಲಾಗುವುದು ಅಂತ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.
ಬಡ್ತಿಗಳ ಮೂಲಕ ನೇಮಿಸಬಹುದಾದ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವಂತೆ ಈಗಾಗಲೇ ಎಲ್ಲ ಜಿಲ್ಲಾ ಪಂಚಾಯಿತಿಗಳ ಸಿಇಒಗಳಿಗೆ ನಿರ್ದೇಶಿಸಲಾಗಿದೆ. ಪಿಡಿಒ ನೇಮಕಾತಿ ಪ್ರಕ್ರಿಯೆ ವಿಳಂಬವಾಗಲಿದೆ ಅಂತ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಕೆ. ಅತೀಕ್ ಹೇಳಿದ್ದಾರೆ.
ಜಿಲ್ಲೆಗಳು ಖಾಲಿ ಇರುವ ಪಿಡಿಒಗಳ ಸಂಖ್ಯೆ
ಬಾಗಲಕೋಟೆ 5
ಬೆಳಗಾವಿ 32
ಬಳ್ಳಾರಿ 53
ಬೆಂಗಳೂರು ಗ್ರಾಮಾಂತರ 4
ಬೆಂಗಳೂರು ನಗರ 0
ಬೀದರ್ 32
ಚಾಮರಾಜನಗರ 27
ಚಿಕ್ಕಬಳ್ಳಾಪುರ 15
ಚಿಕ್ಕಮಗಳೂರು 27
ಚಿತ್ರದುರ್ಗ 3
ದಕ್ಷಿಣ ಕನ್ನಡ 30
ದಾವಣಗೆರೆ 45
ಧಾರವಾಡ 18
ಗದಗ 24
ಹಾಸನ 11
ಹಾವೇರಿ 38
ಕಲಬುರಗಿ 67
ಕೊಡಗು 24
ಕೋಲಾರ 23
ಕೊಪ್ಪಳ 17
ಮಂಡ್ಯ 14
ಮೈಸೂರು 11
ರಾಯಚೂರು 34
ರಾಮನಗರ 3
ಶಿವಮೊಗ್ಗ 31
ತುಮಕೂರು 51
ಉಡುಪಿ 17
ಉತ್ತರ ಕನ್ನಡ 48
ವಿಜಯಪುರ 5
ಯಾದಗಿರಿ 18
ಒಟ್ಟು 727