Hatti Gold Mines Recruitment 2022: ಹಟ್ಟಿ ಚಿನ್ನದ ಗಣಿಯಲ್ಲಿ 1 ಲಕ್ಷಕ್ಕೂ ಅಧಿಕ ವೇತನದ ಉದ್ಯೋಗ, ಇಂದೇ ಅರ್ಜಿ ಸಲ್ಲಿಸಿ

By Suvarna News  |  First Published Dec 26, 2021, 5:14 PM IST
  • ಖಾಲಿ ಇರುವ ಹುದ್ದೆಗಳ ಭರ್ತಿಗೆ ರಾಯಚೂರಿನ ಹಟ್ಟಿ ಗೋಲ್ಡ್ ಕಂಪೆನಿ
  • ಅಭ್ಯರ್ಥಿಗಳು ಆಫ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಸೂಚನೆ
  • ಜನವರಿ 21 ಅರ್ಜಿ ಸಲ್ಲಿಸಲು ಕೊನೆಯ ದಿನ

ರಾಯಚೂರು(ಡಿ.26): ರಾಯಚೂರಿನ (Raichur) ಹಟ್ಟಿ ಗೋಲ್ಡ್​ ಮೈನ್ಸ್​ ಕಂಪನಿ ಲಿಮಿಟೆಡ್ (Hutti Gold Mines Company Limited) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ  ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಮ್ಯಾನೇಜರ್ (Manager), ಡಿಜಿಎಂ, ಜನರಲ್ ಮ್ಯಾನೇಜರ್ (General Manager) ಹೀಗೆ ಒಟ್ಟು 4 ಹುದ್ದೆಗಳು ಖಾಲಿ ಇದ್ದು, ಬಿಇ, ಪಿಎಚ್​.ಡಿ. ಸ್ನಾತಕೋತ್ತರ ಪದವಿ ಪಡೆದಿರುವ ಅಭ್ಯರ್ಥಿಗಳು ಅರ್ಜಿ (Application) ಸಲ್ಲಿಸಬಹುದು. ಅಭ್ಯರ್ಥಿಗಳು ಆಫ್​ಲೈನ್ (Offline)​ ಮೂಲಕ ಅರ್ಜಿ ಸಲ್ಲಿಸಲು ಜನವರಿ 21, 2022 ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಕಂಪೆನಿಯ https://huttigold.karnataka.gov.in/ ಗೆ ಭೇಟಿ ನೀಡಿ ವಿವರಣೆ ಪಡೆದುಕೊಳ್ಳಬಹುದು.

ಜನರಲ್ ಮ್ಯಾನೇಜರ್- 1, ಡೆಪ್ಯುಟಿ ಜನರಲ್ ಮ್ಯಾನೇಜರ್-1, ಸೀನಿಯರ್ ಮ್ಯಾನೇಜರ್ -1, ಮ್ಯಾನೇಜರ್ -1 ಹೀಗೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ರಾಯಚೂರಿನ ಹಟ್ಟಿ ಗೋಲ್ಡ್​ ಮೈನ್ಸ್​ ಕಂಪನಿ ಲಿಮಿಟೆಡ್ ಅಧಿಸೂಚನೆ ಹೊರಡಿಸಿದೆ.

Tap to resize

Latest Videos

ಶೈಕ್ಷಣಿಕ ವಿದ್ಯಾರ್ಹತೆ:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಜನರಲ್ ಮ್ಯಾನೇಜರ್- ಮೈನಿಂಗ್​ ವಿಭಾಗದಲ್ಲಿ ಎಂಜಿನಿಯರಿಂಗ್ (BE) ಪೂರ್ಣಗೊಳಿಸಿರಬೇಕು.
ಡೆಪ್ಯುಟಿ ಜನರಲ್ ಮ್ಯಾನೇಜರ್, ಸೀನಿಯರ್ ಮ್ಯಾನೇಜರ್ - BE, ಎಂಎಸ್ಸಿ, ಪಿಎಚ್​​ಡಿ, ಸ್ನಾತಕೋತ್ತರ ಪದವಿ, ಎಂಬಿಎ ಮಾಡಿರಬೇಕು.
ಮ್ಯಾನೇಜರ್ - ಮಿನರಲ್​ ಡ್ರೆಸ್ಸಿಂಗ್​ ವಿಭಾಗದಲ್ಲಿ ಸ್ನಾತಕೋತ್ತರ ಪದವಿ, ಕೆಮಿಕಲ್ ಎಂಜಿನಿಯರಿಂಗ್​ ಓದಿರಬೇಕು.

UPSC RECRUITMENT 2022: ಖಾಲಿ ಇರುವ 187 ಹುದ್ದೆಗಳ ನೇಮಕಕ್ಕೆ ಯುಪಿಎಸ್‌ಸಿ ಅರ್ಜಿ ಆಹ್ವಾನ

ಅಭ್ಯರ್ಥಿಗಳ ಅನುಭವ:
ಜನರಲ್ ಮ್ಯಾನೇಜರ್- ಅಭ್ಯರ್ಥಿಯು ಕನಿಷ್ಠ 20 ವರ್ಷಗಳ ಅನುಭವ ಹೊಂದಿರಬೇಕು.
ಡೆಪ್ಯುಟಿ ಜನರಲ್ ಮ್ಯಾನೇಜರ್- ಕನಿಷ್ಠ 17 ವರ್ಷಗಳ ಅನುಭವ ಹೊಂದಿರಬೇಕು.
ಸೀನಿಯರ್ ಮ್ಯಾನೇಜರ್ - ಕನಿಷ್ಠ 15 ವರ್ಷಗಳ ಅನುಭವ ಹೊಂದಿರಬೇಕು.
ಮ್ಯಾನೇಜರ್ - ಕನಿಷ್ಠ 12 ವರ್ಷಗಳ ಅನುಭವ ಹೊಂದಿರಬೇಕು.

CSIR - UGC NET EXAM: ಜೂನ್ 2021ರ NET ಪರೀಕ್ಷೆಗೆ ಅರ್ಜಿ ಸಲ್ಲಿಸಲು ಜ.2 ಕೊನೆಯ ದಿನ

ಅಭ್ಯರ್ಥಿಗಳ ವಯೋಮಿತಿ:
ಜನರಲ್ ಮ್ಯಾನೇಜರ್- ಗರಿಷ್ಠ 50 ವರ್ಷ
ಡೆಪ್ಯುಟಿ ಜನರಲ್ ಮ್ಯಾನೇಜರ್- ಗರಿಷ್ಠ 50 ವರ್ಷ
ಸೀನಿಯರ್ ಮ್ಯಾನೇಜರ್ - ಗರಿಷ್ಠ 45 ವರ್ಷ
ಮ್ಯಾನೇಜರ್ - ಗರಿಷ್ಠ 45-50 ವರ್ಷ

ಅರ್ಜಿ ಶುಲ್ಕ ಮತ್ತು ಆಯ್ಕೆ ಪ್ರಕ್ರಿಯೆ: ಜನರಲ್ ಮ್ಯಾನೇಜರ್, ಡೆಪ್ಯುಟಿ ಜನರಲ್ ಮ್ಯಾನೇಜರ್, ಸೀನಿಯರ್ ಮ್ಯಾನೇಜರ್, ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 300 ರೂ. ಅರ್ಜಿ ಶುಲ್ಕ ಪಾವತಿಸಬೇಕು. ಡಿಡಿ ಮೂಲಕ ಅಭ್ಯರ್ಥಿಗಳು ಶುಲ್ಕ ಪಾವತಿ ಮಾಡಬೇಕಿದೆ. ಮೆರಿಟ್ ಲಿಸ್ಟ್​ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.

ವೇತನ ವಿವರ:
ಜನರಲ್ ಮ್ಯಾನೇಜರ್- ಮಾಸಿಕ ₹ 1,06,400-1,43,700
ಡೆಪ್ಯುಟಿ ಜನರಲ್ ಮ್ಯಾನೇಜರ್- ಮಾಸಿಕ ₹ 96,400-1,37,500
ಸೀನಿಯರ್ ಮ್ಯಾನೇಜರ್ - ಮಾಸಿಕ ₹ 81,300-1,28,200
ಮ್ಯಾನೇಜರ್ - ಮಾಸಿಕ ₹ 70,150-1,19,800

ಅರ್ಜಿ ಸಲ್ಲಿಸುವ ವಿಳಾಸ ಮತ್ತು ವಿಧಾನ: ಅಭ್ಯರ್ಥಿಗಳು  ಅರ್ಜಿಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಈ ಕೆಳಗಂಡ ವಿಳಾಸಕ್ಕೆ ಕಳುಹಿಸಿ
I/c ಎಕ್ಸಿಕ್ಯೂಟಿವ್ ಡೈರೆಕ್ಟರ್
ಹಟ್ಟಿ ಗೋಲ್ಡ್​ ಮೈನ್ಸ್​ ಕಂಪನಿ ಲಿಮಿಟೆಡ್​
PO ಹಟ್ಟಿ- 584115
ರಾಯಚೂರು ಜಿಲ್ಲೆ
ಕರ್ನಾಟಕ

SSLC Examination 2022: SSLC ಪರೀಕ್ಷೆ ನೋಂದಣಿ ವಿಸ್ತರಣೆ, ಮೇ ನಲ್ಲಿ ಪರೀಕ್ಷೆ ನಡೆಸಲು ಚಿಂತನೆ

click me!