ಚಿಕ್ಕಬಳ್ಳಾಪುರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ 13 ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನ

By Suvarna NewsFirst Published Dec 25, 2021, 9:47 PM IST
Highlights
  • 13 ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ DHFWS  ಚಿಕ್ಕಬಳ್ಳಾಪುರ
  • ಡಿಪ್ಲೋಮಾ, ಐಟಿಐ ಪಾಸಾಗಿರುವವರಿಗೆ ಅವಕಾಶ
  • ಅರ್ಜಿ ಸಲ್ಲಿಸಲು ಡಿಸೆಂಬರ್ 27 ಕೊನೆಯ ದಿನಾಂಕ

ಚಿಕ್ಕಬಳ್ಳಾಪುರ(ಡಿ.25): ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ ಚಿಕ್ಕಬಳ್ಳಾಪುರ (District Health and Family Welfare Society Chikkaballapur -DHFWS) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.  ಈ ಬಗ್ಗೆ ಅಧಿಕೃತ ವೆಬ್ ತಾಣದಲ್ಲಿ   ವೈದ್ಯಕೀಯ ಆಮ್ಲಜನಕ ವ್ಯವಸ್ಥೆಯ ನಿರ್ವಹಣೆ ಮಾಡಲು ಟೆಕ್ನಿಷಿಯನ್ ಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡುವ ಬಗ್ಗೆ ಅಧಿಸೂಚನೆ ಪ್ರಕಟಗೊಂಡಿದೆ. ಒಟ್ಟು 13 ಟೆಕ್ನಿಷಿಯನ್  (Technician) ಹುದ್ದೆಗೆ ಖಾಲಿ ಇದ್ದು, ಅರ್ಜಿ ಸಲ್ಲಿಸಲು ಆಸಕ್ತಿ ಇರುವ ಅರ್ಹ ವ್ಯಕ್ತಿಗಳು ಡಿಪ್ಲೋಮಾ, ಐಟಿಐ ಪಾಸಾಗಿರಬೇಕು. ಆಸಕ್ತರು ಆನ್​ಲೈನ್ (Online)​ ಮೂಲಕ ಅರ್ಜಿ ಸಲ್ಲಿಸಲು ಡಿಸೆಂಬರ್ 27 ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ ಗೆ ಭೇಟಿ ನೀಡಬಹುದು.

ವಿದ್ಯಾರ್ಹತೆ ಮತ್ತು ಅನುಭವ:ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್​ನಿಂದ ಕಡ್ಡಾಯವಾಗಿ ಬಯೋ ಮೆಡಿಕಲ್/ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್​/ಇನ್​ಸ್ಟ್ರುಮೆಂಟೇಶನ್/ಮೆಕ್ಯಾನಿಕಲ್ ವಿಭಾಗದಲ್ಲಿ ಡಿಪ್ಲೋಮಾ/ ಐಟಿಐ ಪಾಸಾಗಿರಬೇಕು. ಯಾವುದಾದರೂ ಆಸ್ಪತ್ರೆಯಲ್ಲಿ ಕನಿಷ್ಠ 2 ವರ್ಷ ಕೆಲಸ ಮಾಡಿದ ಅನುಭವ ಇರಬೇಕು. ಅಥವಾ ಮೆಡಿಕಲ್​ ಎಕ್ವಿಪ್​ಮೆಂಟ್ಸ್​/ಮೆಡಿಕಲ್​ ಆಕ್ಸಿಜನ್​​ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿರಬೇಕು.

ಆಯ್ಕೆ ಪ್ರಕ್ರಿಯೆ, ವೇತನ ಮತ್ತು ಅರ್ಜಿಶುಲ್ಕ ವಿವರ: ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳನ್ನು ಮೆರಿಟ್​ ಲಿಸ್ಟ್​ ಆಧಾರದಲ್ಲಿ ಮತ್ತು ವೈಯಕ್ತಿಕ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 15,000 ರೂ ವೇತನ ನೀಡಲಾಗುತ್ತದೆ. ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ.

SHIVAMOGGA DISTRICT COURT RECRUITMENT 2022: PUC ಪಾಸಾದವರಿಗೆ ಶಿವಮೊಗ್ಗ ಜಿಲ್ಲಾ ಕೋರ್ಟ್​​ನಲ್ಲಿ ವಿವಿಧ​ ಹುದ್ದೆ

ಶಿವಮೊಗ್ಗದಲ್ಲಿ ಖಾಲಿ ಇರುವ 7 ಪ್ರೊಸೆಸ್ ಸರ್ವರ್ ಹುದ್ದೆಗೆ ಅರ್ಜಿ ಸಲ್ಲಿಸಿ: ಶಿವಮೊಗ್ಗ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಕಚೇರಿ (Shimoga District Court) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 7 ಪ್ರೊಸೆಸ್ ಸರ್ವರ್ (Process Server) ಹುದ್ದೆಗಳು ಖಾಲಿ ಇದ್ದು, SSLC ಪಾಸಾಗಿರುವ ಆಸಕ್ತರು ಆನ್​ಲೈನ್ (Online)​ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಡಿಸೆಂಬರ್ 30 ಕೊನೆಯ ದಿನಾಂಕವಾಗಿದೆ. 

ಹುದ್ದೆಯ ಮಾಹಿತಿ:
ಪ್ರೊಸೆಸ್ ಸರ್ವರ್- 07 ಹುದ್ದೆಗಳು
ಸಾಮಾನ್ಯ-3
ಪರಿಶಿಷ್ಟ ಜಾತಿ(SC)- 1
ಪ್ರವರ್ಗ 2ಎ-1
ಪ್ರವರ್ಗ 2ಬಿ- 1
ಪ್ರವರ್ಗ 3ಬಿ-1

KSMCL Recruitment 2022: ರಾಜ್ಯ ಮಿನೆರಲ್ಸ್​ ಕಾರ್ಪೊರೇಷನ್ ನಲ್ಲಿ ಇಂಜಿನಿಯರಿಂಗ್, ಐಟಿಐ ಆದವರಿಗೆ ಉದ್ಯೋಗವಕಾಶ

ವಿದ್ಯಾರ್ಹತೆ:ಶಿವಮೊಗ್ಗ ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ ಪ್ರೊಸೆಸ್ ಸರ್ವರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಬೋರ್ಡ್​/ ಶಿಕ್ಷಣ ಸಂಸ್ಥೆಯಿಂದ ಕಡ್ಡಾಯವಾಗಿ SSLC ಪಾಸಾಗಿರಬೇಕು. ಜೊತೆಗೆ ವಾಹನ ಚಾಲನೆಯ ಪರವಾನಗಿ(ಲೈಸೆನ್ಸ್​) ಇರುವವರಿಗೆ ಆದ್ಯತೆ ನೀಡಲಾಗುತ್ತದೆ.

ವಯೋಮಿತಿ:
ಸಾಮಾನ್ಯ ವರ್ಗ- 35 ವರ್ಷ
2ಎ, 2ಬಿ, 3ಎ, 3ಬಿ- 38 ವರ್ಷ
SC/ST-40 ವರ್ಷ
ವಿಧವೆಯರಿಗೆ ಹಾಗೂ ಅಂಗವಿಕಲರಿಗೆ 10 ವರ್ಷಗಳ ಸಡಿಲಿಕೆ ನೀಡಲಾಗಿದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹ 19,950-37,900 ವೇತನ ನೀಡಲಾಗುತ್ತದೆ.

NIA Recruitment 2022: ದ್ವಿತೀಯ PUC ಆದವರು ರಾಷ್ಟ್ರೀಯ ತನಿಖಾ ದಳದಲ್ಲಿನ ಕಾನ್ಸ್​​ಟೇಬಲ್ ​ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ

click me!