ಹುಬ್ಬಳ್ಳಿ ಏರ್ಪೋರ್ಟ್‌ ವಿಸ್ತರಣೆಗೆ ಕೇಂದ್ರದಿಂದ 273 ಕೋಟಿ: ಪ್ರಲ್ಹಾದ್‌ ಜೋಶಿ

By Kannadaprabha News  |  First Published Jun 11, 2023, 8:46 AM IST

ಹುಬ್ಬಳ್ಳಿ ಸೇರಿದಂತೆ ಉತ್ತರ ಕರ್ನಾಟಕದ ಜನತೆಗೆ ಇದು ಸಿಹಿ ಸುದ್ದಿ. ಇಲ್ಲಿನ ವಿಮಾನ ನಿಲ್ದಾಣವನ್ನು ಮತ್ತೆ ವಿಸ್ತರಣೆ ಮಾಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಮೇಲ್ದರ್ಜೆಗಾಗಿ 273 ಕೋಟಿ ಅನುದಾನವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು, 2024ರ ಜನವರಿಯಲ್ಲಿ ಕೆಲಸ ಪ್ರಾರಂಭವಾಗಲಿದೆ. 


ಹುಬ್ಬಳ್ಳಿ (ಜೂ.11): ಹುಬ್ಬಳ್ಳಿ ಸೇರಿದಂತೆ ಉತ್ತರ ಕರ್ನಾಟಕದ ಜನತೆಗೆ ಇದು ಸಿಹಿ ಸುದ್ದಿ. ಇಲ್ಲಿನ ವಿಮಾನ ನಿಲ್ದಾಣವನ್ನು ಮತ್ತೆ ವಿಸ್ತರಣೆ ಮಾಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಮೇಲ್ದರ್ಜೆಗಾಗಿ 273 ಕೋಟಿ ಅನುದಾನವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು, 2024ರ ಜನವರಿಯಲ್ಲಿ ಕೆಲಸ ಪ್ರಾರಂಭವಾಗಲಿದೆ. ಈ ಕುರಿತು ಕೇಂದ್ರ ಸಚಿವರೂ ಆಗಿರುವ ಸಂಸದ ಪ್ರಲ್ಹಾದ್‌ ಜೋಶಿ ಟ್ವೀಟ್‌ ಮಾಡಿ ಈ ವಿಷಯ ಹಂಚಿಕೊಂಡಿದ್ದಾರೆ. ಇದು ಹುಬ್ಬಳ್ಳಿಗರು ಸೇರಿದಂತೆ ಉತ್ತರ ಕರ್ನಾಟಕದ ಜನತೆಯಲ್ಲಿ ಸಂತಸವನ್ನುಂಟು ಮಾಡಿದೆ.

ಹುಬ್ಬಳ್ಳಿ ವಿಮಾನ ನಿಲ್ದಾಣದ ಟರ್ಮಿನಲ್‌ ಕಟ್ಟಡ ಸೇರಿದಂತೆ ಇತರ ಸೌಲಭ್ಯಗಳ ಬೃಹತ್‌ ಸುಧಾರಣೆಗಾಗಿ ಟರ್ಮಿನಲ್‌ ವಿಸ್ತರಣೆಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಳೆದ ತಿಂಗಳಷ್ಟೇ ಪ್ರಸ್ತಾವನೆ ಸಲ್ಲಿಸಿದ್ದರು. ಅದಕ್ಕೆ ಸ್ಪಂದಿಸಿರುವ ವಿಮಾನಯಾನ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಇದೀಗ ವಿಮಾನ ನಿಲ್ದಾಣ ವಿಸ್ತರಣೆ ಕೆಲಸಕ್ಕೆ ಒಪ್ಪಿಗೆ ನೀಡಿದ್ದಾರೆ. ಕೇಂದ್ರ ಸರ್ಕಾರವೂ ಇದಕ್ಕಾಗಿ .273 ಕೋಟಿ ಬಿಡುಗಡೆ ಮಾಡಿದೆ.

Tap to resize

Latest Videos

undefined

ಬಿಜೆಪಿ ಅವಧಿಯ 40% ಕಮಿಷನ್‌ ಬಗ್ಗೆ ತನಿಖೆ ಖಚಿತ: ಸಿಎಂ ಸಿದ್ದರಾಮಯ್ಯ

ಈಗೇನಿದೆ; ವಿಸ್ತರಣೆ ಏನೇನಾಗಲಿದೆ?: ಹುಬ್ಬಳ್ಳಿಯಲ್ಲಿನ ವಿಮಾನ ನಿಲ್ದಾಣದಿಂದ ಸದ್ಯ ದೇಶದ ಹತ್ತು ವಿವಿಧ ಕಡೆಗಳಲ್ಲಿ ವಿಮಾನ ಹಾರಾಟ ನಡೆಯುತ್ತದೆ. ಸದ್ಯ 3600 ಚದರ ಮೀಟರ್‌ ಇರುವ ಟರ್ಮಿನಲ್‌ ಪ್ರತಿವರ್ಷ 5 ಲಕ್ಷ ಪ್ರಯಾಣಿಕರ ನಿರ್ವಹಣೆ ಮಾಡುವ ಸಾಮರ್ಥ್ಯ ಹೊಂದಿದೆ. ಒಂದೇ ಸಮಯಕ್ಕೆ 300 ಪ್ರಯಾಣಿಕರ (150 ಆಗಮನ, 150-ನಿರ್ಗಮನ) ನಿರ್ವಹಿಸುವ ಸಾಮರ್ಥ್ಯವನ್ನು ಸದ್ಯ ಹೊಂದಿದೆ. ಇಲ್ಲಿಂದ ಬೆಂಗಳೂರ, ಚೈನ್ನೈ, ದೆಹಲಿ, ಹೈದರಾಬಾದ್‌, ಮುಂಬೈ, ಪುಣೆ ಸೇರಿದಂತೆ ವಿವಿಧೆಡೆ ವಿಮಾನಗಳು ಹಾರಾಡುತ್ತಿವೆ.

ವಿಮಾನ ನಿಲ್ದಾಣದ ವಿಸ್ತರಣೆಯಿಂದ ಟರ್ಮಿನಲ್‌ 20 ಸಾವಿರ ಚ.ಮೀ.(ನೆಲಮಹಡಿ, ಮೊದಲ ಮಹಡಿ ಸೇರಿ) ಯುಳ್ಳದಾಗಲಿದೆ. ಏಕಕಾಲಕ್ಕೆ 1400 (700 ನಿರ್ಗಮನ, 700 ಆಗಮನ)ಕ್ಕೂ ಹೆಚ್ಚು ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಲಿದೆ. 3 ಏರೋಬ್ರಿಜ್‌ ಸೇರಿದಂತೆ ಎಲ್ಲ ಆಧುನಿಕ ಸೌಲಭ್ಯಗಳೊಂದಿಗೆ ಪರಿವರ್ತಿಸುವ ಯೋಜನೆ ಇದೆ. ಈಗಿನ 2600/45 ಮಿ. ಗಾತ್ರದ ರನ್‌ವೇ ಹೆಚ್ಚಳ ಹಾಗೂ ಈಗಿರುವ ಅಪ್ರಾನ್‌ ಗಾತ್ರದ ಹೆಚ್ಚಳ ಸೇರಿದಂತೆ ಸಮಗ್ರವಾಗಿ ನಿಲ್ದಾಣದ ಅಭಿವೃದ್ಧಿ ಮಾಡಲಾಗುತ್ತದೆ. ಈಗಾಗಲೇ ವಿಸ್ತರಣೆ ಕಾಮಗಾರಿಗೆ ಬೇಕಾದ ಮಣ್ಣು ಪರೀಕ್ಷೆಗೆ ಕ್ರಮ ಕೈಗೊಳ್ಳಲಾಗಿದೆ. ಯೋಜನಾ ವರದಿ ಸಿದ್ಧಪಡಿಸಲಾಗುತ್ತಿದೆ. ಅದು ಮುಗಿದ ಬಳಿಕ ಟೆಂಡರ್‌ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.

ಜನವರಿಯಲ್ಲಿ ವಿಸ್ತರಣೆ ಕಾಮಗಾರಿಗೆ ಚಾಲನೆ ನೀಡಿ, ಎರಡು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡುವ ಗುರಿ ಕೇಂದ್ರ ಸರ್ಕಾರದ್ದು. ಈ ವಿಮಾನ ನಿಲ್ದಾಣ ವಿಸ್ತರಣೆಯಾದರೆ ಇನ್ನಷ್ಟು ವಿಮಾನಗಳು ಸೇವೆ ಆರಂಭಿಸಲು ಅನುಕೂಲವಾಗಲಿದೆ ಎಂದು ಸಚಿವ ಜೋಶಿ ತಿಳಿಸಿದ್ದಾರೆ. ಇಲ್ಲಿನ ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಕೆಲಸಕ್ಕೆ ಹಸಿರು ನಿಶಾನೆ ಸಿಕ್ಕಿರುವುದು ಉದ್ಯಮಿಗಳಲ್ಲಿ ಹರ್ಷವನ್ನುಂಟು ಮಾಡಿದೆ.

ಕೇಂದ್ರ ಸರ್ಕಾರ ಹುಬ್ಬಳ್ಳಿ ವಿಮಾನ ನಿಲ್ದಾಣದ ವಿಸ್ತರಣೆಗೆ ಒಪ್ಪಿಗೆ ನೀಡಿದೆ. ಕೆಲಸ ಜನವರಿಯಿಂದ ಪ್ರಾರಂಭವಾಗಲಿದೆ. 2 ವರ್ಷದಲ್ಲಿ ಪೂರ್ಣಗೊಳಿಸುವ ಗುರಿ ಇದೆ. ಇದರಿಂದ ಅತ್ಯಾಧುನಿಕ ಸೌಲಭ್ಯಗಳು ಪ್ರಯಾಣಿಕರಿಗೆ ದೊರೆಯಲಿವೆ.
- ಪ್ರಮೋದ ಠಾಕ್ರೆ, ನಿರ್ದೇಶಕರು, ವಿಮಾನ ನಿಲ್ದಾಣ, ಹುಬ್ಬಳ್ಳಿ

ಉನ್ನತ ಶಿಕ್ಷಣಕ್ಕೆ ಹೊಸ ರೂಪ, ಉದ್ಯೋಗಾಧಾರಿತ ಪಠ್ಯಕ್ರಮ ಅಳವಡಿಕೆ: ಸಚಿವ ಸುಧಾಕರ್‌

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಏನೇನು ಸುಧಾರಣೆಯಾಗಬೇಕೆಂಬ ಬಗ್ಗೆ ಕಳೆದ ತಿಂಗಳಷ್ಟೇ ಪ್ರಸ್ತಾವನೆ ಸಲ್ಲಿಸಿದ್ದೆ. ಅದಕ್ಕೆ ಸ್ಪಂದಿಸಿ ಒಪ್ಪಿಗೆ ನೀಡಿ ಹಣ ಬಿಡುಗಡೆ ಮಾಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ, ವಿಮಾನಯಾನ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಅವರಿಗೆ ಧನ್ಯವಾದಗಳು.
- ಪ್ರಲ್ಹಾದ್‌ ಜೋಶಿ, ಕೇಂದ್ರ ಸಚಿವರು

click me!