ಹೊಸ ಸರ್ಕಾರ ಬರ್ತಿದ್ದಂಗೆ ಪೊಲೀಸ್ ಇಲಾಖೆಗೆ ಆನೆ ಬಲ: 2 ಹಂತಗಳಲ್ಲಿ 2454 ಹುದ್ದೆಗಳ ನೇಮಕ

By Govindaraj SFirst Published Jun 7, 2023, 9:01 AM IST
Highlights

ಕರ್ನಾಟಕದಲ್ಲಿ ಹೊಸ ಸರ್ಕಾರ ಬರ್ತಿದ್ದಂಗೆ ಪೊಲೀಸ್ ಇಲಾಖೆಗೆ ಆನೆ ಬಲ ಬಂದಿದ್ದು, ಅಪರಾಧ ಕೃತ್ಯಕ್ಕೆ ಕಡಿವಾಣ ಹಾಕಲು‌ ಸರ್ಕಾರ ಸಜ್ಜಾಗಿದೆ. ಈ ಹಿನ್ನಲೆಯಲ್ಲಿ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಒಟ್ಟು 2454 ಹುದ್ದೆಗಳನ್ನು 2 ಹಂತದಲ್ಲಿ ಹೊಸದಾಗಿ ಸೃಜಿಸಿ ನೇಮಕ ಮಾಡಿಕೊಳ್ಳಲು ಆರ್ಥಿಕ ಇಲಾಖೆಯು ಅನುಮತಿ ನೀಡಿ ಆದೇಶಿಸಿದೆ. 

ಬೆಂಗಳೂರು (ಜೂ.07): ಕರ್ನಾಟಕದಲ್ಲಿ ಹೊಸ ಸರ್ಕಾರ ಬರ್ತಿದ್ದಂಗೆ ಪೊಲೀಸ್ ಇಲಾಖೆಗೆ ಆನೆ ಬಲ ಬಂದಿದ್ದು, ಅಪರಾಧ ಕೃತ್ಯಕ್ಕೆ ಕಡಿವಾಣ ಹಾಕಲು‌ ಸರ್ಕಾರ ಸಜ್ಜಾಗಿದೆ. ಈ ಹಿನ್ನಲೆಯಲ್ಲಿ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಒಟ್ಟು 2454 ಹುದ್ದೆಗಳನ್ನು 2 ಹಂತದಲ್ಲಿ ಹೊಸದಾಗಿ ಸೃಜಿಸಿ ನೇಮಕ ಮಾಡಿಕೊಳ್ಳಲು ಆರ್ಥಿಕ ಇಲಾಖೆಯು ಅನುಮತಿ ನೀಡಿ ಆದೇಶಿಸಿದೆ. ಪ್ರಮುಖವಾಗಿ ಸಿಸಿಬಿಯ ಸಿಬ್ಬಂದಿ ಸಂಖ್ಯೆಯನ್ನ ದುಪ್ಪಟ್ಟು ಮಾಡಲು ಸರ್ಕಾರ ಆದೇಶಿಸಿದ್ದು, ಓರ್ವ ಎಸಿಪಿ, 10 ಇನ್ಸ್‌ಪೆಕ್ಟರ್, 6 ಸಬ್ ಇನ್ಸ್‌ಪೆಕ್ಟರ್, 26 ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್, 46 ಹೆಡ್ ಕಾನ್ಸ್‌ಟೇಬಲ್, 142 ಕಾನ್ಸ್‌ಟೇಬಲ್ ಸಹಿತ 231 ಸಿಬ್ಬಂದಿ ನೇಮಕ ಜೊತೆಗೆ  ಎರಡು ನೂತನ ಸಂಚಾರ ಠಾಣೆಗಳು ಆರಂಭ ಮಾಡಲು ಆದೇಶಿಸಿದೆ. 

ಸಂಚಾರ ಠಾಣೆಗೆ ಇನ್ಸ್‌ಪೆಕ್ಟರ್, 12 ಸಬ್ ಇನ್ಸ್ಪೆಕ್ಟರ್, 24 ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್, 44 ಹೆಡ್ ಕಾನ್ಸ್‌ಟೇಬಲ್, 88 ಕಾನ್ಸ್‌ಟೇಬಲ್ ಸಹಿತ 170 ಸಿಬ್ಬಂದಿಗಳ ನೇಮಕ ಹಾಗೂ ಡಿವಿಷನ್‌ಗೆ ಒಂದರಂತೆ ಮಹಿಳಾ ಠಾಣೆ ನಿರ್ಮಿಸಲು ಆದೇಶಿಸಲಾಗಿದೆ. ಸದ್ಯ ಸಿಟಿಯಲ್ಲಿರುವುದು ಎರಡು ಮಹಿಳಾ ಠಾಣೆ ಇದೆ. ಮಹಿಳಾ ಠಾಣೆಗೆ ಆರು ಇನ್ಸ್‌ಪೆಕ್ಟರ್, 24 ಸಬ್ ಇನ್ಸ್‌ಪೆಕ್ಟರ್, 24 ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್, 48 ಹೆಡ್ ಕಾನ್ಸ್‌ಟೇಬಲ್, 144 ಕಾನ್ಸ್‌ಟೇಬಲ್ ಸಹಿತ ಒಟ್ಟು 246 ಸಿಬ್ಬಂದಿ, ಸಿಇಎನ್ ಠಾಣೆಗಳಿಗೆ 16 ಸಬ್ ಇನ್ಸ್‌ಪೆಕ್ಟರ್, 24 ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್, 48 ಹೆಡ್ ಕಾನ್ಸ್‌ಟೇಬಲ್, 116 ಕಾನ್ಸ್‌ಟೇಬಲ್ ಸಹಿತ ಒಟ್ಟು 204 ಸಿಬ್ಬಂದಿ ಜೊತೆಗೆ ಸೈಬರ್ ಕ್ರೈಂ ಠಾಣೆಗಳಿಗೆ ಓರ್ವ ಎಸಿಪಿ, ಇಬ್ಬರು ಇನ್ಸ್‌ಪೆಕ್ಟರ್,  4 ಸಬ್ ಇನ್ಸ್‌ಪೆಕ್ಟರ್, 4 ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್, 8 ಹೆಡ್ ಕಾನ್ಸ್‌ಟೇಬಲ್, 16 ಕಾನ್ಸ್‌ಟೇಬಲ್ ಸಹಿತ ಒಟ್ಟು 35 ಜನ ಸಿಬ್ಬಂದಿ ಮಾಡಲು ಆದೇಶಿಸಿದೆ. 

ಜೋಯಿಡಾದಲ್ಲಿ ಕೊಂಕಣಿ ಕಲಿತ ರಿಷಬ್‌ ಶೆಟ್ಟಿ: ಕುಣಬಿ ಜನರ ಜತೆ ಭಾಷಾಭ್ಯಾಸ

ಜಿಪಿಟಿ ನೇಮಕಾತಿ ಆದೇಶಕ್ಕೆ ಆಕಾಂಕ್ಷಿಗಳ ಒತ್ತಾಯ: ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಅಂತಿಮ ಆಯ್ಕೆ ಪಟ್ಟಿಪ್ರಕಟಿಸಲಾಗಿದ್ದು, ಕೂಡಲೇ ಆದೇಶ ಪತ್ರ ನೀಡುವಂತೆ ಒತ್ತಾಯಿಸಿ ಉದ್ಯೋಗ ಆಕಾಂಕ್ಷಿಗಳು ತಹಸೀಲ್ದಾರ್‌ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಪತ್ರ ಸಲ್ಲಿಸಿದರು. ಪಟ್ಟಣದ ಮಿನಿ ವಿಧಾನಸೌಧದಲ್ಲಿ ಜಮಾಯಿಸಿದ ಆಕಾಂಕ್ಷಿಗಳು ಮಾತನಾಡಿ, ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ 6-8 ನೇಮಕಾತಿ 2022ರ ಅಂತಿಮ ಆಯ್ಕೆ ಪಟ್ಟಿಪ್ರಕಟಿಸಿ ಅನೇಕ ತಿಂಗಳು ಕಳೆದಿವೆ. ಆದರೆ, ಮುಂದಿನ ಹಂತದ ಕೌನ್ಸೆಲಿಂಗ್‌ ದಿನಾಂಕ ಪ್ರಕಟ ಹಾಗೂ ಆದೇಶ ಪತ್ರ ನೀಡುವಲ್ಲಿ ವಿನಾಕಾರಣ ವಿಳಂಬ ನೀತಿ ಅನುಸರಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಧ್ವನಿ ಇಲ್ಲದವರಿಗೆ ಧ್ವನಿ ನೀಡಿದ ಅರಸು ಎಲ್ಲರಿಗೂ ಮಾದರಿ: ಸಿದ್ದರಾಮಯ್ಯ

ಕಲ್ಯಾಣ ಕರ್ನಾಟಕ ಭಾಗದಲ್ಲಿ ಹಲವು ವರ್ಷಗಳಿಂದ ಸಾವಿರಾರು ಹುದ್ದೆಗಳು ಖಾಲಿಯಿದ್ದು, ಮಕ್ಕಳ ಕಲಿಕೆಗೆ ತೊಂದರೆಯಾಗುತ್ತಿದ್ದರೂ ಸಂಬಂಧಪಟ್ಟಅಧಿಕಾರಿಗಳು ಮಾತ್ರ ಇದರ ಬಗ್ಗೆ ಗಂಭೀರವಾಗಿಲ್ಲ. ಸರ್ಕಾರ ಈ ಕೂಡಲೇ ಅಗತ್ಯ ಕ್ರಮ ವಹಿಸುವಂತೆ ಆಗ್ರಹಿಸಿದ್ದಾರೆ. ಮುಖ್ಯಮಂತ್ರಿಗೆ ಬರೆದ ಮನವಿಪತ್ರ ಶಿರಸ್ತೇದಾರ್‌ ಶ್ರೀದೇವಿ ನವಾಡೆಗೆ ಸಲ್ಲಿಸಿದರು. ಈ ವೇಳೆ ಪ್ರಮುಖರಾದ ರವಿ ಡೋಳೆ, ಉಮೇಶ ಧನೆ, ಶ್ರದ್ಧಾ ಕಲ್ಯಾಣರಾವ, ಪೂಜಾ ಕಲ್ಯಾಣರಾವ, ಶಿವಾಜಿ, ಭೂಷಣ, ಅಮೂಲ್‌ ಮರಪಳ್ಳಿ, ಬಸವರಾಜ ಸ್ವಾಮಿ, ಮಿಲಿಂದ ಕಾಂಬಳೆ, ನಾಗೇಶ ಸೇರಿದಂತೆ ಇನ್ನಿತರರಿದ್ದರು.

click me!