ರಾಜ್ಯದ ಸರ್ಕಾರಿ ಆಸ್ಪತ್ರೆಗಳಿಗೆ ಆಂಬುಲೆನ್ಸ್ ಚಾಲಕರನ್ನ ನೇಮಕ ಮಾಡಿಕೊಳ್ಳುತ್ತಿರು ಆರೋಗ್ಯ ಇಲಾಖೆ 51 ಡಿ ಗ್ರೂಪ್ ನೌಕರರಿಗೆ ಪದೋನ್ನತಿಯಾಗಿ ಚಾಲಕರ ಹುದ್ದೆ ನೀಡಿ ಆದೇಶ ಹೊರಡಿಸಿದೆ.
ವರದಿ-ನಂದೀಶ್ ಮಲ್ಲೇನಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಬೆಂಗಳೂರು (ಜೂ.06): ಸರ್ಕಾರಿ ಆಸ್ಪತ್ರೆಗಳಿಗೆ ಆಂಬುಲೆನ್ಸ್ ಚಾಲಕರನ್ನ ನೇಮಕ ಮಾಡಿಕೊಳ್ಳಲು ಆರೋಗ್ಯ ಇಲಾಖೆ ಮುಂದಾಗಿದೆ. ಈಗಾಗಲೇ ಆರೋಗ್ಯ ಇಲಾಖೆ ಕೆಲಸ ನಿರ್ವಹಿಸುತ್ತಿರುವ ಡಿ ಗ್ರೂಪ್ ನೌಕರರು ಸುಮಾರು 51 ಜನರಿಗೆ ಪದೋನ್ನತಿಯಾಗಿ ಚಾಲಕರ ಹುದ್ಧಗೆ ನೇಮಕಾತಿ ಮಾಡಿಕೊಳ್ಳಲು ಆದೇಶ ಹೊರಡಿಸಿದೆ.
undefined
ರಾಜ್ಯ ಸರ್ಕಾರ ನೇಮಕಾತಿ ನಿಯಮಗಳನ್ನು ಗಾಳಿಗೆ ತೂರಿ ಡಿ ಗ್ರೂಪ್ ನಿಂದ ಸಿ ಗ್ರೂಪ್ ಗೆ ಬಡ್ತಿ( ವಾಹನ ಚಾಲನೆ) ಮೂಲಕ 51 ಜನ ಚಾಲಕರಾಗಿ ನೇಮಕ ಮಾಡಿಕೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕರೆದಿರುವ ಚಾಲಕರ ಪದೋನ್ನತಿ ನೇಮಕಾತಿ ಡ್ರೈವಿಂಗ್ ಲೈಸೆನ್ಸ್ ಹೊಂದಿರುವ ನೌಕರರಿಗೆ ಚಾಲಕರಾಗಿ ಪದೋನ್ನತಿ ಕೊಡಲಾಗುತ್ತಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಗಮನಕ್ಕೂ ತರಾದೆ ತರಾತುರಿಯಲ್ಲಿ ನೇಮಕ ಪ್ರಕ್ರಿಯೆ ಮಾಡಲು ಆರೋಗ್ಯ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ ಎನ್ನಲಾಗಿದೆ.ಜೂನ್ 1 ರಂದು ಆದೇಶ ಹೊರಡಿಸಿ ಜೂನ್ 6 ರಂದು ಬೆಳಿಗ್ಗೆ ಕೇಂದ್ರೀಯ ಕಾರ್ಯಗಾರ ಮಾಗಡಿ ರಸ್ತೆಯಲ್ಲಿರುವ ವಾಹನ ಚಾಲನಾ ಕಚೇರಿಯಲ್ಲಿ ವಾಹನ ಚಾಲನೆ ಪರೀಕ್ಷೆಯನ್ನ ನಡೆಸಿದ್ದಾರೆ.
ಸರ್ಕಾರಿ ವಕೀಲರ ನೇಮಕಾತಿ ಅಕ್ರಮವನ್ನು ಇಲಾಖಾ ತನಿಖೆಗೆ ಆದೇಶಿಸಿದ ಸಿಎಂ ಸಿದ್ದರಾಮಯ್ಯ
ಡ್ರೈವಿಂಗ್ ಬರದಿದ್ದರೂ ಪದೋನ್ನತಿ ನೀಡಿ ಎಡವಟ್ಟು: ಇನ್ನು ಆರೋಗ್ಯ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಚಾಲಕರಾಗಿ ಪದೋನ್ನತಿ ಹೊಂದಿದ ಡಿ ಗ್ರೂಪ್ ನೌಕರರ ಪೈಕಿ ಬಹುತೇಕರಿಗೆ ಸರಿಯಾಗಿ ಡ್ರೈವಿಂಗ್ ಬರೋದಿಲ್ಲ. ಅಂತವರಿಗೆ ಡಿ ಗ್ರೂಪ್ ನಿಂದ ಸಿ ಗ್ರೂಪ್ ಬಡ್ತಿ ಪಡೆಯಲು ಚಾಲಕರಾಗಿ ಸೇರ್ಪಡೆಗೊಳ್ಳುತ್ತಿದ್ದಾರೆ. ಇದು ಸರಿಯಲ್ಲ ಆಲ್ಲದೆ ಆರೋಗ್ಯ ಇಲಾಖೆ ಕೊಟ್ಟಿರುವ ಮಾನದಂಡಗಳನ್ನ ಪಾಲನೆ ಮಾಡದೇ ಅಧಿಕಾರಿಗಳು ನೇಮಕ ಮಾಡಿಕೊಳ್ಳುತ್ತಿರೋದು ಸರಿಯಲ್ಲ ಅಂತ ಸಾಮಾಜಿಕ ಕಾರ್ಯಕರ್ತ ತಾಯ್ನಡು ರಾಘವೇಂದ್ರ ಆರೋಪ ಮಾಡಿದ್ದಾರೆ.ಆಲ್ಲದೆ ಹುದ್ದೆ ನೇಮಕದಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಸಂಶಯ ವ್ಯಕ್ತವಾಗಿದ್ದು, ಲೋಕಾಯುಕ್ತಕ್ಕೆ ದೂರು ನೀಡುವುದಾಗಿ ಸಾಮಾಜಿಕ ಹೋರಾಟಗಾರ ತಾಯ್ನಡು ರಾಘವೇಂದ್ರ ಹೇಳಿದ್ದಾರೆ.
ವಾಹನ ಚಾಲಕರ ಪದೋನ್ನತಿ ನೇಮಕಾತಿಗೆ ಇಲಾಖೆ ಅನುಸರಿಸುವ ಮಾನದಂಡಗಳೇನು?:
SSLC ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು ಹಾಗೂ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದಿರುವ ಸಂಸ್ಥೆಯಲ್ಲಿ ಲಘು ವಾಹನ ಚಾಲನೆ ಪರವಾನಗಿಯೊಂದಿಗೆ, ಪ್ಯಾಸೆಂಜರ್ ವಾಹನ ಚಾಲನೆ ಪರವಾನಗಿ ಹೊಂದಿರಬೇಕು. ರಾಜ್ಯ ಸರ್ಕಾರ ಹಾಗೂ ಮಾನ್ಯತೆ ಹೊಂದಿರುವ ಸಂಸ್ಥೆಗಳಲ್ಲಿ ಎರಡು ವರ್ಷ ಚಾಲನೆ ತರಬೇತಿ ಹಾಗೂ ಕನಿಷ್ಠ ಎರಡು ವರ್ಷ ಚಾಲನೆಯಲ್ಲಿ ಅನುಭವ ಹೊಂದಿರಬೇಕು.
ಮನೆ ಯಜಮಾನಿಗೆ 2 ಸಾವಿರ ರೂ. ನೀಡುವ ಗೃಹಲಕ್ಷ್ಮೀ ಯೋಜನೆಗೆ ಕಂಡಿಷನ್ ಹಾಕಿದ ಕಾಂಗ್ರೆಸ್
ಇಲಾಖೆ ಪರಗಣಿಸಬೇಕಾದ ಆಯ್ಕೆ ವಿಧಾನ: SSLC ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಗಳಿಸಿದ ಶೇಕಡಾ ವಾರು ಅಂಕಗಳ ಅರ್ಹತೆ ಆಧಾರದ ಮೇಲೆ ಮೂಲ ದಾಖಲಾತಿ ಪರೀಕ್ಷೆ ನಡೆಸಬೇಕು. ನೇಮಕಾತಿ ಪ್ರಾಧಿಕಾರ ಸೂಕ್ತ ಪ್ರಾಧಿಕಾರದಿಂದ ವಾಹನ ಚಾಲನಾ ಸಾಮರ್ಥ್ಯದ ಬಗ್ಗೆ ಗಣಕೀಕೃತ ಟ್ರ್ಯಾಕ್ ನಲ್ಲಿ ನಡೆಸುವ ಚಾಲನಾ ವೃತ್ತಿಪರೀಕ್ಷೆಯಲ್ಲಿ ಪಾಸ್ ಆಗಬೇಕು. ನಂತರ ಆರ್ಹತೆ ಆಧಾರದ ಮೇಲೆ ಚಾಲಕರ ಹುದ್ದೆಗೆ ಆಯ್ಕೆ ಮಾಡಲಾಗುತ್ತೆ. ಈ ನಿಯಮಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿರುವ ಆರೋಗ್ಯ ಇಲಾಖೆ ತರಾತುರಿಯಲ್ಲಿ ಪದೋನ್ನತಿ ಪ್ರಕ್ರಿಯೆ ಯನ್ನ ಆಯುಕ್ತರ ಗಮನಕ್ಕೆ ತರಾದೆ ನೇಮಕಾತಿ ಮಾಡಿಕೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ.ಈ ಬಗ್ಗೆ ತನಿಖೆ ನಡೆಯಬೇಕೆಂದು ಸಾಮಾಜಿಕ ಹೋರಾಟಗಾರ ತಾಯ್ನಡು ರಾಘವೇಂದ್ರ ಒತ್ತಾಯಿಸಿದ್ದಾರೆ.