ಕೆನಡಾದಲ್ಲಿ ನಡೆಯುತ್ತಿರುವ ಗ್ಲೋಬಲ್ ಟಿ20 ಲೀಗ್ ಟೂರ್ನಿಗೆ ಹಣಕಾಸಿನ ಸಮಸ್ಯೆ ಎದುರಾಗಿದೆಯಾ..? ಹೌದು ಎನ್ನುತ್ತಿವೆ ಕೆಲವೊಂದು ವರದಿಗಳು, ಪರಿಣಾಮ ಕೆಲ ಆಟಗಾರರು ಪಂದ್ಯದಲ್ಲಿ ಕಣಕ್ಕಿಳಿಯಲು ಹಿಂದೇಟು ಹಾಕಿದರು ಎನ್ನುತ್ತಿವೆ ಸುದ್ದಿ ಮೂಲಗಳು. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಕೆನಡಾ(ಆ.09): ಫ್ರಾಂಚೈಸಿ ಟಿ20 ಲೀಗ್‌ಗಳನ್ನು ನಡೆಸುವ ಭರದಲ್ಲಿ ಕ್ರಿಕೆಟ್ ಸಂಸ್ಥೆಗಳು ಎಡವಟ್ಟು ಮಾಡುತ್ತಿವೆ ಎನ್ನುವುದಕ್ಕೆ ಮತ್ತೊಂದು ಉದಾಹರಣೆ ಸಿಕ್ಕಿದೆ.
ಕೆನಡಾ ಟಿ20 ಲೀಗ್; ಯುವಿ ಘರ್ಜನೆಗೆ ಅಭಿಮಾನಿಗಳ ಶ್ಲಾಘನೆ!
ಕೆನಡಾದ ಗ್ಲೋಬಲ್ ಟಿ20 ಲೀಗ್‌ನಲ್ಲಿ ಬುಧವಾರ, ತಂಡದ ಮಾಲೀಕರು ಬಾಕಿ ಇರುವ ವೇತನ ಪಾವತಿಸದ ಕಾರಣ, ಯುವರಾಜ್ ಸಿಂಗ್ ನೇತೃತ್ವದ ಟೊರೊಂಟೋ ನ್ಯಾಷನಲ್ಸ್ ಹಾಗೂ ಜಾರ್ಜ್ ಬೈಲಿ ನೇತೃತ್ವದ ಮಾಂಟ್ರಿಯಲ್ ಟೈಗರ್ಸ್ ತಂಡದ ಆಟಗಾರರು ಪ್ರತಿಭಟಿಸಿದರು. ಹೋಟೆಲ್‌ನಿಂದ ಕ್ರೀಡಾಂಗಣಕ್ಕೆ ತೆರಳಲು ಆಟಗಾರರು ನಿರಾಕರಿಸಿದ ಕಾರಣ ಪಂದ್ಯ 2 ಗಂಟೆ ತಡವಾಯಿತು.
ಮತ್ತೆ ಭುಗಿಲೆದ್ದಿದೆ ಫಿಕ್ಸಿಂಗ್; ಲಿಸ್ಟ್‌ನಲ್ಲಿ ಪಾಕ್ ಕ್ರಿಕೆಟಿಗರ ಹೆಸರು!
ಆಯೋಜಕರು, ಮಾಲೀಕರು ಸೇರಿದಂತೆ ಸಂಬಂಧಪಟ್ಟವರು ಸಭೆ ಸೇರಿ ಚರ್ಚಿಸಿ ವೇತನ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ಬಳಿಕ ಆಟಗಾರರು ಮೈದಾನಕ್ಕೆ ತೆರಳಿದರು. ಯುವರಾಜ್ ಪಂದ್ಯದಿಂದ ಹೊರಗುಳಿದರು.
ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ